ಸಿನಿಮಾ ನಟನೆಗೂ.. ರಾಜಕೀಯಕ್ಕೂ ತುಂಬಾ ವ್ಯತ್ಯಾಸವಿದೆ -ಸಂಸದ ಪ್ರತಾಪ್​ ಸಿಂಹ

ಸಿನಿಮಾ ನಟನೆಗೂ.. ರಾಜಕೀಯಕ್ಕೂ ತುಂಬಾ ವ್ಯತ್ಯಾಸವಿದೆ -ಸಂಸದ ಪ್ರತಾಪ್​ ಸಿಂಹ

ಕೊಡಗು: ಸುಮಲತಾ ಅವರ ನಟನೆ ಬಗ್ಗೆ ಬಹಳ ಅಭಿಮಾನವಿದೆ. ಅಂಬರೀಶ್ ಅವರ ಕಟ್ಟಾ ಫ್ಯಾನ್ ನಾನು, ಅಂಬರೀಷ್ ಅವರನ್ನು ನೋಡೋದಕ್ಕೆ ಅವರ ಮನೆಗೆ ಹೋಗ್ತಿದ್ದೆ, ಸಿನಿಮಾ ನಟನೆಗೂ,ರಾಜಕೀಯಕ್ಕೂ ತುಂಬಾ ವ್ಯತ್ಯಾಸವಿದೆ ಅಂತ ಸಂಸದ ಪ್ರತಾಪ್​ ಸಿಂಹ ಹೇಳಿದ್ದಾರೆ.

ಮಡಿಕೇರಿಯಲ್ಲಿ ಮಾತನಾಡಿದ ಸಂಸದ ಪ್ರತಾಪ್ ಸಿಂಹ, ನಿನ್ನೆ ನಾನು ಯಾರೋ ಒಬ್ಬರ ಪರವಾಗಿ ಮಾತನಾಡಿಲ್ಲ. ಕೆಆರ್‌ಎಸ್ ಯಾರೊಬ್ಬರ ಆಸ್ತಿ ಅಲ್ಲ. ಜಲಾಶಯಕ್ಕೆ ನನ್ನ ಕ್ಷೇತ್ರದ ಕೊಡಗಿನ ಕಾವೇರಿಯಿಂದ ನೀರು ಬರುತ್ತೆ. ಬಿರುಕು ಬಿಟ್ಟಿದೆ ಅಂದವರು ಅವರು, ಅದನ್ನ ತೋರಿಸಲಿ. ಈ ವಿಚಾರವನ್ನಷ್ಟೆ ನಾನು ಹೇಳಿದ್ದು. ನಾನು ಮೈಸೂರು-ಕೊಡಗು ಸಂಸದ ಅನ್ನುವ ಬಗ್ಗೆ ಜನರಿಗೆ ಗೊಂದಲ ಇಲ್ಲ. ನಾನು ಮೈಸೂರಿನಲ್ಲೇ ವಾಸವಿದ್ದೇನೆ, ಕೊಡಗಿಗೂ ಬರ್ತಿರ್ತೇನೆ, ಅಭಿವೃದ್ಧಿ ಕಾರ್ಯ ಮಾಡ್ತಿದ್ದೇನೆ. ಗೊಂದಲ‌ ಮಂಡ್ಯದವರಿಗೆ ಇರುತ್ತೆ, ನಾವು ವೋಟ್ ಹಾಕಿದವ್ರು ಎಲ್ಲಿದ್ದಾರೆ ಅಂತ ಗೊಂದಲ ಇದೆ. ಮಂಡ್ಯದವರಿಗೆ ಗೊಂದಲ ಇದೆ ಹೊರತು. ಕೊಡಗು-ಮೈಸೂರಿನವರಿಗೆ ಇಲ್ಲ ಅಂತ ಹೇಳಿದ್ದಾರೆ.

ಕೆಆರ್​ಎಸ್ ಬಿರುಕು ಬಿಟ್ಟಿದ್ದರೆ ತೋರಿಸಿಕೊಡಲಿ, ಅದು ಬಹಳ ಗಂಭೀರ ವಿಚಾರ. ಇಲ್ಲಾ ಅಂದರೆ ಹೇಳಿದ್ದು ತಪ್ಪಾಗಿದೆ ಎಂದು ಸುಮ್ಮನಾಗಲಿ, ಅಷ್ಟೇ ನನ್ನ ಮನವಿ ಅಂತ ಪ್ರತಾಪ್ ಸಿಂಹ ಪ್ರತಿಕ್ರಿಯಿಸಿದ್ದಾರೆ.

The post ಸಿನಿಮಾ ನಟನೆಗೂ.. ರಾಜಕೀಯಕ್ಕೂ ತುಂಬಾ ವ್ಯತ್ಯಾಸವಿದೆ -ಸಂಸದ ಪ್ರತಾಪ್​ ಸಿಂಹ appeared first on News First Kannada.

Source: newsfirstlive.com

Source link