ಈ ದ್ರಾಕ್ಷಿ ಹಣ್ಣಿನ ಬೆಲೆ ₹7 ಲಕ್ಷ; ಒಂದು ಬಾರಿ ನೀವು ತಿಂದ್ರೆ.. ಇದೇ ಬೇಕು ಅನ್ನೋದ್ರಲ್ಲಿ ಡೌಟೇ ಇಲ್ಲ

ಈ ದ್ರಾಕ್ಷಿ ಹಣ್ಣಿನ ಬೆಲೆ ₹7 ಲಕ್ಷ; ಒಂದು ಬಾರಿ ನೀವು ತಿಂದ್ರೆ.. ಇದೇ ಬೇಕು ಅನ್ನೋದ್ರಲ್ಲಿ ಡೌಟೇ ಇಲ್ಲ

ದ್ರಾಕ್ಷೀ.. ಹಣ್ಣುಗಳ ರಾಣಿ.. ಕೊಟ್ಟಷ್ಟು ತಿನ್ನಬಹುದಾದ ಈ ಹಣ್ಣು ವಿಶ್ವ ಪ್ರಸಿದ್ಧಿ. ಅಸಲಿಗೆ ಈ ಹಣ್ಣಿನ ಗೊಂಚಲಿಗೆ ಎಷ್ಟೂ ಕೊಡ್ತೀರಾ? ಅಬ್ಬಾಬ್ಬಾ ಅಂದ್ರೆ ಕೆ.ಜಿಗೆ 100 ರೂಪಾಯಿ ಅನ್ಕೊಬಹುದು. ಆದರೆ ಈ ದೇಶದಲ್ಲಿ ಒಂದು ವಿಶೇಷ ತಳಿಯ ದ್ರಾಕ್ಷಿ ಹಣ್ಣಿದೆ. ಇದನ್ನು ಸವಿಯ ಬೇಕಾದರೆ ನೀವು ಕೋಟ್ಯಾಧೀಶರ ಮಕ್ಕಳೇ ಆಗ್ಬೇಕು!

ವಿಶಾಲವಾದ ತೋಟದಲ್ಲಿ ಸಾಲು ಸಾಲು ಗಿಡಗಳ ಕೆಳಗೆ, ಗೊಂಚಲು ಗೊಂಚಲಾಗಿ ಬಿಡುವ ದ್ರಾಕ್ಷಿಯನ್ನು ನೋಡೋದೇ ಒಂದು ಚಂದ. ದ್ರಾಕ್ಷಿಯನ್ನು ಸಾಮಾನ್ಯವಾಗಿ ಹಣ್ಣುಗಳ ರಾಣಿ ಎಂದು ಕರೆಯುತ್ತಾರೆ, ದ್ರಾಕ್ಷಿ ಎಂದ ಕೂಡಲೆ ಕೆಲುವೊಮ್ಮೆ ಸಿಹಿಯಾಗಿ ಇನ್ನು ಕೆಲುವುಮ್ಮೆ ಹುಳಿಯ ನೆನಪಾಗಿ ಬಾಯಲ್ಲಿ ನೀರೂರದೇ ಇರದು. ದ್ರಾಕ್ಷಿಯಲ್ಲಿ ಕೆಂಪು, ಹಸಿರು ಹಾಗೂ ನೀಲಿ ಅಥವಾ ಕಪ್ಪು ಬಣ್ಣಗಳಲ್ಲಿ ನೋಡಿರುತ್ತೇವೆ. ಅದರಲ್ಲೂ ಹಸಿರು ಮತ್ತು ಕಪ್ಪು ದ್ರಾಕ್ಷಿ ಎಲ್ಲರಿಗೂ ಪರಿಚಯ. ಇಷ್ಟೆ ಅಲ್ಲ ಈ ದ್ರಾಕ್ಷಿಗೆ ಹಲವು ರೀತಿಯಲ್ಲಿ ಸವಿಯಲಾಗುತ್ತೆ. ದ್ರಾಕ್ಷಿ ಜ್ಯಾಮ್, ದ್ರಾಕ್ಷಿ ರಸ ಒಣದ್ರಾಕ್ಷಿ ಮತ್ತು ವೈನ್​​ಗಳ ರೂಪದಲ್ಲಿ ದ್ರಾಕ್ಷಿಯನ್ನು ಸವಿದಿರುತ್ತೇವೆ. ಆದರೆ ಈ ಹಣ್ಣಿಗೆ ಅದೆಷ್ಟು ಖರ್ಚು ಮಾಡ್ತೀರಾ? ಒಂದು ವೇಳೆ ಇದೇ ಹಣ್ಣು ಬಲು ದುಬಾರಿಗೆ ಖರೀದಿಸಿ ಅಂದ್ರೆ ತಗೊತೀರ? ಅಂತದೊಂದು ದ್ರಾಕ್ಷಿ ಬಗ್ಗೆ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಇದು ವಿಶ್ವದ ಅತಿ ದುಬಾರಿ ಮಾವು; 1 ಕೆಜಿಗೆ ₹3 ಲಕ್ಷ ಇರೋ ಇದನ್ನ ಕಾಯೋದೇ ದೊಡ್ಡ ಸವಾಲು

blank

ಈ ದ್ರಾಕ್ಷಿಯ ಬೆಲೆ ಬರೋಬರಿ 7 ಲಕ್ಷ ರೂಪಾಯಿ
ಸಾಮಾನ್ಯವಾಗಿ ಮಾರುಕಟ್ಟೆಯಲ್ಲಿ ಒಂದು ಕೆಜಿ ದ್ರಾಕ್ಷಿ ಹಣ್ಣಿನ ಬೆಲೆ ಸುಮಾರು ಅಂದರೆ 50 ರೂಪಾಯಿ ತನಕ ಇರುತ್ತದೆ ಮತ್ತು ಇನ್ನು ಒಳ್ಳೆಯ ತಳಿಯ ದ್ರಾಕ್ಷಿ ಹಣ್ಣಿನ ಬೆಲೆ ಸುಮಾರು 100 ರಿಂದ 150 ರೂಪಾಯಿ ಇರುವುದನ್ನ ಕೂಡ ನಾವು ನೋಡಿರುತ್ತೇವೆ. ಆದ್ರೆ ಈ ಒಂದು ದ್ರಾಕ್ಷಿ ಹಣ್ಣಿನ ಬೆಲೆ ಒಂದು ಕೆಜಿಗೆ ಬರೋಬ್ಬರಿ 7 ಲಕ್ಷ ರೂಪಾಯಿ. ನೋಡಲು ಕೆಂಪು ಕೆಂಪಾಗಿ ದಪ್ಪ ಚರ್ರಿ ಹಣ್ಣಿನಂತೆ ಕಾಣುವ ಈ ಹಣ್ಣು ನಿಜಕ್ಕೂ ದ್ರಾಕ್ಷಿಯೇ. ಎಲ್ಲ ದ್ರಾಕ್ಷಿಯಂತೆ ಗೊಂಚಲು ಗೊಂಚಲಾಗಿ ಬಳ್ಳಿಯಲ್ಲಿ ಬೆಳೆಯುವ ಈ ಹಣ್ಣು ಅದೇಕೇ ಅಷ್ಟು ದುಬಾರಿ ? ಅಂತಾ ವಿಶೇಷತೆ ಏನಿದೆ ಇದ್ರಲ್ಲಿ ಅನ್ನೋ ಸಹಜ ಪ್ರಶ್ನೆಗಳು ನಿಮ್ಮಲ್ಲಿ ಮೂಡಿರುತ್ತೆ. ಆದ್ರೆ ಈ ದ್ರಾಕ್ಷಿಯ ಬಗ್ಗೆ ಒಂದಷ್ಟು ಮಾಹಿತಿ ಕೊಟ್ರೆ, ಇದಕ್ಕೆ ಅಷ್ಟು ಬೆಲೆ ಇರ್ಬೋದು ಅಂತೀರ. ಇದರ ಹೆಸರು ಏನ್ ಗೊತ್ತಾ ? ರೂಬಿ ರೋಮನ್.

ಇದನ್ನೂ ಓದಿ: ಅಮೆರಿಕಾವನ್ನೇ ಬೆಚ್ಚಿ ಬೀಳಿಸಿದ ವಿಕ್ಷಿಪ್ತ ಸೆಕ್ಸ್ ಕಲ್ಟ್; ಕಾಮುಕ ಸೆಲೆಬ್ರಿಟಿಗಳ ಅಸಲೀ ಕಹಾನಿ ಏನ್​ ಗೊತ್ತಾ?

ಜಪಾನ್ ದೇಶದಲ್ಲಿ ಮೊದಲ ಬಾರಿ ಸೃಷ್ಟಿಯಾದ ರೂಬಿ ರೋಮನ್!
400 ವಿವಿಧ ತಳಿಯ ದ್ರಾಕ್ಷಿ ಹಣ್ಣಿನ ಸಂಶೋಧನೆಯಲ್ಲಿ ಹುಟ್ಟಿದ ರೂಬಿ

ಈ ಹಣ್ಣು ನಮ್ಮ ದೇಶದ್ದಂತೂ ಅಲ್ಲ. ಅದೇನೋ ದುಬಾರಿ ಹಣ್ಣುಗಳು ಜಪಾನ್ ದೇಶದಲ್ಲಿ ಮಾತ್ರ ಸಿಗೋದು ಅನ್ಸುತ್ತೆ. ಈ ಹಿಂದೆ ಜಪಾನ್ ದೇಶದ ಒಂದು ದುಬಾರಿ ಮಾವಿನ ಹಣ್ಣಿನ ಬಗ್ಗೆ ಎಲ್ಲೆಲ್ಲೂ ಸುದ್ದಿಯಾಗಿತ್ತು. ಅದೇ ರೀತಿ ಈ ಹಣ್ಣು ಕೂಡ 1995 ರಲ್ಲಿ ಜಪಾನ್ ದೇಶದಲ್ಲಿ ಸುಮಾರು 400 ದಾಕ್ಷಿ ಹಣ್ಣಿನ ತಳಿಗಳನ್ನ ಸಂಶೋಧನೆಗೆ ಒಳಪಡಿಸಲಾಗಿತ್ತು, ಆಗ ಹುಟ್ಟಿದ್ದೆ ಈ ಒಂದು ವಿಶೇಷವಾದ ತಳಿ. ಇದೆ ಹಣ್ಣು ಮುಂದೆ ಎಲ್ಲೆಲ್ಲೂ ಪ್ರಚಲಿತವಾಗಿ, ಜಪಾನಿಯರು ಇದನ್ನು ಹೆಚ್ಚೆಚ್ಚು ಬೆಳೆಯಲು ಶುರು ಮಾಡಿದ್ದರು. ಆ ಹಣ್ಣು ಇದೀಗ ಪ್ರಪಂಚದ ಅತೀ ದುಬಾರಿ ದ್ರಾಕ್ಷಿ ಎಂದು ಪ್ರಸಿದ್ಧಿಯನ್ನ ಪಡೆಯುತ್ತಿದೆ. ಕಾರಣ ಜಪಾನ್ ರೈತರು ರೂಬಿ ರೋಮನ್ ದ್ರಾಕ್ಷಿಯನ್ನು ಬೆಳೆದು 7 ಲಕ್ಷದ ದಾಖಲೆಯ ಮೊತ್ತಕ್ಕೆ ಎಲ್ಲರಿಗೂ ಮಾರಾಟ ಮಾಡುತ್ತಿದ್ದಾರೆ.

ಇದನ್ನೂ ಓದಿ: ಸೂರ್ಯನ ಒಡಲಿನಲ್ಲಿ ಹಿಂದೆಂದು ಕಂಡರಿಯದ ಸ್ಫೋಟ! ಮುಂದೇನಾಗಬಹುದು?

ರೂಬಿ ರೋಮನ್ ಸಾಮಾನ್ಯ ದ್ರಾಕ್ಷಿಯ ತಳಿಯಲ್ಲ
ಈ ವಿಶೇಷ ದ್ರಾಕ್ಷಿಯ ವೈಶಿಷ್ಠಗಳು ಏನು ಗೊತ್ತಾ ?

ರೂಬಿ ರೋಮನ್ ದ್ರಾಕ್ಷಿ ಸಾಮಾನ್ಯವಾದ ದ್ರಾಕ್ಷಿ ಅಲ್ಲ, ಈ ದ್ರಾಕ್ಷಿ ಹಣ್ಣು ರಸಪೂರಿತವಾಗಿದ್ದು ಒಂದು ದ್ರಾಕ್ಷಿ ಹಣ್ಣನ್ನ ತಿಂದರೆ ಇಡೀ ಬಾಯಿ ಸಂಪೂರ್ಣವಾಗಿ ರಸದಿಂದ ತುಂಬಿ ಹೋಗುತ್ತೆ,ಅಷ್ಟೊಂದು ರಸ ಭರಿತ ಈ ಹಣ್ಣು. ಕೆಂಪು ಬಣ್ಣದಲ್ಲಿ ಈ ಹಣ್ಣು ಎಲ್ಲರನ್ನು ಆಕರ್ಷಿಸುತ್ತದೆ. ನೋಡಿದರೆ ತಿಂದು ಬಿಡುವ ಆಸೆ ಆಗುತ್ತದೆ. ಅಷ್ಟರ ಮಟ್ಟಿಗೆ ಕಣ್ಸೆಳೆಯುತ್ತೆ ಈ ಹಣ್ಣು. ಇನ್ನು ವಿಶ್ವದ ದೊಡ್ಡ ದೊಡ್ಡ ಶ್ರೀಮಂತರಿಗೆ ಈ ಹಣ್ಣಿನ ಮೇಲೆ ತುಂಬಾ ಆಸೆ. ಇದನ್ನು ಮನೆಯಲ್ಲಿ ತಂದಿಟ್ಟಿದ್ದರೆ ಅದೊಂದು ಪ್ರತಿಷ್ಟೆ. ದೊಡ್ಡ ದೊಡ್ಡ ಶ್ರೀಮಂತರು ಭಾಗಿಯಾಗುವ ಕೆಲವು ಸಮಾರಂಭಗಳಲ್ಲಿ, ಶುಭ ಕಾರ್ಯಕ್ರಮಗಲ್ಲಿ ಈ ಹಣ್ಣುಗಳನ್ನ ಉಡುಗೊರೆಯ ರೂಪದಲ್ಲಿ ಇನ್ನೊಬ್ಬರಿಗೆ ನೀಡಲಾಗುತ್ತದೆ. ಈ ದುಬಾರಿ ಹಣ್ಣಿಗೆ ಹೆಚ್ಚಾಗಿ ಚೀನಾದಲ್ಲಿ ರಷ್ಯಾದಲ್ಲಿ ಡಿಮ್ಯಾಂಡ್ ಇದ್ದು, ಬೆಲೆಯನ್ನು ಲೆಕ್ಕಿಸದೆ ಕಣ್ಣು ಮುಚ್ಚಿ ಖರೀದಿಸಿ ತಮ್ಮ ಪ್ರೀತಿ ಪಾತ್ರರ ಬಾಯಿಯನ್ನು ಸಿಹಿಗೊಳಿಸುತ್ತಾರೆ ಶ್ರೀಮಂತರು.

ಇದನ್ನೂ ಓದಿ: ಪರೇಡ್ ಮಾಡೋವಾಗ ಹೈ ಹೀಲ್ಸ್ ಹಾಕಲೇಬೇಕಂತೆ.. ಉಕ್ರೇನ್ ಮಹಿಳಾ ಆರ್ಮಿಗೆ ಇದೆಂಥಾ ಶಿಕ್ಷೆ..?

ಗೊಂಚಲಲ್ಲಿ ಒಂದು ದ್ರಾಕ್ಷಿ 20 ರಿಂದ 30 ಗ್ರಾಂ ತೂಗಲೇ ಬೇಕು
ನೋಡಲು ಕೆಂಪು ಪಿಂಗ್ ಪಾಂಗ್ ಬಾಲ್​​ನಂತೆ ಕಾಣಿಸಲೇಬೇಕು

ಏನೇ ಆದ್ರೂ ಈ ಹಣ್ಣಿಗೆ ಅಷ್ಟೊಂದು ದುಬಾರಿ ಆದ್ರೂ ಯಾಕೆ ಅಂದ್ರೆ? ಈ ತಳಿಯ ಹಣ್ಣಿಗೆ ತನ್ನದೆ ಮಾನದಂಡಗಳು ಇವೆ. ರೂಬಿ ರೋಮನ್ ದ್ರಾಕ್ಷಿ ಹಣ್ಣಿನ ಒಂದು ಗೊಂಚಲಿನಲ್ಲಿ ಸುಮಾರು 24 ದ್ರಾಕ್ಷಿ ಹಣ್ಣುಗಳು ಇರಲೇ ಬೇಕು. ಮಾನದಂಡದ ಪ್ರಕಾರ ಒಂದು ದ್ರಾಕ್ಷಿ ಹಣ್ಣಿನ ತೂಕ 20 ರಿಂದ 30 ಗ್ರಾಂ ಇರಲೇಬೇಕು. ನೋಡಲು ಕೆಂಪು ಪಿಂಗ್ ಪಾಂಗ್ ಬಾಲ್ ನಂತೆ ಕಾಣಿಸಲೇಬೇಕು. ಇಲ್ಲದಿದ್ದರೆ, ಈ ಹಣ್ಣಿಗೆ ಅಷ್ಟು ದುಡ್ಡನ್ನು ಕೊಟ್ಟು ಯಾರು ಕೊಳ್ಳುವುದಿಲ್ಲ. ಅದಕ್ಕೆ ಗಿಡದಲ್ಲೆ ಇದ್ದಾಗ, ಅದರ ಗಾತ್ರ ತೂಕ ಎಲ್ಲವನ್ನು ಪರೀಕ್ಷಿಸಿ, ಆ ಹಣ್ಣು ಮಾರಾಟಕ್ಕೆ ಸೂಕ್ತ ಎನ್ನುವ ಸುಳಿವು ಸಿಕ್ಕ ಬಳಿಕವಷ್ಟೆ ಅದನ್ನು ಗಿಫ್ಟ್ ಪ್ಯಾಕ್ ಮಾಡಿ ಮಾರುಕಟ್ಟೆಗೆ ಬಿಡ್ತಾರೆ.

ಇದನ್ನೂ ಓದಿ: ರಾತ್ರೋರಾತ್ರಿ ಸ್ಟಾರ್​​ ಆಯ್ತು ವಿಶ್ವದ ಈ ಅತೀ ಚಿಕ್ಕ ಹಸು!

blank

ಉತ್ತಮ ಪೋಷಕಾಂಶವಿಲ್ಲದಿದ್ದರೆ ಇಡಿ ಗೊಂಚಲು ರಿಜೆಕ್ಟ್
700 ಗ್ರಾಂ ಗೊಂಚಲಿನಲ್ಲಿ ಶೇ.18ರಷ್ಟು ಶುಗರ್ ಮಾತ್ರ ಇರಲಿ

ಒಂದು ಗೊಂಚಲು ದ್ರಾಕ್ಷಿ ಕನಿಷ್ಠ 700 ಗ್ರಾಂ ತೂಗಿದರೆ, ಅದರಲ್ಲಿ ಶೇಕಡ 18ರಷ್ಟು ಶುಗರ್ ಕಂಟೆಂಟ್ ಹೊಂದಿರಬೇಕು. ಇನ್ನು ಈ ದ್ರಾಕ್ಷಿ ಹಣ್ಣು ಕಡಿಮೆ ಅಸಿಡಿಟಿ ಹೊಂದಿರಬೇಕು ಮತ್ತು ಇನ್ನುಳಿದ ಪೋಷಕಾಂಶಗಳು ಸರಿಯಾದ ಪ್ರಮಾಣದಲ್ಲಿ ಇದ್ದರೆ ಮಾತ್ರ ದುಬಾರಿ ಬೆಲೆ ಮಾರಾಟ ಮಾಡಬಹುದಾಗಿದೆ. ಈ ಹಣ್ಣು ಸಿಹಿಯ ಜೊತೆ ಉತ್ತಮವಾದ ಎಲ್ಲ ರೀತಿಯ ಬೆನಿಫಿಟ್ಸ್ ಹೊಂದಿರಲಿ ಎನ್ನುವ ಉದ್ದೇಶದಿಂದ ಹೀಗೆ ಮಾನದಂಡವನ್ನು ಹೇರಲಾಗಿದೆ.

blank

ಈ ವಿಶೇಷ ದ್ರಾಕ್ಷಿ ಹಣ್ಣನ್ನು ಇಲ್ಲೂ ಬೆಳೆಯಬಹುದಾ?
ಈ ದುಬಾರಿ ಹಣ್ಣು ಕೇವಲ ಜಪಾನ್​​ನಲ್ಲಿ ಬೆಳೆಯುತ್ತಾರೆ, ನಮ್ಮ ದೇಶದಲ್ಲಿ ಬೆಳೆಯಲು ಆಗುವುದಿಲ್ಲ ಅಂತ ಯಾವ ರೂಲ್ಸ್ ಇಲ್ಲ. ಈ ಹಣ್ಣನ್ನು ನೀವು ಬೆಳಯಬಹುದು. ನೀವು ಈ ತಳಿಯ ದ್ರಾಕ್ಷಿ ಹಣ್ಣನ್ನು ಬೆಳೆಯಲು ಬಯಸಿದರೆ ಅಮೆಜಾನ್ ಹಾಗು ಇತರೆ ಅಂತಾರಾಷ್ಟ್ರೀಯ ವೆಬ್ಸೈಟ್ ಗಳಲ್ಲಿ ರೂಬಿ ರೋಮನ್ ದ್ರಾಕ್ಷಿ ಹಣ್ಣಿನ ಬೀಜಗಳನ್ನ ಖರೀದಿ ಮಾಡಿ ಬೆಳೆಯಬಹುದಾಗಿದೆ. ಆದರೆ ಆ ಬೆಲೆಗೆ ಮಾರಾಟವಾಗ ಬೇಕೆಂದರೆ, ಮಾನದಂಡಕ್ಕೆ ತಕ್ಕ ತಂತ್ರಜ್ಞಾನವನ್ನು ಅನುಸರಿಸಿ ರೂಬಿ ರೋಮನ್ ಅನ್ನು ಬೆಳೆಯಬಹುದಾಗಿದೆ. ಹಣ್ಣನ್ನು ಬೆಳೆಯುವ ಮೊದಲೆ ಈ ತಳಿಯನ್ನು ಮಾರಟ ಮಾಡುವ ಕೆಲ ಕಂಪನಿಗಳ ಜೊತೆ ಟೈ ಅಪ್ ಮಾಡಿಕೊಂಡು, ಅವರು ಹೇಳಿದ ಪ್ರಕಾರ ರೂಬಿ ರೋಮನ್ ಅನ್ನು ಬೆಳೆದರೆ., ನಿಮ್ಮ ಬೆಳೆಗೂ ಇದೆ ಬೆಲೆ ಸಿಗುವುದರಲ್ಲಿ ಡೌಟೇ ಇಲ್ಲ.

ಇದನ್ನೂ ಓದಿ: 16 ರಾಜ್ಯಗಳಲ್ಲಿ 100ರ ಗಡಿ ದಾಟಿದ ಪೆಟ್ರೋಲ್ ಬೆಲೆ; ಸದ್ಯದಲ್ಲೇ 150 ರೂಪಾಯಿಗೆ ಏರಿಕೆ?

The post ಈ ದ್ರಾಕ್ಷಿ ಹಣ್ಣಿನ ಬೆಲೆ ₹7 ಲಕ್ಷ; ಒಂದು ಬಾರಿ ನೀವು ತಿಂದ್ರೆ.. ಇದೇ ಬೇಕು ಅನ್ನೋದ್ರಲ್ಲಿ ಡೌಟೇ ಇಲ್ಲ appeared first on News First Kannada.

Source: newsfirstlive.com

Source link