ವಶಿಷ್ಠ ಸೌಹಾರ್ದ ಬ್ಯಾಂಕ್: ನಿರ್ದೇಶಕರ ಮನೆ, ಕಚೇರಿಗಳು ಸೇರಿ ಒಟ್ಟು 11 ಕಡೆ ಪೊಲೀಸ್ ದಾಳಿ

ವಶಿಷ್ಠ ಸೌಹಾರ್ದ ಬ್ಯಾಂಕ್: ನಿರ್ದೇಶಕರ ಮನೆ, ಕಚೇರಿಗಳು ಸೇರಿ ಒಟ್ಟು 11 ಕಡೆ ಪೊಲೀಸ್ ದಾಳಿ

ಬೆಂಗಳೂರು: ನಗರದಲ್ಲಿ ವಶಿಷ್ಠ ಸೌಹಾರ್ದ ಕ್ರೆಡಿಟ್ ಬ್ಯಾಂಕ್ ಮೇಲೆ ಹನುಮಂತ ನಗರ ಪೊಲೀಸರು ದಾಳಿ ನಡೆಸಿದ್ದಾರೆ, ಅಲ್ಲದೇ ವಸಿಷ್ಠ ಕೋ ಆಪರೇಟಿವ್ ಬ್ಯಾಂಕ್​ನ ನಿರ್ದೇಶಕರ ಮನೆ, ಕಛೇರಿಗಳಳು ಸೇರಿದಂತೆ ಒಟ್ಟು 11 ಕಡೆ ಏಕಕಾಲದಲ್ಲಿ ದಾಳಿ ನಡೆಸಲಾಗಿದೆ.

ವೆಂಕಟ ನಾರಾಯಣ, ಕೃಷ್ಣ ಪ್ರಸಾದ್ ಸೇರಿದಂತೆ ಗಿರಿನಗರ -2 ಕಡೆ, ಶಂಕರಪುರಂ-1, ಹನುಮಂತನಗರ 4 ಕಡೆ ಸೇರಿದಂತೆ  11 ಕಡೆ ಪೊಲೀಸರು ದಾಳಿ ನಡೆಸಿದ್ದಾರೆ.

ದಾಳಿಯಲ್ಲಿ ವಸಿಷ್ಠ ಕೋ ಆಪರೇಟಿವ್ ಬ್ಯಾಂಕ್​ಗೆ ಸಂಬಂಧಿಸಿದ ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದೆ. ಹೂಡಿಕೆದಾರರಿಗೆ ಹಣ ವಾಪಸ್ ನೀಡದೇ ಬ್ಯಾಂಕ್​ ದಿನಗಳನ್ನ ಕಳೆಯುತ್ತಿತ್ತು ಎನ್ನಲಾಗಿದೆ. ಈ ಹಿನ್ನೆಲೆ ಹನುಮಂತನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ದೂರಿನ ಅನ್ವಯ ವಶಿಷ್ಠ ಕೋ ಆಪರೇಟಿವ್ ಬ್ಯಾಂಕ್ ಮೇಲೆ ಇಂದು ಬೆಳಗ್ಗೆ ದಾಳಿ ನಡೆಸಲಾಗಿದೆ.

 

The post ವಶಿಷ್ಠ ಸೌಹಾರ್ದ ಬ್ಯಾಂಕ್: ನಿರ್ದೇಶಕರ ಮನೆ, ಕಚೇರಿಗಳು ಸೇರಿ ಒಟ್ಟು 11 ಕಡೆ ಪೊಲೀಸ್ ದಾಳಿ appeared first on News First Kannada.

Source: newsfirstlive.com

Source link