ಹಠದಿಂದ SSLC ಪರೀಕ್ಷೆ ಮಾಡ್ತಿಲ್ಲವಂತೆ ಶಿಕ್ಷಣ ಸಚಿವರು; ಎಷ್ಟು ಜನರಿಗೆ ಲಸಿಕೆ ಆಗಿದೆ ಗೊತ್ತಾ?

ಹಠದಿಂದ SSLC ಪರೀಕ್ಷೆ ಮಾಡ್ತಿಲ್ಲವಂತೆ ಶಿಕ್ಷಣ ಸಚಿವರು; ಎಷ್ಟು ಜನರಿಗೆ ಲಸಿಕೆ ಆಗಿದೆ ಗೊತ್ತಾ?

ಬೆಂಗಳೂರು: ಎಸ್ಎಸ್ಎಲ್​​ಸಿ ವಿದ್ಯಾರ್ಥಿಗಳ ಜೊತೆ ವಿಡಿಯೋ ಸಂವಾದ ನಡೆಸಿದ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು, ಹಠದಿಂದ ನಾವು ಎಸ್​​ಎಸ್​​ಎಲ್​ಸಿ ಪರೀಕ್ಷೆ ಮಾಡುತ್ತಿಲ್ಲ. ಭಾವನೆ , ಅಭಿಪ್ರಾಯ ಅರಿತು ಪರೀಕ್ಷೆ ನಡೆಸುತ್ತಿದ್ದೇವೆ ಎಂದು ಸ್ಪಷ್ಟಪಡಿಸಿದರು.

ಎಲ್ಲಾ ಜಿಲ್ಲಾಧಿಕಾರಿಗಳು ಹಾಗೂ ಡಯಟ್ ಮೂಲಕ ವಿದ್ಯಾರ್ಥಿಗಳ ಜೊತೆ ಸಂವಾದ ಮಾಡಲಾಯಿತು. ಚರ್ಚೆಯಲ್ಲಿ ಎಲ್ಲಾ ಜಿಲ್ಲೆಯ ಮಕ್ಕಳು ಭಾಗಿಯಾಗಿದ್ದರು. ಪರೀಕ್ಷೆ ಬಗ್ಗೆ ಇರುವ ಸಲಹೆ ಹಾಗೂ ಸೂಚನೆ ಸಮಸ್ಯೆ ಹೇಳಿಕೊಂಡಿದ್ದಾರೆ. ಕಳೆದ ವರ್ಷ ಜುಲೈನಲ್ಲಿ ಕೊರೊನಾ ಪಾಸಿಟಿವಿಟಿ ದರ 13.2 ರಷ್ಟಿತ್ತು. ಸದ್ಯ 1.7 ಪಾಸಿಟಿವಿಟಿ ಇದೆ. ರಾಜ್ಯದಲ್ಲಿ ಎಲ್ಲಾ ಅನ್​​ಲಾಕ್ ಆಗಿದೆ. ಕಳೆದ ವರ್ಷ ಆರು ದಿನ ಎಕ್ಸಾಂ ಮಾಡಲಾಗಿತ್ತು. ಆದರೆ ಈ ವರ್ಷ ಎರಡು ದಿನ ಎಕ್ಸಾಂ ಮಾಡಲಾಗುತ್ತಿದೆ ಎಂದರು.

ಇದನ್ನೂ ಓದಿ: ಜುಲೈ 19, 22 ರಂದು SSLC ಪರೀಕ್ಷೆ: ವಿದ್ಯಾರ್ಥಿಗಳಿಗೆ ಧೈರ್ಯ ತುಂಬಲು ಮುಂದಾದ ಶಿಕ್ಷಣ ಸಚಿವರು

ಆರೋಗ್ಯ ಇಲಾಖೆಯಿಂದ ಸಮ್ಮತಿ ಪಡೆದಿದ್ದೇವೆ….
ಪರೀಕ್ಷೆ ಬರೆಯುವ ವಿದ್ಯಾರ್ಥಿ ಹಾಗೂ ಸಿಬ್ಬಂದಿಗಳಿಗೆ ಕೆಲ ಸಂಘ ಸಂಸ್ಥೆಗಳು ಮಾಸ್ಕ್ ನೀಡಲು ಮುಂದಾಗಿವೆ. ಯೂಥ್ ಪಾರ್ ಸೇವಾ ಎಂಬ ಸಂಸ್ಥೆ 1 ಲಕ್ಷ 10 ಸಾವಿರ ಮಾಸ್ಕ್, EMBASY ಸಂಸ್ಥೆಯಿಂದ 8 ಲಕ್ಷ 86 ಸಾವಿರ ವಿದ್ಯಾರ್ಥಿಗಳಿಗೆ ಉಚಿತ ಸ್ಯಾನಿಟೈಸರ್ ನೀಡುತ್ತಿದೆ. ಸಂಘ ಸಂಸ್ಥೆಗಳು ಶಿಕ್ಷಣ ಇಲಾಖೆ ಜೊತೆ ಕೈ ಜೊಡಿಸಿರೊದು ತುಂಬಾ ಸಹಾಯಕಾರಿ. ಪಿಯುಸಿ ಮತ್ತು ಎಸ್​​ಎಸ್​​ಎಲ್​ಸಿ ಪರೀಕ್ಷೆಗೆ ವ್ಯತ್ಯಾಸ ಇದೆ. ಪಿಯುಸಿನಲ್ಲಿ 19 ದಿನ ಪರೀಕ್ಷೆ ನಡೆಸಬೇಕು. ಅವರಿಗೆ ಸದ್ಯ ಫಲಿತಾಂಶ ನೀಡಲು ಆಧಾರ ಇದೆ. ಆದರೆ ಎಸ್​​ಎಸ್​ಎಲ್​​ಸಿ ಪರೀಕ್ಷೆ ಪಾಸ್ ಮಾಡಲು ಯಾವುದೇ ಆಧಾರ ಸಿಕ್ಕಿಲ್ಲ. ಆದ್ದರಿಂದ ಪರೀಕ್ಷೆ ನೇರ ಹಾಗೂ ಸರಳವಾಗಿ ಇರುತ್ತೆ. ರಾಜ್ಯದ ಆರೋಗ್ಯ ಇಲಾಖೆಯ ಸಮ್ಮತಿ ಪಡೆದು ಪರೀಕ್ಷೆ ನಡೆಸಲಾಗುತ್ತಿದ್ದು, ಅನೇಕ ಶಿಕ್ಷಕರು , ಪೋಷಕರ ಅಭಿಪ್ರಾಯ ಪಡೆದಿದ್ದೇವೆ. ಕೇವಲ 10 ದಿನ ಮಾತ್ರ ಪರೀಕ್ಷೆ ಗೆ ಸಮಯ ಇದೆ. 10 ದಿನ ಪರೀಕ್ಷೆ ಇರುವಾಗ ಗೊಂದಲ ಉಂಟು ಮಾಡುವುದು ಸರಿಯಲ್ಲ ಎಂದರು.

ಇದನ್ನೂ ಓದಿ: ಒಂದು ಹಾಲ್​ನಲ್ಲಿ 12 ವಿದ್ಯಾರ್ಥಿಗಳಿಗಷ್ಟೇ ಅವಕಾಶ: SSLC ಪರೀಕ್ಷೆ ಹೇಗೆ ನಡೆಯಲಿದೆ..?

ಶೇ.95 ಮಂದಿಗೆ ಲಸಿಕೆ ಸಿಕ್ಕಿದೆ…
ಸಂವಾದದಲ್ಲಿ ಮಕ್ಕಳು ಹಲವು ಪ್ರಶ್ನೆ ಕೇಳಿದ್ದಾರೆ. ಒಬ್ಬ ಹುಡುಗಿ ಮೊಬೈಲ್ ನಲ್ಲಿ ಅನ್ ಲೈನ್ ಪಾಠ ಕೇಳಲು ಮನವಿ ಮಾಡಿದೆ. ಆ ಮಗುವಿಗೆ ವಿಶ್ವಾಸ ಕೂಡ ಕೊಟ್ಟಿದ್ದೇವೆ. ಹೀಗಾಗಿ ಸೋಮವಾರ ಈ ಕುರಿತು ಸಭೆ ನಡೆಸುತ್ತೇವೆ. ಕೆಲವು ಭಾಗಗಲ್ಲಿ ಇಂಟರ್ನೆಟ್ ಸೇವೆ ಇಲ್ಲ. ಎಲ್ಲಿ ಸೇವೆ ಇಲ್ಲವೋ ಅಲ್ಲಿ ಸೇವೆ ಆರಂಭ ಮಾಡಲು ಜಿಯೋ, ಏರ್​ಟೆಲ್ ಸೇರಿದಂತೆ ಎಲ್ಲಾ ಸರ್ವೀಸ್ ಜೊತೆ ಮಾತು ಕತೆ ಮಾಡುತ್ತೇನೆ. ತರಗತಿ ಹೇಗೆ ಆರಂಭ , ವಿದ್ಯಾಗಮ ಹೇಗೆ ಅಂತ ಆಯುಕ್ತರ ಒಂದು ಕಾರ್ಯ ಪಡೆ ರಚನೆ ಆಗಿದೆ. ಈ ತಂಡ ಒಂದು ಸಂಪೂರ್ಣ ವರದಿ ನೀಡಿದೆ. ಪರೀಕ್ಷೆಗಾಗಿ 1 ಲಕ್ಷ 90 ಸಾವಿರ 461 ಸಿಬ್ಬಂದಿ ಪರೀಕ್ಷೆ ಗೆ ಕೆಲಸ ಮಾಡುತ್ತಿದ್ದಾರೆ. ಇದರಲ್ಲಿ ಶೇ.95 ರಷ್ಟು ಸಿಬ್ಬಂದಿ ಮೊದಲ ಡೋಸ್ ವ್ಯಾಕ್ಸಿನ್ ಪಡೆದಿದ್ದಾರೆ. ಪರೀಕ್ಷಾ ಪ್ರವೇಶ ಪತ್ರದ ಬಗ್ಗೆ ಸಮಸ್ಯೆ ಇದ್ದರೇ, ಬಿಇಎ ಗಮನಕ್ಕೆ ತನ್ನಿ. ಈ ವರ್ಷ ಯಾವ ಕಾಲೇಜುಗಳು ಮಕ್ಕಳ ಸಂಖ್ಯೆ ಜಾಸ್ತಿ ಮಾಡಬೇಕು ಅಂದ್ರೆ ಅರ್ಜಿ ಸಲ್ಲಿಸಬಹುದು. ಸರ್ಕಾರಿ ಕಾಲೇಜುಗಳಲ್ಲಿ ಕೂಡ ಸೀಟ್ ಹೆಚ್ಚಳ ಮಾಡಲಾಗುತ್ತೆ ಎಂದು ತಿಳಿಸಿದರು.

ಇದನ್ನೂ ಓದಿ: ರದ್ದಾಗುತ್ತಾ SSLC ಪರೀಕ್ಷೆ? ಹೈಕೋರ್ಟ್​ಗೆ ಮತ್ತೊಂದು ಅರ್ಜಿ ಸಲ್ಲಿಕೆ

ಕಳೆದ ಬಾರಿಯೂ ಕೋರ್ಟ್​​ಗೆ ಹೋಗಿತ್ತು….
ಹೈಕೋರ್ಟ್ ನಲ್ಲಿ ಎಸ್​ಎಸ್​​ಎಲ್​ಸಿ ಪರೀಕ್ಷೆ ಬಗ್ಗೆ ಪಿಐಎಲ್​ ವಿಚಾರವಾಗಿ ಪ್ರತಿಕ್ರಿಯೆ ನೀಡಿ, ಕಳೆದ ಬಾರಿ ಕೂಡ ಪರೀಕ್ಷೆ ಕೋರ್ಟ್ ಮೆಟ್ಟಿಲೇರಿತ್ತು. ಈ ಬಾರಿ ಕೂಡ ಅದೇ ರೀತಿ ಆಗಿದೆ. ರಾಜ್ಯದ ಹೈಕೋರ್ಟ್​ ಕಳೆದ ಬಾರಿ ನಮ್ಮ SOP ನೋಡಿ ಪರೀಕ್ಷೆಗೆ ಅವಕಾಶ ಕೊಟ್ಟಿತ್ತು ಎಂದರು. ಅಲ್ಲದೇ ಜುಲೈ 20 ಆಸು ಪಾಸಿನಲ್ಲಿ ದ್ವಿತೀಯ ಪಿಯುಸಿ ಫಲಿತಾಂಶ ಲಭಿಸುತ್ತದೆ ಎಂದರು.

The post ಹಠದಿಂದ SSLC ಪರೀಕ್ಷೆ ಮಾಡ್ತಿಲ್ಲವಂತೆ ಶಿಕ್ಷಣ ಸಚಿವರು; ಎಷ್ಟು ಜನರಿಗೆ ಲಸಿಕೆ ಆಗಿದೆ ಗೊತ್ತಾ? appeared first on News First Kannada.

Source: newsfirstlive.com

Source link