ನಮ್ಮ ತಂದೆಯ ಸಾವನ್ನು ರಾಜಕೀಯ ಮಾಡಬೇಡಿ: ಅಭಿಷೇಕ್ ಅಂಬರೀಶ್

ಮಂಡ್ಯ: ಕೆಆರ್‍ಎಸ್ ವಿಚಾರವಾಗಿ ಸುಮಲತಾ ಹಾಗೂ ಮಾಜಿ ಸಿಎಂ ಹೆಚ್‍ಡಿ ಕುಮಾರಸ್ವಾಮಿ ಫೈಟ್ ಜೋರಾಗುತ್ತಿದ್ದಂತೆ, ರಾಜಕೀಯವಾಗಿ ಕೆಲಸ ಕಾರ್ಯಗಳನ್ನು ವಿರೋಧ ಮಾಡಿ. ಆದರೆ ವೈಯಕ್ತಿಕ ವಿಚಾರಗಳಿಗೆ ಬರಬೇಡಿ. ನಮ್ಮ ತಂದೆಯ ಸಾವನ್ನು ರಾಜಕೀಯ ಮಾಡಬೇಡಿ. ನನಗೆ ಮಗನಾಗಿ ನೋವಾಗುತ್ತದೆ ಎಂದು ಅಂಬರೀಶ್ ಪುತ್ರ ನಟ ಅಭೀಷೇಕ್ ಅಂಬರೀಶ್ ನೋವನ್ನು ಹೇಳಿಕೊಂಡಿದ್ದಾರೆ.

ಮಂಡ್ಯದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅಭಿಷೇಕ್ ಅಂಬರೀಶ್, ಒಬ್ಬ ಮಗನಾಗಿ ತಂದೆಯ ಸಾವಿನ ವಿಚಾರವನ್ನು ರಾಜಕೀಯ ಮಾಡುತ್ತಿರುವುದನ್ನು ನೋಡಿ ನನಗೆ ನೋವಾಗುತ್ತಿದೆ. ತಂದೆ ಮೃತಪಟ್ಟಾಗ ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿದ್ದರು. ಅವರು ಏನು ಹೇಳಿದ್ದರು ಎಂಬುದು ದಾಖಲೆ ಇದೆ. ಪದೇ ಪದೇ ನನ್ನ ತಂದೆಯ ಸಾವಿನ ವಿಚಾರ ತರಬೇಡಿ ಎಂದು ಹೆಚ್‍ಡಿಕೆಗೆ ಅಭಿಷೇಕ್ ಟಾಂಗ್ ನೀಡಿದ್ದಾರೆ.  ಇದನ್ನೂ ಓದಿ: ಅಂಬರೀಶ್ ಹೆಸರು ಹೇಳಲು ಯೋಗ್ಯತೆ ಇಲ್ಲದವರು ಅವ್ರ ಹೆಸರು ಬಳಸ್ತಿದ್ದೀರಿ: ಸುಮಲತಾ ಕಿಡಿ

ತಂದೆಯ ಸಾವಿನ ವಿಚಾರವಾಗಿ ಮತ್ತೆ ಮತ್ತೆ ಮಾತಾಡೋದು ಸರಿ ಹೋಗಲ್ಲ. ಅಕ್ರಮ ಗಣಿಗಾರಿಕೆ ಧ್ವನಿ ಎತ್ತಿದ್ದು ತಪ್ಪಾ? ನವೆಂಬರ್ 24, 2018 ಏನು ಮಾತಾಡಿದ್ರು ನೀವೇ ನೋಡಿ. ನಿಮ್ಮ ಮನೆಯಲ್ಲಿ ಯಾರನ್ನಾದರು ಕಳೆದುಕೊಂಡಾಗ ಮನೆಯವರು ಮಾತಾಡೋ ಪರಿಸ್ಥಿತಿಯಲ್ಲಿ ಇರ್ತಾರಾ? ಅವತ್ತು ನಮ್ಮಮ್ಮ ಗಂಡನನ್ನು ಕಳೆದುಕೊಂಡ ನೋವಿನಲ್ಲಿದ್ದರು. ಏನೂ ಮಾತಾಡಿಲ್ಲ ಅವತ್ತು. ಯಾಕೆ ಅವರು ನಮ್ಮನ್ನು ವಿರೋಧಿಸುತ್ತಿದ್ದಾರೆ ಅವರ ಮನಸ್ಸಲ್ಲಿ ಏನಿದೆ ನನಗೆ ಗೊತ್ತಿಲ್ಲ. ಅಕ್ರಮದ ಬಗ್ಗೆ ಮಾತಾಡೋದು ನಟೋರಿಯಸ್ ಆದರೆ ನಾವು ನಟೋರಿಯಸ್ ಹೌದು ಎಂದು ಹೆಚ್‍ಡಿಕೆ ವಿರುದ್ಧ ಕಿಡಿಕಾರಿದರು.

ನಾನು ಕ್ಷೇತ್ರ ಅಂತ ಹೋಗಲ್ಲ, ಮಂಡ್ಯ ಅಂತ ಹೋಗ್ತೀನಿ. ನಮ್ಮಮ್ಮ ಮಾಡ್ತೀನಿ ಅಂತ ಮನಸ್ಸು ಮಾಡೋ ತನಕ ಬಿಡಲ್ಲ. ಚುನಾವಣೆ ನಿಂತರು, ಚುನಾವಣೆಯನ್ನು ಚೆನ್ನಾಗಿ ಎದುರಿಸದರು. ಛಲದಿಂದ ಕೆಲಸ ಮಾಡಿ ಗೆದ್ದರು. ನಮ್ಮ ಎಂಪಿ ಆಫೀಸ್ ಯಾವಾಗಲೂ ತೆರೆದಿರುತ್ತದೆ. ಒಂದು ವಾಟ್ಸಪ್ ಮಾಡಿದ್ರು ಸಾಕು ನಮ್ಮ ಎಂಪಿ ಸ್ವತಃ ತಾವೇ ರಿಪ್ಲೈ ಮಾಡ್ತಾರೆ. ವಿರೋಧ ಪಕ್ಷದ ಕೆಲಸ ವಿರೋಧ ಮಾಡೋದು ಹಾಗಾಗಿ ಮಾತನಾಡುತ್ತಿದ್ದಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಇದನ್ನೂ ಓದಿ: ಮುದ್ದಾಗಿ ಸಾಕಿ ಬೆಳೆಸಿರೋ ಅಮ್ಮನೇ ನನಗೆ ಸ್ಪೆಷಲ್ ಗಿಫ್ಟ್: ಅಭಿಷೇಕ್ ಅಂಬರೀಶ್

blank

ಅಕ್ರಮ ಕೆಲಸ ಮಾಡುವವರು ಯಾರಾದ್ರೂ ತನಿಖೆಗೆ ಹೋದ್ರೆ ರೆಡ್ ಕಾರ್ಪೆಟ್ ಹಾಕಿಕೊಡ್ತಾರಾ? ಮಾಜಿ ಸಿಎಂ ಅವರು ಹಿರಿಯರು ನಾನು ಅವರ ಸಮಾನ ಅಲ್ಲ. ಅವರು ಯಾಕೆ ಹಾಗೆ ಮಾತನಾಡುತ್ತಿದ್ದಾರೆ ನನಗೆ ಗೊತ್ತಿಲ್ಲ. ಜನರೇ ಅವರನ್ನು ನೋಡುತ್ತಿದ್ದಾರೆ. ಮಾತಾಡಿ ಪ್ರಯೋಜನ ಇಲ್ಲ ಎಂದು ತಿರುಗೇಟು ನೀಡಿದರು.

The post ನಮ್ಮ ತಂದೆಯ ಸಾವನ್ನು ರಾಜಕೀಯ ಮಾಡಬೇಡಿ: ಅಭಿಷೇಕ್ ಅಂಬರೀಶ್ appeared first on Public TV.

Source: publictv.in

Source link