ಅಂಬರೀಶ್ ಇದ್ದಾಗ ಕೈ-ಕಾಲು ಕಟ್ಟಿಕೊಂಡು ಮಾತಾಡುತ್ತಿದ್ದರು.. ಇಂದು..? ರಾಕ್​ಲೈನ್ ಕೆಂಡ

ಅಂಬರೀಶ್ ಇದ್ದಾಗ ಕೈ-ಕಾಲು ಕಟ್ಟಿಕೊಂಡು ಮಾತಾಡುತ್ತಿದ್ದರು.. ಇಂದು..? ರಾಕ್​ಲೈನ್ ಕೆಂಡ

ಬೆಂಗಳೂರು: ದಿವಂಗತ ರೆಬಲ್ ಸ್ಟಾರ್ ಅಂಬರೀಶ್ ವಿರುದ್ಧ ಹೆಚ್.​​ಡಿ. ಕುಮಾರಸ್ವಾಮಿ ಹೇಳಿಕೆಗೆ ಇಂದು ನಿರ್ಮಾಪಕ ರಾಕ್​ಲೈನ್ ವೆಂಕಟೇಶ್​ ತಿರುಗೇಟು ನೀಡಿದರು.

ಮಾಧ್ಯಮಗಳ ಜೊತೆ ಮಾತನಾಡಿದ ಅವರು.. ಅಂಬರೀಶ್ ಬಗ್ಗೆ ಯಾರಿಗೂ ಹೇಳಬೇಕಾಗಿಲ್ಲ, ಎಲ್ಲರಿಗೂ ಅವರ ವ್ಯಕ್ತಿತ್ವ ಗೊತ್ತು. ಅಂಬರೀಶ್ ಇದ್ದಾಗ ಕೈಕಾಲು ಕಟ್ಟಿ ನಿಂತು ಅವತ್ತು ಯಾವ ಟೋನ್​​ನಲ್ಲಿ ಮಾತನಾಡುತ್ತಿದ್ದರು. 00.5 ವಾಲ್ಯೂಮ್​ನಲ್ಲಿ ಮಾತನಾಡುತ್ತಿದ್ದರು. ಇಂದು ಅವರ ವಾಲ್ಯೂಮ್ ಬೇರೆಯಾಗಿದೆ. ಸತ್ತವರ ಮೇಲೆ ಒಬ್ಬ ವ್ಯಕ್ತಿಯನ್ನ ಹೀಯಾಳಿಸೋದು ಬೇಡ. ನೀವು ಸ್ನೇಹಿತ ಅಂತೀರಾ? ನಿಮ್ಮ ಪಕ್ಷದ ಇತರೆ ಸದಸ್ಯರ ಜೊತೆ ಬಯ್ಯಿಸುತ್ತೀರಾ ಎಂದರು.

ಇದನ್ನೂ ಓದಿ: ಪ್ರತಾಪ್ ಸಿಂಹ ಇದಕ್ಕೆ ಮೊದಲು ಆನ್ಸರ್ ಮಾಡಲಿ, ನಂತ್ರ ಮಂಡ್ಯ ವಿಷಯಕ್ಕೆ ಬನ್ನಿ’ -ಸುಮಲತಾ

ಅವಮಾನ ಮಾಡಿದರು
ಸ್ಮಾರಕದ ನಿರ್ಮಾಣದಲ್ಲಿ ನನ್ನದೂ ದುಡಿಮೆ ಇದೆ ಎಂದು ಹೇಳಿದ್ದೀರಿ. ಸತ್ಯ ಏನು ಅನ್ನೋದು ಜನರಿಗೆ ಗೊತ್ತಿದೆ. ಇವ್ರು ಸಿಎಂ ಆಗಿದ್ದಾಗ, ಸ್ಮಾರಕ ವಿಚಾರಕ್ಕೆ ವಿಧಾನಸೌಧಕ್ಕೆ ಹೋದಾಗ ಹಿರಿಯ ನಟ ದೊಡ್ಡಣ್ಣಗೆ ಅವಮಾನ ಮಾಡಿ ಕಳುಹಿಸಿದ್ರಿ ಅಂತ ಕೂಡ ರಾಕ್​ಲೈನ್ ವೆಂಕಟೇಶ್ ಆರೋಪಿಸಿದ್ರು. ದೊಡ್ಡಣ್ಣರನ್ನ ಸತತ 2 ಗಂಟೆಗಳ ಕಾಲ ಕಾಯಿಸಿದ್ದೀರಿ. ಬಳಿಕ ದೊಡ್ಡಣ್ಣ ನೀಡಿದ ಮನವಿಯನ್ನ ಅವರ ಮುಖದ ಮೇಲೆ ಬಿಸಾಕಿದ್ದೀರಿ. ಇದರಿಂದ ನೊಂದ ಹಿರಿಯ ಕಲಾವಿದ ಅಳುತ್ತಾ ಕೂತಿದ್ದರು ಎಂದು ಎಚ್​ಡಿಕೆ ವಿರುದ್ಧ ರಾಕ್​​ಲೈನ್​​​ ಕಿಡಿಕಾರಿದರು.

blank

ನೀವು ಅಂಬರೀಶ್ ಅವರಿಗೆ ಏನೂ ಮಾಡಿಲ್ಲ. ಅಂಬರೀಶ್ ಅವರಿಂದ ನೀವು ಏನು ಲಾಭ ಪಡೆದುಕೊಂಡಿದ್ದೀರಿ ಅದನ್ನ ನೆನಪು ಇಟ್ಟುಕೊಳ್ಳಿ. ನಿಮಗೆ ನಿಮ್ಮ ಮಗನನ್ನ ಸೋಲಿಸಿಬಿಟ್ಟರು ಎಂದು ಸುಮಲತಾ ಮೇಲೆ ಕೋಪ. ರಾಜಕೀಯ ಬಗ್ಗೆ ನಾನು ಮಾತನಾಡಲು ಹೋಗೋದಿಲ್ಲ ಎಂದು ಗುಡುಗಿದರು.

The post ಅಂಬರೀಶ್ ಇದ್ದಾಗ ಕೈ-ಕಾಲು ಕಟ್ಟಿಕೊಂಡು ಮಾತಾಡುತ್ತಿದ್ದರು.. ಇಂದು..? ರಾಕ್​ಲೈನ್ ಕೆಂಡ appeared first on News First Kannada.

Source: newsfirstlive.com

Source link