ಡೆಲ್ಟಾ, ಡೆಲ್ಟಾ+ ಬೆನ್ನಲ್ಲೇ ಕಪ್ಪಾ ವೇರಿಯಂಟ್ ವೈರಸ್​​ ಪತ್ತೆ; ರೋಗಿ ಸಾವು

ಡೆಲ್ಟಾ, ಡೆಲ್ಟಾ+ ಬೆನ್ನಲ್ಲೇ ಕಪ್ಪಾ ವೇರಿಯಂಟ್ ವೈರಸ್​​ ಪತ್ತೆ; ರೋಗಿ ಸಾವು

ನವದೆಹಲಿ: ಕೊರೊನಾ ವೈರಸ್​ ಬೆನ್ನಲ್ಲೇ ಉತ್ತರಪ್ರದೇಶದಲ್ಲಿ ಡೆಲ್ಟಾ ವೇರಿಯಂಟ್ ಆರ್ಭಟ ಜೋರಾಗಿತ್ತು. ಇದರ ಪರಿಣಾಮ ಇಲ್ಲಿ ಮೊದಲ ಎರಡು ಡೆಲ್ಟಾ ವೇರಿಯಂಟ್​​ ಕೇಸ್​ಗಳು ವರದಿಯಾದವು. ಇದೀಗ ಉತ್ತಪ್ರದೇಶದಲ್ಲಿ ಕೋವಿಡ್​​-19 ರೂಪಾಂತರಿಯ ಮತ್ತೊಂದು ವೈರಸ್​ ಕಾಣಿಸಿಕೊಂಡು ಜನರಲ್ಲಿ ಆತಂಕ ಹುಟ್ಟಿಸಿದೆ.

ಹೌದು, ಇಲ್ಲಿನ ಸಂತ ಕಬೀರ್​​ ನಗರದಲ್ಲಿ ಕಪ್ಪ ಎಂಬ ವೇರಿಯಂಟ್ ಸೋಂಕು ಪ್ರಕರಣ​ ಕಾಣಿಸಿಕೊಂಡು 66 ವರ್ಷದ ವ್ಯಕ್ತಿಯೋರ್ವ ಅಸುನೀಗಿದ್ದಾರೆ. ಕೊರೊನಾ ಸೋಂಕು ಕಾಣಿಸಿಕೊಂಡಿದ್ದ ಇವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುತ್ತಿರುವಾಗ ಕಪ್ಪಾ ವೇರಿಯಂಟ್ ಸೋಂಕು ಕಾಣಿಸಿಕೊಂಡಿತು. ಜೂ.12 ರಂದು ಈ ಸೋಂಕಿಗೆ ಚಿಕಿತ್ಸೆ ನೀಡಲು ಶುರು ಮಾಡಿದೆವು. ಆದರೆ, ಜೂ.14 ರಂದು ಚಿಕಿತ್ಸೆ ಫಲಕಾರಿಯಾಗದೇ ಈ ವ್ಯಕ್ತಿ ಪ್ರಾಣಬಿಟ್ಟರು ಎಂದು ವೈದ್ಯ ಅಮರೇಶ್​​ ಸಿಂಗ್​​ ಹೇಳಿದ್ದಾರೆ.

ಡೆಲ್ಟಾ ವೇರಿಯಂಟ್​ ಕೇಸ್​ಗಳು ಕಡಿಮೆಯಾಗುತ್ತಿವೆ ಎಂಬ ಸಮಾಧಾನದ ಸುದ್ದಿ ಕೇಳಿದ್ದ ಜನರಿಗೆ ಈ ಕಪ್ಪಾ ವೈರಸ್​ ಕಾಣಿಸಿಕೊಂಡು ಜೀವಭಯ ಹುಟ್ಟಿಸಿದೆ. ಇದು ಕೊರೊನಾ ಮೂರನೇ ಅಲೆಗೆ ಕಾರಣವಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

The post ಡೆಲ್ಟಾ, ಡೆಲ್ಟಾ+ ಬೆನ್ನಲ್ಲೇ ಕಪ್ಪಾ ವೇರಿಯಂಟ್ ವೈರಸ್​​ ಪತ್ತೆ; ರೋಗಿ ಸಾವು appeared first on News First Kannada.

Source: newsfirstlive.com

Source link