ಟೀಮ್ ಇಂಡಿಯಾಕ್ಕೆ ಇಂಗ್ಲೆಂಡ್ ಸರಣಿ ಕೈಚೆಲ್ಲುವ ಭೀತಿ ಯಾಕೆ?

ಟೀಮ್ ಇಂಡಿಯಾಕ್ಕೆ ಇಂಗ್ಲೆಂಡ್ ಸರಣಿ ಕೈಚೆಲ್ಲುವ ಭೀತಿ ಯಾಕೆ?

ಇಂಗ್ಲೆಂಡ್ ವಿರುದ್ಧದ ಟೆಸ್ಟ್​ ಸರಣಿ ಆರಂಭಕ್ಕೂ ಮುನ್ನ ಬ್ರೇಕ್​ ಪಡೆದಿರೋ ಟೀಮ್ ಇಂಡಿಯಾ ಆಟಗಾರರು ಎಂಜಾಯ್ ಮಾಡ್ತಿದ್ದಾರೆ. ಈ ನಡುವೆ ಟೀಮ್ ಮ್ಯಾನೇಜ್​ಮೆಂಟ್​ಗೆ ಇಂಗ್ಲೆಂಡ್ ಸರಣಿಯಲ್ಲಿ ಹೀನಾಯ ಸೋಲು ಅನುಭವಿಸೋ ಆತಂಕ ಕಾಡ್ತಿದೆ. ಕಾರಣ ತಂಡದ ಪ್ರಮುಖ ಆಟಗಾರರ ಇನ್​ಕನ್ಸಿಸ್ಟೆಂಟ್ ಪರ್ಫಾಮೆನ್ಸ್​​.

ಪ್ರಮುಖ ಆಟಗಾರರ ಕಳಪೆ ಪ್ರದರ್ಶನ ವಿರಾಟ್​ಗೆ ಆತಂಕ!
ಹೌದು. ಹಿಟ್​ಮ್ಯಾನ್ ರೋಹಿತ್ ಶರ್ಮಾ, ಅಜಿಂಕ್ಯಾ ರಹಾನೆ, ಚೇತೇಶ್ವರ್ ಪೂಜಾರ ಸತತ ವೈಫಲ್ಯ ಅನುಭವಿಸುತ್ತಿದ್ದಾರೆ. ಕಳೆದೆರೆಡು ಸರಣಿಗಳಿಂದ ಈ ಸ್ಟಾರ್ ಆಟಗಾರರ ಆಟ ನಡೆಯುತ್ತಿಲ್ಲ. ಮತ್ತೊಂದೆಡೆ ಬುಮ್ರಾ ವಿಕೆಟ್​​ಗಾಗಿ ಪರದಾಡ್ತಿರೋದು ತಂಡಕ್ಕೆ ಹಿನ್ನಡೆಯಾಗ್ತಿದೆ. ಮ್ಯಾಚ್ ​ವಿನ್ನರ್ಸ್ ಎನಿಸಿಕೊಂಡ ಇವರೇ ಫಾರ್ಮ್​ಗೆ ಮರಳಲು ಪರದಾಡ್ತಿರೋದು, ಕ್ಯಾಪ್ಟನ್ ಮತ್ತು ಟೀಮ್ ಮ್ಯಾನೇಜ್​​ಮೆಂಟ್ ಆತಂಕಕ್ಕೆ ಕಾರಣವಾಗಿದೆ.

blank

ಫಾರ್ಮ್​ ಕಂಡುಕೊಳ್ಳದಿದ್ದರೇ ಸೋಲೋದು ಗ್ಯಾರಂಟಿ!
ಟೆಸ್ಟ್​ ಚಾಂಪಿಯನ್​​ಶಿಪ್ ಫೈನಲ್ ಸೋತಿರುವ ಟೀಮ್ ಇಂಡಿಯಾಕ್ಕೆ​ ಇಂಗ್ಲೆಂಡ್ ಸರಣಿ ಪ್ರತಿಷ್ಠಿತ ಸಮರವಾಗಿದೆ. ಟೆಸ್ಟ್ ಸರಣಿಯಲ್ಲಿ ವಿರಾಟ್ ಪಡೆ, ಸ್ಟುವರ್ಟ್​ ಬ್ರಾಡ್, ಜೇಮ್ಸ್ ಆ್ಯಂಡರ್ಸನ್, ಕ್ರಿಸ್​ ವೋಕ್ಸ್, ಒಲಿ ರಾಬಿನ್ಸನ್​​ರಂಥಹ ಘಟಾನುಘಟಿ ವೇಗಿಗಳ ಸವಾಲು, ಎದುರಿಸಬೇಕಿದೆ. ಇಂಗ್ಲೆಂಡ್ ಕಂಡೀಷನ್ಸ್​​​​ನಲ್ಲಿ ಆಂಗ್ಲರ ಮಾರಕ ದಾಳಿಯನ್ನ ಮೆಟ್ಟಿ ನಿಲ್ಲಬೇಕೆಂದರೆ ರೋಹಿತ್, ಪೂಜಾರ, ರಹಾನೆ ಫಾರ್ಮ್​ಗೆ ಮರಳಲೇಬೇಕಾಗಿದೆ.

blankಮತ್ತೊಂದೆಡೆ ಜಸ್​ಪ್ರೀತ್​​ ಬೂಮ್ರಾರಿಂದ ವಿಕೆಟ್​ ಟೇಕಿಂಗ್ ಸ್ಪೆಲ್ ನಿರೀಕ್ಷಿಸಲಾಗಿದೆ. ಒಂದು ವೇಳೆ ಬೂಮ್ರಾ ಇಲ್ಲೂ ಫೇಲ್ ಆದ್ರೆ, ತಂಡಕ್ಕೆ ಸೋಲು ಪಕ್ಕ. ಹೀಗಾಗಿ ಈ ಸ್ಟಾರ್​ ಆಟಗಾರರು ಸರಣಿ ಆರಂಭಕ್ಕೂ ಮುನ್ನ, ಫಾರ್ಮ್ ಕಂಡುಕೊಳ್ಳುವ ಅಗತ್ಯತೆ ಇದೆ. ಇಲ್ಲದಿದ್ದರೆ, ಇವರಿಗೆ ಪರ್ಯಾಯ ಸೂತ್ರವನ್ನ ಕಂಡುಕೊಳ್ಳಲೇಬೇಕಿದೆ.

The post ಟೀಮ್ ಇಂಡಿಯಾಕ್ಕೆ ಇಂಗ್ಲೆಂಡ್ ಸರಣಿ ಕೈಚೆಲ್ಲುವ ಭೀತಿ ಯಾಕೆ? appeared first on News First Kannada.

Source: newsfirstlive.com

Source link