ಜ್ಯೂಸ್​ ಫ್ಯಾಕ್ಟರಿಗೆ ಬೆಂಕಿ; ಜೀವ ಉಳಿಸಿಕೊಳ್ಳಲು ಕಟ್ಟಡದಿಂದ ಹಾರಿ.. 52 ಕಾರ್ಮಿಕರ ಸಾವು

ಜ್ಯೂಸ್​ ಫ್ಯಾಕ್ಟರಿಗೆ ಬೆಂಕಿ; ಜೀವ ಉಳಿಸಿಕೊಳ್ಳಲು ಕಟ್ಟಡದಿಂದ ಹಾರಿ.. 52 ಕಾರ್ಮಿಕರ ಸಾವು

ಧಾಕಾ: ಬಾಂಗ್ಲಾದೇಶದ ಧಾಕಾ ಬಳಿ ಜ್ಯೂಸ್​ ಫ್ಯಾಕ್ಟರಿಯೊಂದರಲ್ಲಿ ಬೆಂಕಿ ಕಾಣಿಸಿಕೊಂಡ ಪರಿಣಾಮ 52 ಮಂದಿ ಸಾವನ್ನಪ್ಪಿದ್ದು 50 ಮಂದಿ ಗಾಯಗೊಂಡ ದುರ್ಘಟನೆ ಸಂಭವಿಸಿದೆ.

ಗುರುವಾರ ಸಂಜೆ 5 ಗಂಟೆ ಸುಮಾರಿಗೆ ಶೇಜನ್ ಜ್ಯೂಸ್ ಫ್ಯಾಕ್ಟರಿಯಲ್ಲಿ ಕಟ್ಟಡದ ಗ್ರೌಂಡ್​ಫ್ಲೋರ್​ನl್ಲಿ ಬೆಂಕಿ ಕಾಣಿಸಿಕೊಂಡಿದ್ದು ಕೆಮಿಕಲ್ಸ್ ಹಾಗೂ ಪ್ಲಾಸ್ಟಿಕ್ ಬಾಟಲ್​ಗಳು ಇದ್ದಿದ್ದರಿಂದ ಬೆಂಕಿ ವೇಗವಾಗಿ ಹಬ್ಬಿದೆ ಎಂದು ಅಂದಾಜಿಸಲಾಗಿದೆ. ದುರ್ಘಟನೆಯಲ್ಲಿ 50 ಮಂದಿ ಸಾವನ್ನಪ್ಪಪಿದ್ದು 52 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎನ್ನಲಾಗಿದ್ದು ಸಾವಿನ ಸಂಖ್ಯೆ ಏರಿಕೆಯಾಗುವ ಸಾಧ್ಯತೆ ಇದೆ.

ಕೆಲವರು ಬೆಂಕಿಯಲ್ಲಿ ಜೀವಂತವಾಗಿ ಸುಟ್ಟುಹೋಗಿದ್ದರೆ ಮತ್ತೆ ಕೆಲವರು ಕಟ್ಟಡದಿಂದ ಹಾರಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಇನ್ನು ಘಟನೆಯಲ್ಲಿ 44 ಮಂದಿ ನಾಪತ್ತೆಯಾಗಿದ್ದಾರೆ ಎಂದು ಹೇಳಲಾಗಿದೆ. ಕಟ್ಟಡದಲ್ಲಿ ಸುರಕ್ಷತಾ ಕ್ರಮಗಳಲ್ಲಿ ಲೋಪದೋಷವಿದ್ದುದೇ ಅವಘಡಕ್ಕೆ ಕಾರಣವಾಗಿದೆ ಎಂದು ಹೇಳಲಾಗಿದೆ.

The post ಜ್ಯೂಸ್​ ಫ್ಯಾಕ್ಟರಿಗೆ ಬೆಂಕಿ; ಜೀವ ಉಳಿಸಿಕೊಳ್ಳಲು ಕಟ್ಟಡದಿಂದ ಹಾರಿ.. 52 ಕಾರ್ಮಿಕರ ಸಾವು appeared first on News First Kannada.

Source: newsfirstlive.com

Source link