ಮೇಕೆದಾಟು ಯೋಜನೆ; ಸರ್ವಪಕ್ಷ ಸಭೆ ಕರೆದ ತಮಿಳುನಾಡು ಸಿಎಂ ಸ್ಟಾಲಿನ್

ಮೇಕೆದಾಟು ಯೋಜನೆ; ಸರ್ವಪಕ್ಷ ಸಭೆ ಕರೆದ ತಮಿಳುನಾಡು ಸಿಎಂ ಸ್ಟಾಲಿನ್

ಚೆನ್ನೈ: ರಾಜ್ಯದಲ್ಲಿ ಕಾವೇರಿ ನದಿಗೆ ಮೇಕೆದಾಟು ಬಳಿ ಅಣೆಕಟ್ಟು ನಿರ್ಮಾಣ ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ. ಈ ವಿಚಾರವಾಗಿ ತಮಿಳುನಾಡು ಸರ್ಕಾರ ವಿರೋಧ ವ್ಯಕ್ತಪಡಿಸಿದ್ದು ಈ ಯೋಜನೆಯಿಂದ ರಾಜ್ಯಕ್ಕೆ ನೀರು ಪೂರೈಕೆಯಲ್ಲಿ ಕೊರತೆಯಾಗಲಿದೆ ಎಂದು ಹೇಳಿದೆ.

ಯೋಜನೆಯ ವಿಚಾರವಾಗಿ ಈಗಾಗಲೇ ಮುಖ್ಯಮಂತ್ರಿ ಮಟ್ಟದಲ್ಲಿ ಒಂದು ಸುತ್ತಿನ ಪತ್ರ ವ್ಯವಹಾರವೂ ನಡೆದಿದ್ದು ಕರ್ನಾಟಕ ಸರ್ಕಾರ ಮೇಕೆದಾಟು ಯೋಜನೆಗೆ ಬದ್ಧವಾಗಿರುವುದಾಗಿ ಮತ್ತು ಇದರಿಂದ ತಮಿಳುನಾಡಿಗೆ ಹರಿಯುವ ನೀರಿನ ಪ್ರಮಾಣದಲ್ಲಿ ವ್ಯತ್ಯಯವಾಗುವುದಿಲ್ಲ ಎಂದು ಹೇಳಿದೆ. ಅತ್ತ ತಮಿಳುನಾಡು ಸರ್ಕಾರ.. ಬೆಂಗಳೂರಿಗೆ ಕುಡಿಯುವ ನೀರು ಪೂರೈಸಲು ಈ ಯೋಜನೆ ಮುಂದುವರೆಸುವುದಾಗಿ ತಿಳಿಸಿದ್ದೀರಿ.. ನಮ್ಮಲ್ಲೂ ನೀರಿಲ್ಲ.. ನಾವು ಪ್ರತಿನಿತ್ಯ ನೀರಿಗಾಗಿ ಪರದಾಡುತ್ತಿದ್ದೇವೆ. ನಿಮ್ಮ ಯೋಜನೆಯಿಂದ ತಮಿಳುನಾಡಿಗೆ ಯಾವುದೇ ತೊಂದರೆಯಾಗುವುದಿಲ್ಲ ಎಂಬುದು ಸಮಂಜಸವಲ್ಲ ಎಂದಿದ್ದಾರೆ.

ಇದನ್ನೂ ಓದಿ: ಕಾವೇರಿ ನೀರಿಗಾಗಿ ಕಲಹಕ್ಕಿಳಿದಿದ್ದು ಸಾಕು.. ಸ್ಟಾಲಿನ್​ರನ್ನು ಸೋದರ ಎಂದ ಹೆಚ್​ಡಿಕೆ

ಇದೀಗ ಮೇಕೆದಾಟು ಯೋಜನೆ ವಿಚಾರವಾಗಿ ನಿಲುವು ಬದಲಾಯಿಸದ ತಮಿಳುನಾಡು ಸರ್ಕಾರ ಇದೇ ಜುಲೈ 12 ನೇ ತಾರೀಖಿನಂದು ಸರವಪಕ್ಷ ಸಭೆ ಕರೆದಿದೆ. ಸರ್ವಪಕ್ಷ ಸಭೆಯಲ್ಲಿ ಯೋಜನೆಯ ಲಾಭ-ನಷ್ಟಗಳ ಬಗ್ಗೆ ಹಾಗೂ ಯೋಜನೆಯನ್ನು ಅನುಷ್ಠಾನಕ್ಕೆ ಬರದಂತೆ ತಡೆಯಲು ಮತ್ತಷ್ಟು ಒತ್ತಡ ಹೇರುವ ಬಗ್ಗೆ ಚರ್ಚೆಗಳು ನಡೆಯುವ ಸಾಧ್ಯತೆ ಇದೆ.

The post ಮೇಕೆದಾಟು ಯೋಜನೆ; ಸರ್ವಪಕ್ಷ ಸಭೆ ಕರೆದ ತಮಿಳುನಾಡು ಸಿಎಂ ಸ್ಟಾಲಿನ್ appeared first on News First Kannada.

Source: newsfirstlive.com

Source link