ಮಣಿರತ್ನಂ ಮಾಸ್ಟರ್​​ಪೀಸ್​​; ಪ್ರಕಾಶ್ ರೈ, ವಿಜಯ್​ ಸೇತುಪತಿ, ಸೂರ್ಯನ ನೀವು ಹೀಗೆ ನೋಡಿರೋದೇ ಇಲ್ಲ

ಮಣಿರತ್ನಂ ಮಾಸ್ಟರ್​​ಪೀಸ್​​; ಪ್ರಕಾಶ್ ರೈ, ವಿಜಯ್​ ಸೇತುಪತಿ, ಸೂರ್ಯನ ನೀವು ಹೀಗೆ ನೋಡಿರೋದೇ ಇಲ್ಲ

​ಭಾರತೀಯ ಸಿನಿಮಾ ರಂಗದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ನಿರ್ದೇಶಕ ಮಣಿರತ್ನಂ ನಿರ್ಮಾಣದ ‘ನವರಸ’ ಎಂಬ ಒಂಬತ್ತು ಕಥೆಗಳ ಗುಚ್ಛದ ತಮಿಳು ಸಿನಿಮಾ ಟೀಸರ್​​ ರಿಲೀಸ್​​ ಆಗಿದೆ. ನೆಟ್‌ಫ್ಲಿಕ್ಸ್‌ನಲ್ಲಿ ತೆರೆಕಾಣಲು ಸಜ್ಜಾಗಿರುವ ಈ ಸಿನಿಮಾದ ಟೀಸರ್​​ಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

ನವರಸ ಸಿನಿಮಾ ಟೀಸರ್​​ನಲ್ಲಿ ಒಂಬತ್ತು ಕಥೆಗಳ ಬಗೆಬಗೆಯ ರಸಗಳ ದರ್ಶನ ಮಾಡಿಸಲಾಗಿದೆ. ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ ನಟ ವಿಜಯ್​ ಸೇತುಪತಿ, ಸೂರ್ಯ, ಸಿದ್ದಾರ್ಥ್, ಅರವಿಂದ್ ಸ್ವಾಮಿ, ಪ್ರಕಾಶ್​​ ರಾಜ್​​, ಗೌತಮ್​​ ಮೆನನ್, ಅಂಜಲಿ, ಪಾರ್ವತಿ ನಾಯರ್, ನಿತ್ಯಾ ಮೆನನ್​ ಸೇರಿದಂತೆ​​ ಹಲವರು ತಮ್ಮ ನಟನೆ ಮೂಲಕ ಸೈ ಎನಿಸಿಕೊಂಡಿದ್ದಾರೆ.

ನವರಸ’ ಎಂಬ ಒಂಬತ್ತು ಕಥೆಗಳ ಗುಚ್ಛದ ತಮಿಳು ‘ಆಂಥಾಲಜಿ’ ಸಿನಿಮಾ. ಮಣಿರತ್ನಂ ಈ ಸಿನಿಮಾದ ಯಾವ ಕಥೆಯನ್ನೂ ನಿರ್ದೇಶಿಸಿಲ್ಲ. ಒಂಬತ್ತು ಭಿನ್ನ ನಿರ್ದೇಶಕರು ತಮ್ಮ ತಂಡಗಳೊಂದಿಗೆ ಒಂಬತ್ತು ಕಥೆಗಳನ್ನು ನಿರ್ದೇಶಿಸಿದ್ದಾರೆ.

The post ಮಣಿರತ್ನಂ ಮಾಸ್ಟರ್​​ಪೀಸ್​​; ಪ್ರಕಾಶ್ ರೈ, ವಿಜಯ್​ ಸೇತುಪತಿ, ಸೂರ್ಯನ ನೀವು ಹೀಗೆ ನೋಡಿರೋದೇ ಇಲ್ಲ appeared first on News First Kannada.

Source: newsfirstlive.com

Source link