ಕೇರಳದಲ್ಲಿ ಝೀಕಾ ವೈರಸ್​ ಭೀತಿ: 6 ವಿಶೇಷ ಟೀಮ್​ಗಳನ್ನು ಕಳಿಸಿದ ಕೇಂದ್ರ

ಕೇರಳದಲ್ಲಿ ಝೀಕಾ ವೈರಸ್​ ಭೀತಿ: 6 ವಿಶೇಷ ಟೀಮ್​ಗಳನ್ನು ಕಳಿಸಿದ ಕೇಂದ್ರ

ಕೇರಳ: ಕೇರಳ ರಾಜ್ಯದಲ್ಲಿ ಕೊರೊನಾ ನಂತರ ಇದೀಗ ಝೀಕಾ ವೈರಸ್​ನ ಭೀತಿ ಎದುರಾಗಿದೆ. ಇತ್ತೀಚೆಗೆ 14 ಝೀಕಾ ವೈರಸ್ ಪ್ರಕರಣಗಳು ಪತ್ತೆಯಾಗಿದ್ದು ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಹೈ ಅಲರ್ಟ್ ಘೋಷಿಸಲಾಗಿದೆ. ತಿರುವನಂತಪುರಂನಲ್ಲಿ ಈ ಸೋಂಕು ಹರಡಿರುವ ಬಗ್ಗೆ ಅಲ್ಲಿನ ಆರೋಗ್ಯ ಸಚಿವೆ ವೀಣಾ ಜಾರ್ಜ್ ಮಾಹಿತಿ ನೀಡಿದ್ದಾರೆ.

ಝೀಕಾ ವೈರಸ್ ಸೊಳ್ಳೆಗಳಿಂದ ಹರಡುವ ಸೋಂಕಾಗಿದ್ದು ಇದು ಮಕ್ಕಳ ಮಿದುಳನ್ನೇ ತಿಂದುಹಾಕುತ್ತದೆ ಎಂದು ಹೇಳಲಾಗಿದೆ.. ಅಲ್ಲದೇ ಇದನ್ನು ಆಟೋ-ಇಮ್ಯೂನ್ ಡಿಸೀಸ್ ಆಗಿದ್ದು ಇದಕ್ಕೆ ಗಿಲ್ಲೇಯ್ನ್ ಸಿಂಡ್ರೋಮ್ ಎಂಬ ಹೆಸರೂ ಇದೆ. ಸೊಳ್ಳೆಯನ್ನು ಹೊರತುಪಡಿಸಿ ಲೈಂಗಿಕವಾಗಿಯೂ ಹರಡಿದ ಉದಾಹರಣೆಗಳಿವೆ.

blank

ವೀಣಾ ಜಾರ್ಜ್ ಹೇಳಿರುವಂತೆ ತಮಿಳುನಾಡು-ಕೇರಳ ಬಾರ್ಡರ್​ನ 24 ವರ್ಷದ ಗರ್ಭಿಣಿ ಮಹಿಳೆಯೋರ್ವರಲ್ಲಿ ಮೊದಲಿಗೆ ಝೀಕಾ ವೈರಸ್ ಕಾಣಿಸಿಕೊಂಡಿತ್ತು. ಅವರನ್ನ ತಿರುವನಂತಪುರಂನ ಆಸ್ಪತ್ರೆಯೊಂದಕ್ಕೆ ಜೂನ್ 28 ರಂದು ದಾಖಲು ಮಾಡಲಾಗಿತ್ತು. ಗರ್ಭಿಣಿ ಮಹಿಳೆಗೆ ಜ್ವರ, ತಲೆನೋವು ಮತ್ತು ರ್ಯಾಷಸ್ ಲಕ್ಷಣಗಳು ಕಾಣಿಸಿಕೊಂಡಿದ್ದವು. ಗರ್ಭಿಣಿ ಮಹಿಳೆಗೆ ಹೆರಿಗೆಯೂ ಆಗಿದೆ. ಸದ್ಯ ಆಕೆಯ ಆರೋಗ್ಯ ಸ್ಥಿತಿ ಸಾಮಾನ್ಯವಾಗಿದೆ.. ಆಕೆ ರಾಜ್ಯದಿಂದ ಹೊರಗೆ ಎಲ್ಲೂ ಪ್ರಯಾಣ ಮಾಡಿಲ್ಲ.

ಸದ್ಯ ರಾಜ್ಯದಲ್ಲಿ ಮಾನ್ಸೂನ್ ಇರುವುದರಿಂದ ಸೊಳ್ಳೆಗಳಿಗೆ ಇದು ಸಂತಾನದ ಸಮಯವಾಗಿದ್ದು ಸದ್ಯ ಸೋಂಕು ತಗುಲಿರುವ ಪ್ರದೇಶಗಳಲ್ಲಿ ಸೊಳ್ಳೆಗಳ ಸಮಸ್ಯೆ ಇದೆ ಎಂದು ಆರೋಗ್ಯ ಸಚಿವೆ ಹೇಳಿಕೆ ನೀಡಿದ್ದಾರೆ.

ಇನ್ನು ಸೋಂಕು ಬೇರೆ ರಾಜ್ಯಗಳಿಗೂ ಹರಡುವ ಭೀತಿ ಇದ್ದು ಸದ್ಯ ಕೇಂದ್ರ ಸರ್ಕಾರ ಕೇರಳಕ್ಕೆ 6 ವಿಶೇಷ ತಂಡಗಳನ್ನು ಕಳುಹಿಸಿದ್ದು ಸೋಂಕಿನ ಕುರಿತು ಅಧ್ಯಯನ ನಡೆಸುವಂತೆ ಹೇಳಿದೆ.

The post ಕೇರಳದಲ್ಲಿ ಝೀಕಾ ವೈರಸ್​ ಭೀತಿ: 6 ವಿಶೇಷ ಟೀಮ್​ಗಳನ್ನು ಕಳಿಸಿದ ಕೇಂದ್ರ appeared first on News First Kannada.

Source: newsfirstlive.com

Source link