ಟೀಂ ಇಂಡಿಯಾ ಕನಸಿಗೆ ತಣ್ಣೀರೆರೆಚಲು ಮುಂದಾಯ್ತಾ ಕೊರೊನಾ..?

ಟೀಂ ಇಂಡಿಯಾ ಕನಸಿಗೆ ತಣ್ಣೀರೆರೆಚಲು ಮುಂದಾಯ್ತಾ ಕೊರೊನಾ..?

ಅಭ್ಯಾಸ ಪಂದ್ಯಗಳನ್ನ ಆಡುವ ಮೂಲಕ ಇಂಗ್ಲೆಂಡ್​ ವಿರುದ್ಧ ಸರಣಿ ಗೆಲ್ಲೋಕೆ ವಿರಾಟ್​ ಪಡೆ ಸಿದ್ಧತೆ ನಡೆಸಿತ್ತು. ಆದರೀಗ ವಾರ್ಮ್​ಅಪ್​ ಪಂದ್ಯಗಳನ್ನ ಆಡಿಸೋದೆ ಡೌಟ್​ ಎನ್ನಲಾಗ್ತಿದೆ. ಇಂಗ್ಲೆಂಡ್ ಟೆಸ್ಟ್ ಸರಣಿಗೂ ಮುನ್ನ ಇದು ಟೀಮ್​ ಇಂಡಿಯಾ ತಲೆಬಿಸಿ ಹೆಚ್ಚಿಸಿದೆ.

ಕನಿಷ್ಠ ಎರಡು ಅಭ್ಯಾಸ ಪಂದ್ಯಗಳನ್ನ ಅಯೋಜಿಸುವಂತೆ ಬಿಸಿಸಿಐ ಮಾಡಿದ್ದ ಮನವಿಗೆ, ಇಂಗ್ಲೆಂಡ್​ ಕ್ರಿಕೆಟ್ ಮಂಡಳಿ ಸಕಾರಾತ್ಮಕವಾಗಿ ಸ್ಪಂದಿಸಿತ್ತು. ಆದರೆ ವಿಶ್ರಾಂತಿ ಬಳಿಕ ಅಭ್ಯಾಸ ಪಂದ್ಯಕ್ಕೆ ಸಿದ್ಧತೆ ನಡೆಸಿದ್ದ ಭಾರತೀಯ ಆಟಗಾರರಿಗೆ ಕೊರೊನಾ ವಿಘ್ನ ಎದುರಾಗಿದೆ. ಆಂಗ್ಲರ ನಾಡಲ್ಲಿ ಸೃಷ್ಟಿಯಾಗಿರುವ ಕೊರೊನಾ ಸುನಾಮಿ, ಪ್ರಾಕ್ಟೀಸ್​ ಮ್ಯಾಚ್​ಗೆ ಬ್ರೇಕ್​ ಹಾಕುವ ಮುನ್ಸೂಚನೆ ನೀಡಿದೆ.

blankಪಾಕ್ ಸರಣಿಗೂ ಮುನ್ನ ಇಂಗ್ಲೆಂಡ್​​ನ 3 ಆಟಗಾರರು ಮತ್ತು 4 ಸಿಬ್ಬಂದಿಗೆ ಕೊರೊನಾ ವಕ್ಕರಿಸಿದೆ. ಬಯೋ ಬಬಲ್ ರಕ್ಷಣಾ ಕವಚದ ಒಳಗೆ ನುಗ್ಗಿ ಸೋಂಕು ತಗುಲಿದ್ದು ಅಚ್ಚರಿ ಮೂಡಿಸಿದೆ. ಇಂಗ್ಲೆಂಡ್​​​ನಲ್ಲಿ ಕೋವಿಡ್​ ಭೀಕರತೆ ಮತ್ತಷ್ಟು ಆತಂಕಕ್ಕೆ ತಳ್ಳಿದೆ. ಹಾಗಾಗಿ ಆಟಗಾರರ ರಕ್ಷಣೆ ಮತ್ತು ಆರೋಗ್ಯದ ಹಿತ ದೃಷ್ಟಿಯಿಂದ ಅಭ್ಯಾಸ ಪಂದ್ಯಗಳನ್ನ ರದ್ದುಪಡಿಸೋಕೆ ಇಂಗ್ಲೆಂಡ್​ ಬೋರ್ಡ್​ ಚಿಂತನೆ ನಡೆಸಿದೆ ಎನ್ನಲಾಗ್ತಿದೆ.

‘ಇಂಗ್ಲೆಂಡ್​ನಲ್ಲಿ ಕೊರೊನಾ ಮಿತಿ ಮೀರಿದೆ. ಹಾಗಾಗಿ ಕೋವಿಡ್​ ಪ್ರೋಟೋಕಾಲ್​​ಗಳ ಮೇಲೆ ಹೆಚ್ಚು ಗಮನ ನೀಡುತ್ತಿದ್ದೇವೆ. ಆಟಗಾರರಿಗೆ ಯಾವುದೇ ತೊಂದರೆ ಉಂಟಾಗದಂತೆ ಸಾಧ್ಯವಾದಷ್ಟು ಕ್ರಮ ಕೈಗೊಳ್ಳುತ್ತೇವೆ’’
-ಇಸಿಬಿ ಅಧಿಕಾರಿ

ಇಂಗ್ಲೆಂಡ್​ ಆಟಗಾರರ ಮೇಲಿನ ಕೊರೊನಾ ಕರಿನೆರಳು, ಅಭ್ಯಾಸ ಪಂದ್ಯಗಳ ಮೇಲೆ ಬೀಳುವಂತಿದೆ. ಪ್ರಾಕ್ಟೀಸ್​ ಮ್ಯಾಚ್​ಗಳನ್ನ ರದ್ದುಗೊಳಿಸುವ ಕುರಿತು ಸುದ್ದಿ ಹರಿದಾಡ್ತಿದ್ದು, ಟೀಮ್​ ಇಂಡಿಯಾದಲ್ಲಿ ತಳಮಳ ಸೃಷ್ಟಿಸಿದೆ.

blankಅಭ್ಯಾಸವಿಲ್ಲದೆ ನೇರವಾಗಿ ಕಣಕ್ಕಿಳಿಯುತ್ತಾ ಟೀಮ್ ಇಂಡಿಯಾ..?
ವಿಶ್ವ ಟೆಸ್ಟ್​ ಚಾಂಪಿಯನ್​​ಶಿಪ್​ ಫೈನಲ್​​ಗೂ ಮುನ್ನ ಭಾರತ, ಅಭ್ಯಾಸ ಪಂದ್ಯವನ್ನಾಡದೆ ನೇರವಾಗಿ ಕಣಕ್ಕಿಳಿದಿತ್ತು. ಇದರಿಂದಾಗಿ ಫೈನಲ್​​​ನಲ್ಲಿ ಸೋಲುವಂತಾಯ್ತು. ಇದೀಗ ಇಂಗ್ಲೆಂಡ್​ ಸರಣಿಗೂ ಮುನ್ನ, ಇದೇ ಪರಿಸ್ಥಿತಿ ಎದುರಾಗುವ ಸಾಧ್ಯತೆ ಇದೆ. ಹಾಗಾದರೆ ಭಾರತ ಗೆಲ್ಲೋಕ್ಕೆ ಅಭ್ಯಾಸ ಪಂದ್ಯ ಇರಲೇಬೇಕಾ..? ಇಲ್ಲವಾದರೆ ಸೋಲುತ್ತಾ ಅನ್ನೋ ಪ್ರಶ್ನೆ ಹುಟ್ಟಿಕೊಂಡಿದೆ.

ಅಭ್ಯಾಸ ಪಂದ್ಯಗಳು ನಡೆಯದಿದ್ರೆ ಭಾರತ ಗೆಲ್ಲೋದು ಕಷ್ಟನಾ..?
ಟೆಸ್ಟ್​ ಚಾಂಪಿಯನ್​​ಶಿಪ್​ ಬಳಿಕ ಇಂಗ್ಲೆಂಡ್ ಸರಣಿಗೆ ತಿಂಗಳ ಗ್ಯಾಪ್​ ಸಿಕ್ಕಿದೆ. ಆದರೆ ಭಾರತದ ಆಟಗಾರರಿಗೆ ವಿಶ್ರಾಂತಿ ನೀಡಲಾಗಿದೆ. ಮೂರು ವಾರಗಳ ವಿಶ್ರಾಂತಿಯಲ್ಲಿ ಫಿಟ್​ನೆಸ್​ ಕಳೆದುಕೊಂಡ ಆಟಗಾರರಿಗೆ, ಅಭ್ಯಾಸ ಪಂದ್ಯ ಅನಿವಾರ್ಯ. ಹಾಗೇ ಫಾರ್ಮ್​ನಲ್ಲಿ ಇರೋರು ಯಾರು ಅನ್ನೋದು ಗೊತ್ತಾಗುತ್ತೆ.? ಜೊತೆಗೆ ಸೂಕ್ತ ಆಡುವ 11ರ ಬಳಗವನ್ನ ರಚಿಸೋಕು ಸಹಾಯವಾಗುತ್ತೆ. ಒಂದು ವೇಳೆ ಪ್ರಾಕ್ಟೀಸ್​​ ಪಂದ್ಯಗಳ ಆಯೋಜನೆ ಕಷ್ಟವಾದ್ರೆ, ತಂಡಕ್ಕೆ ಹಿನ್ನಡೆಯಾಗೋದರ ಜೊತೆಗೆ, ಕ್ಯಾಪ್ಟನ್ ಕೊಹ್ಲಿಗೆ ಹೊಸ ಸವಾಲು ಎದುರಾಗೋದಂತು ಪಕ್ಕಾ.

The post ಟೀಂ ಇಂಡಿಯಾ ಕನಸಿಗೆ ತಣ್ಣೀರೆರೆಚಲು ಮುಂದಾಯ್ತಾ ಕೊರೊನಾ..? appeared first on News First Kannada.

Source: newsfirstlive.com

Source link