ಹಿಟ್ಲರ್‌ ಕಲ್ಯಾಣದ ‘ಯಡವಟ್ಟು ಲೀಲಾ’ ಯಾರು ಗೊತ್ತಾ..?

ಹಿಟ್ಲರ್‌ ಕಲ್ಯಾಣದ ‘ಯಡವಟ್ಟು ಲೀಲಾ’ ಯಾರು ಗೊತ್ತಾ..?

ಯಡವಟ್ಟು ಲೀಲಾ.. ಹಿಟ್ಲರ್‌ ಕಲ್ಯಾಣದ ಎರಡನೇ ಪ್ರೋಮೋ ರಿಲೀಸ್ ಆದ್ಮೇಲೆ ಈ ಹೆಸರು ಈಗ ಪಾಪ್ಯುಲರ್‌ ಆಗ್ತಿದೆ. ಅದು ಸೋಷಿಯಲ್ ಮೀಡಿಯಾ ಆಗ್ಲಿ! ಸೀರಿಯಲ್ ವೀಕ್ಷಕರ ಬಳಗವಿರಲಿ.. ಈಗ ಕೇಳಿಬರ್ತಿರೋದು ಒಂದೇ ಪ್ರಶ್ನೆ.. ಯಾರಿದು ಯಡವಟ್ಟು ಲೀಲಾ ಅನ್ನೋದು.

ಈ ಯಡವಟ್ಟು ಲೀಲಾ ಹೆಸರೇನು ಗೊತ್ತಾ..? ಮಲೈಕಾ ಟಿ ವಸುಪಾಲ್‌.. ನಾವು ಈ ಹಿಂದೆಯೇ ಹಿಟ್ಲರ್‌ ಕಲ್ಯಾಣದ ಈ ಹೀರೋಯಿನ್‌ ಬಗ್ಗೆ ಸ್ವಲ್ಪ ಮಾಹಿತಿ ಕೊಟ್ಟಿದ್ವಿ. ಈಗ ಕಂಪ್ಲೀಟ್ ಇನ್ಫಾರ್ಮೇಶನ್ ಹೊತ್ತು ತಂದಿದ್ದೇವೆ.

blank

ಬೇಸಿಕಲಿ.. ಎಂಜಿನಿಯರ್ ಆಗಿರೋ ಮಲೈಕಾ ವಾಸುಪಾಲ್‌ನ ಊರು ದಾವಣಗೆರೆ. ಚಿಕ್ಕವಯಸ್ಸಿನಿಂದಲೂ ಆ್ಯಕ್ಟಿಂಗ್ ಬಗ್ಗೆ ಒಲವು ಹೊಂದಿದ್ದ ಮಲೈಕಾ ನುರಿತ ಡ್ಯಾನ್ಸರ್‌. ತೆರೆಯ ಮೇಲೆ ಕಾಣಿಸಿಕೊಳ್ಬೇಕು ಅನ್ನೋ ಮಹತ್ವಾಕಾಂಕ್ಷೆ ಹೊಂದಿದ್ದ ಮಲೈಕಾ  ಸೀರಿಯಲ್ಸ್‌ನೂ ಫಾಲೋ ಮಾಡ್ತಿದ್ರು. ಈಗ ಅವರೇ ಸೀರಿಯಲ್ ಹೀರೋಯಿನ್ ಆಗ್ಬಿಟ್ಟಿದ್ದಾರೆ. ಅದು ಹೆಸರಾಂತ ಬ್ಯಾನರ್‌ನಲ್ಲಿ.. ಅತ್ಯುತ್ತಮವಾದ ಟೆಕ್ನಿಷಿಯನ್ಸ್‌ ಟೀಮ್ ಜೊತೆ..

ಮಲೈಕಾ ಫ್ಯಾಮಿಲಿಯಲ್ಲಿ ಯಾರೂ ಕಲಾವಿದರಿಲ್ಲ. ನಟಿಯಾಗ್ಬೇಕು ಅನ್ನೋ ಆಸೆಯಿಂದ ಪ್ರತಿ ವಾರವೂ ದಾವಣಗೆರೆಯಿಂದ ಬೆಂಗಳೂರಿಗೆ ಟ್ರಾವಲ್ ಮಾಡ್ತಿದ್ದ ಮಲೈಕಾ, ಹಲವು ತಿಂಗಳ ಹಿಂದೆ ಹಿಟ್ಲರ್‌ ಕಲ್ಯಾಣ ಸೀರಿಯಲ್‌ಗೆ ಆಡಿಷನ್ಸ್ ಕೊಟ್ಟಿದ್ದರು. ಲಕ್ಕಿಲೀ ಅವ್ರು ಈ ಸೀರಿಯಲ್‌ಗೆ ಆಯ್ಕೆಯಾಗಿದ್ದಾರೆ. ಈ ಮೂಲಕ ಮಲೈಕಾ ಕನಸು ನನಸಾಗಿದೆ.

blank

ಸೀರಿಯಲ್‌ ಶೂಟಿಂಗ್ ಆರಂಭಕ್ಕೂ ಮುನ್ನವೇ ವರ್ಕ್‌ಶಾಪ್‌ನಲ್ಲಿ ಪಾಲ್ಗೊಂಡಿದ್ದ ಮಲೈಕಾ ನಟ, ನಿರ್ಮಾಪಕ ದಿಲೀಪ್‌ ರಾಜ್‌ರಿಂದ ಸಾಕಷ್ಟು ಕಲತಿದ್ದಾರೆ. ಸದ್ಯ ದಾವಣಗೆರೆಯಿಂದ ಬೆಂಗಳೂರಿಗೆ ಶಿಫ್ಟ್ ಆಗಿರೋ ಮಲೈಕಾ ಹಿಟ್ಲರ್‌ ಕಲ್ಯಾಣ ಸೀರಿಯಲ್‌ ಲಾಂಚ್‌ಗೆ ಎದುರು ನೋಡ್ತಿದ್ದಾರೆ.

ಸದ್ಯ ಪ್ರೊಮೋದಲ್ಲಿರೋ ಗೆಟಪ್‌ ನೋಡಿ ಬಹಳಷ್ಟು ಜನರು ಕನ್ನಡ ಇಂಡಸ್ಟ್ರಿಗೊಬ್ಬಳು ಗೊಂಬೆ ಸಿಕ್ಕಳು ಅಂತಾ ಮಾತನಾಡ್ತಿದ್ದಾರೆ. ಇಂತಹ ಗೊಂಬೆಯನ್ನ ಇನ್ನೊಂದಷ್ಟು ಗೆಟಪ್‌ನಲ್ಲಿ ತೋರಿಸ್ತೀವಿ ನೋಡಿ. ಮಲೈಕಾ ಟಿ ವಸುಪಾಲ್‌ ಗುಡ್‌ ಡ್ಯಾನ್ಸರ್‌ ಕೂಡ. ಬಹುಶಃ ಸೀರಿಯಲ್‌ನಲ್ಲಿ ಅವ್ರಿಗೆ ಅವಕಾಶ ಸಿಕ್ಕರೆ ಮತ್ತೊಂದು ಕಲೆಯೂ ಅನಾವರಣವಾಗ್ಲಿದೆ.

blank

ಒಂದಂತೂ ಸತ್ಯ.. ಕನ್ನಡ ಸೀರಿಯಲ್‌ಗೆ ಫ್ರೆಶ್ ಫೇಸ್ ಸಿಕ್ಕಿದೆ. ಇದೇ ಜುಲೈ 19ರಂದು ಹಿಟ್ಲರ್‌ ಕಲ್ಯಾಣ ಲಾಂಚ್ ಆಗ್ಲಿದೆ. ಅವತ್ತೂ ಮಲೈಕಾ ಅಧಿಕೃತವಾಗಿ ಕನ್ನಡ ಸೀರಿಯಲ್‌ ಇಂಡಸ್ಟ್ರಿಗೆ ಪಾದಾರ್ಪಣೆ ಮಾಡಲಿದ್ದಾರೆ. ಆಲ್ ದಿ ಬೆಸ್ಟ್‌ ಮಲೈಕಾ.

The post ಹಿಟ್ಲರ್‌ ಕಲ್ಯಾಣದ ‘ಯಡವಟ್ಟು ಲೀಲಾ’ ಯಾರು ಗೊತ್ತಾ..? appeared first on News First Kannada.

Source: newsfirstlive.com

Source link