ಕಲ್ಲು, ಮಣ್ಣಿನ ಕೋಟೆಯಲ್ಲ.. ಇದು ಹಾಲೆಂಡ್ ಕಲಾವಿದನ ಮ್ಯಾಜಿಕ್

ಕಲ್ಲು, ಮಣ್ಣಿನ ಕೋಟೆಯಲ್ಲ.. ಇದು ಹಾಲೆಂಡ್ ಕಲಾವಿದನ ಮ್ಯಾಜಿಕ್

ಪುಟ್ಟ ರಾಷ್ಟ್ರ ಡೆನ್ಮಾರ್ಕ್​​ನಿಂದ ಒಂದು ಸ್ಪೆಷಲ್ ನ್ಯೂಸ್ ಬಂದಿದೆ. ಈ ಭಾರಿ ಡೆನ್ಮಾರ್ಕ್​​​ನಿಂದ ಬಂದಿರುವ ಸುದ್ದಿ ಕೊರೋನಾದಲ್ಲ, ಬದಲಾಗಿ ಕೊರೋನಾ ಸಮಯದಲ್ಲೇ ನಿರ್ಮಾಣವಾದ ಕೋಟೆಯೊಂದರ ಕುರಿತು. ದ್ವೀಪ ರಾಷ್ಟ್ರದಲ್ಲಿ ನಿರ್ಮಾಣವಾದ ಮರಳಿನ ಕೋಟೆಯೊಂದು ಗಿನ್ನೀಸ್​​ ದಾಖಲೆ ಬರೆದಿದೆ.

ಕೊರೋನಾ ಜಗತ್ತಿನಾದ್ಯಂತ ಹೇಗೆ ಅಬ್ಬರಿಸಿತ್ತು ಎಂಬುದನ್ನು ಇಡೀ ಜಗತ್ತೆ ಕಣ್ಣಾರೆ ಕಂಡಿದೆ. ಕೊರೋನಾ ಅಬ್ಬರ ಇಂದು ತುಸು ತಗ್ಗಿದ್ರು, ಅದು ಸೃಷ್ಟಿಸಬೇಕಾದ ಅವಾಂತರಗಳನ್ನೆಲ್ಲ ಸೃಷ್ಟಿಸಿ ಬಿಟ್ಟಿದೆ. ಲಕ್ಷಾಂತರ ಜನರನ್ನು ಬಲಿ ಪಡೆದು, ಅದೆಷ್ಟೋ ಜನರ ಕಣ್ಣೀರಿಗೆ ಕಾರಣವಾಗಿದೆ. ಕಣ್ಣಿಗೆ ಕಾಣದ ವೈರಸ್​ವೊಂದು ಇಡೀ ಜಗತ್ತನ್ನೇ ಕಾಡುತ್ತಿದ್ದರೂ ಯಾರು ಏನೂ ಮಾಡದ ಅಸಹಾಯಕ ಸ್ಥಿತಿ ಜನರದ್ದು. ಇದನ್ನೇ ಮುಂದಿಟ್ಟುಕೊಂಟು ಹಾಲೆಂಡ್​ನ ನುರಿತ ಶಿಲ್ಪಿಯೊಬ್ಬ ಕೋಟೆಯನ್ನೇ ನಿರ್ಮಿಸಿ ಬಿಟ್ಟಿದ್ದಾರೆ.

 

blank

ಕೋಟೆ ಎಂದಾಕ್ಷಣ ಮೊದಲು ಕನ್ನಡಿಗರಿಗೆ ನೆನಪಾಗುವುದೇ ಚಿತ್ರದುರ್ಗದ ಕಲ್ಲಿನ ಕೋಟೆ. ದೇಶದಲ್ಲಿ, ವಿಶ್ವದಲ್ಲಿ ನೂರಾರು ಕೋಟೆ ಕೊತ್ತಲುಗಳಿವೆ. ಚೀನಾದ ಮಹಾಗೋಡೆಯೂ ಒಂದು ಕೋಟೆಯ ಹಾಗೆಯೇ ಗೋಚರವಾಗುತ್ತದೆ.

ಇದನ್ನೂ ಓದಿ: ಅಮೆರಿಕಾವನ್ನೇ ಬೆಚ್ಚಿ ಬೀಳಿಸಿದ ವಿಕ್ಷಿಪ್ತ ಸೆಕ್ಸ್ ಕಲ್ಟ್; ಕಾಮುಕ ಸೆಲೆಬ್ರಿಟಿಗಳ ಅಸಲೀ ಕಹಾನಿ ಏನ್​ ಗೊತ್ತಾ?

ಇತಿಹಾಸದ ಪುಟವನ್ನು ನಾವು ತಿರುವಿದಾಗ ಅನೇಕ ರಾಜರು ಕಟ್ಟಿಸಿದ ಕೋಟೆಗಳು ಭಾರತದಲ್ಲಿ ಇಂದಿಗೂ ಜೀವಂತಿಕೆಯನ್ನು ಉಳಿಸಿಕೊಂಡು ಗತ ವೈಭವದ ವೈಭೋಗವನ್ನು ಸಾರುತ್ತಿದೆ. ನೀವೆಲ್ಲ ಕಲ್ಲು, ಮಣ್ಣಿನಿಂದ ತಯಾರಾದ ಕೋಟೆಯನ್ನು ನೋಡಿರ್ತೀರಾ ಅಲ್ವಾ..? ಇವತ್ತು ನಾವು ನಿಮಗೆ ವಿಭಿನ್ನ ಕೋಟೆಯೊಂದನ್ನು ಪರಿಚಯ ಮಾಡಿಸಿಕೊಡ್ತೀವಿ. ಇವು ನಿರ್ಮಾಣವಾಗಿದ್ದು ಕಲ್ಲು, ಮಣ್ಣಿನಿಂದಲ್ಲ, ಬದಲಾಗಿ ಮರಳಿನಿಂದ. ಬರೀ ಮರಳಿನಿಂದ ಕೋಟೆ ನಿರ್ಮಿಸಲು ಸಾಧ್ಯಾನಾ? ಎಂಬ ಪ್ರಶ್ನೆ ಮೂಡಬಹುದು. ಅದ್ಕೆ ಉತ್ತರ ಎಂಬಂತೆ ಡೆನ್ಮಾರ್ಕ್​​ನಲ್ಲಿ ನಿರ್ಮಾಣವಾಗಿರುವ ಈ ಮರಳು ಕೋಟೆಯೇ ಸಾಕ್ಷಿ.

blank

ಸರಿಸುಮಾರು 443 ದ್ವೀಪಗಳನ್ನು ಹೊಂದಿರುವ ಡೆನ್ಮಾರ್ಕ್ ಜಗತ್ತಿನ ಸಂತೋಷದಾಯಕ ದೇಶ ಕೂಡ. ಸಂಪಾದನೆ ಹಾಗೂ ನೆಮ್ಮದಿಯ ವಿಚಾರದಲ್ಲಿ ಡೆನ್ಮಾರ್ಕ್​ ದೇಶ 8ನೇ ಸ್ಥಾನದಲ್ಲಿದೆ. ಜಗತ್ತಿನ ಈ ಪುಟ್ಟ ದೇಶದ ಕೆಲ ಪ್ರದೇಶಗಳ ದೃಶ್ಯವನ್ನು ನೋಡಿದ್ರೆ, ನೀರಿನ ನಡುವೆ ನಗರವಿದ್ಯೋ, ನಗರದ ನಡುವೆ ನೀರಿದ್ಯೋ ಎಂಬ ಪ್ರಶ್ನೆ ಮೂಡುವುದು ಕಾಮನ್.

ಕೊರೋನಾ ಉತ್ತರ ಯುರೋಪಿನಲ್ಲಿರುವ ಪುಟ್ಟ ರಾಷ್ಟ್ರ ಡೆನ್ಮಾರ್ಕನ್ನು ಕೂಡ ಬಿಟ್ಟಿರ್ಲಿಲ್ಲ. ಜಗತ್ತಿನ ಸಂತೋಷದಾಯಕ ದೇಶದ ನೆಮ್ಮದಿಯನ್ನೂ ಕೂಡ ಕೊರೋನಾ ಕಸಿದುಕೊಂಡಿತ್ತು. ಕೊರೋನಾದ ಅಬ್ಬರಕ್ಕೆ ಜಗತ್ತಿನಾದ್ಯಂತ ಎಲ್ಲಾ ವಲಯಗಳು ಸ್ತಬ್ಧವಾಗಿದ್ದವು. ಸಣ್ಣ ಪುಟ್ಟ ಕೈಗಾರಿಕೆಯಿಂದ ಹಿಡಿದು ದೊಡ್ಡ ದೊಡ್ಡ ಕಂಪನಿಗಳೇ ಬಾಗಿಲು ಹಾಕಿದ್ದವು. ಜಗತ್ತೆಲ್ಲ ಕೊರೋನಾದಿಂದ ಸ್ತಬ್ಧವಾಗಿದ್ದ ಹೊತ್ತಲ್ಲೇ ಡೆನ್ಮಾರ್ಕ್ ಹೊಸ ದಾಖಲೆಯನ್ನು ಸೃಷ್ಠಿಸಿ ಬಿಟ್ಟಿದೆ.

ಮರಳಿನಲ್ಲಿ ಮ್ಯಾಜಿಕ್ ಮಾಡಿದ ಕಲಾವಿದರು
ಜಗತ್ತಿನ ಅತೀ ಎತ್ತರದ ಮರಳಿನ ಕೋಟೆ ನಿರ್ಮಾಣ
ಗಿನ್ನಿಸ್ ದಾಖಲೆ ಬರೆದ ಡೆನ್ಮಾರ್ಕ್ ಮರಳಿನ ಕೋಟೆ

ಕಣ್ಣುಕ್ಕುಂವತಹ ಚಿನ್ನದ ಹೊಳಪು, ವಿಶಿಷ್ಟ ವಿನ್ಯಾಸ, ವೈವಿಧ್ಯಮಯವಾಗಿ ಮೂಡಿ ಬಂದಿರುವ ತ್ರಿಕೋನಾಕಾರದಲ್ಲಿರುವ ಈ ಕೋಟೆಯ ಸೌಂದರ್ಯವನ್ನು ಕಣ್ತುಂಬಿಕೊಳ್ಳುವುದೇ ಒಂದು ರೋಮಾಂಚನ. ಡೆನ್ಮಾರ್ಕ್​​ನಲ್ಲಿರುವ ಕಲಾವಿದರು ಮರಳಿನಲ್ಲಿ ಮ್ಯಾಜಿಕ್ ಮಾಡಿ ಬಿಟ್ಟಿದ್ದಾರೆ.

ಇದನ್ನೂ ಓದಿ: ಸೂರ್ಯನ ಒಡಲಿನಲ್ಲಿ ಹಿಂದೆಂದು ಕಂಡರಿಯದ ಸ್ಫೋಟ! ಮುಂದೇನಾಗಬಹುದು?

blank

ಸುತ್ತಲೂ ಮರಳಿನಿಂದಾವೃತವಾದ ಈ ಕೋಟೆಯ ದೃಶ್ಯ ನಿಜಕ್ಕೂ ನೋಡುಗರ ಕಣ್ ಸೆಳೆಯುತ್ತಿದೆ.
ಜಗತ್ತಿನ ಅತೀ ಎತ್ತರದ ಮರಳಿನ ಕೋಟೆ. ಹೌದು, ಕೊರೊನಾ ಸಮಯದಲ್ಲಿ ಡೆನ್ಮಾರ್ಕ್​​​ನಲ್ಲಿ ಶಿಲ್ಪಿಗಳು ಜಗತ್ತಿನ ಅತೀ ಎತ್ತರದ ಮರಳಿನ ಕೋಟೆ ನಿರ್ಮಾಣ ಮಾಡಿ ಬಿಟ್ಟಿದ್ದಾರೆ. ಈ ಮೂಲಕ ಈ ಹಿಂದೆ ನಿರ್ಮಾಣವಾಗಿದ್ದ ಎಲ್ಲಾ ದಾಖಲೆಗಳನ್ನು ಉಡೀಸ್ ಮಾಡಿರುವ ಡೆನ್ಮಾರ್ಕ್ ಶಿಲ್ಪಿಗಳು ಹೊಸ ಇತಿಹಾಸವನ್ನೇ ಸೃಷ್ಟಿಸಿ ಬಿಟ್ಟಿದ್ದಾರೆ.

ಇದನ್ನೂ ಓದಿ: ಪರೇಡ್ ಮಾಡೋವಾಗ ಹೈ ಹೀಲ್ಸ್ ಹಾಕಲೇಬೇಕಂತೆ.. ಉಕ್ರೇನ್ ಮಹಿಳಾ ಆರ್ಮಿಗೆ ಇದೆಂಥಾ ಶಿಕ್ಷೆ..?

ಜರ್ಮನ್ ದಾಖಲೆ ಬ್ರೇಕ್ ಮಾಡಿದ ಡೆನ್ಮಾರ್ಕ್
ಈ ಮರಳಿನ ಕೋಟೆಯ ಎತ್ತರವೆಷ್ಟು ಗೊತ್ತಾ?

ಈ ಹಿಂದೆ ಜರ್ಮನಿಯಲ್ಲಿ ಅತೀ ಎತ್ತರದ ಮರಳಿನ ಕೋಟೆ ನಿರ್ಮಾಣವಾಗಿತ್ತು. ಜರ್ಮನಿಯ ಪ್ರವಾಸಿ ಸಂಸ್ಥೆ ಶಾನ್ಸ್ ಲ್ಯಾಂಡ್ ರೈಸನ್ಸ್ ಈ ಮರಳಿನ ಕೋಟೆಯನ್ನು ನಿರ್ಮಿಸಿದ್ರು. 16.68 ಮೀಟರ್ ಎತ್ತರವಿದ್ದ ಈ ಮರಳಿನ ಕೋಟೆಯನ್ನು ಜಗತ್ತಿನ ಎತ್ತರದ ಕೋಟೆ ಎಂದೇ ಕರೆಯಲಾಗ್ತಿತ್ತು. ಆದ್ರೆ ಇದೀಗ ಜರ್ಮನ್ ಕೋಟೆಗಿಂತ 3.5 ಮೀಟರ್ ಎತ್ತರ ಮರಳಿನ ಕೋಟೆ, ಜರ್ಮನಿಯಲ್ಲಿ ನಿರ್ಮಾಣವಾಗಿದ್ದು, ಇದು ಬರೋಬ್ಬರಿ 21.16 ಮೀಟರ್ ಎತ್ತರದ ಹೊಂದಿದೆ.

ಕೊರೋನಾ ಸಮಯದಲ್ಲೇ ಕೋಟೆ ನಿರ್ಮಿಸಿದ್ದೇಕೆ ಗೊತ್ತಾ?
ಲಾಕ್​​ಡೌನ್​​ನಿಂದ ಪ್ರೇರಿತಗೊಂಡ್ರಾ ಕಲಾವಿದರು?

ಹಾಲೆಂಡ್‌ನ ನುರಿತ ಕಲಾವಿದ ವಿಲ್ಫ್ರೆಡ್ ಸ್ಟಿಜ್ಜರ್ ನೇತೃತ್ವದಲ್ಲಿ ಈ ಬೃಹತ್ ಮರಳಿನ ಕೋಟೆ ನಿರ್ಮಾಣವಾಗಿದೆ. ವಿಶ್ವದ ಅತ್ಯಂತ ಪ್ರತಿಭಾನ್ವಿತ 30 ಶಿಲ್ಪಿಗಳು ಈ ಮರಳಿನ ಕೋಟೆ ನಿರ್ಮಿಸಲು ಕೈಜೋಡಿಸಿದ್ದಾರೆ. ಇವ್ರೆಲ್ಲ ಸೇರಿ ಕೊರೋನಾ ಸಮಯದಲ್ಲೇ ಈ ಮರಳಿನ ಕೋಟೆ ನಿರ್ಮಿಮಿಸಲು ಪ್ರಮುಖ ಕಾರಣ ಕೂಡ ಇದೆ.

ಕೊರೋನಾ ವೈರಸ್ ಹೇಗೆ ಜಗತ್ತನ್ನು ಇಂದು ಇಡೀ ಆಳುತ್ತಿದೆ. ವಿಶ್ವದಾದ್ಯಂತ ಅಬ್ಬರಿಸುತ್ತಿರುವ ಕೊರೋನಾ ಜನರನ್ನು ತಮ್ಮಿಷ್ಟದಂತೆ ಬದುಕಲು ಬಿಡ್ತಿಲ್ಲ. ಅಗೋಚರ ವೈರಸ್ ವೊಂದು ಇಡೀ ಜಗತ್ತನ್ನು ಹೇಗೆ ಆಳುತ್ತಿದೆ ಎಂಬುದನ್ನು ತೋರಿಸುವ ಉದ್ಧೇಶದಿಂದ ಈ ಮರಳಿನ ಕೋಟೆಯ ತುದಿಯಲ್ಲಿ ಕೊರೋನಾ ವೈರಸ್ ಹೋಲುವ ಚಿಹ್ನೆಯನ್ನು ಇಡಲಾಗಿದೆ.
-ವಿಲ್ಫ್ರೆಡ್ ಸ್ಟಿಜ್ಜರ್ -ಕಲಾವಿದ

ಕೊರೋನಾ ಅಬ್ಬರಿಸುತ್ತಿದ್ರು ಜನರನ್ನು ಹೇಗೆ ಕಟ್ಟಿಹಾಕಿದೆ ಎಂಬುದನ್ನು ಬಿಂಬಿಸಲು ಸಲುವಾಗಿ ಈ ಕೋಟೆಯನ್ನು ನಿರ್ಮಿಸಲಾಗಿದೆ ಎಂದಿದ್ದಾರೆ. ಈ ಮರಳಿನ ಕೋಟೆಯನ್ನು ಕಣ್ತುಂಬಿಕೊಳ್ಳಲು ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬರ್ತಿದ್ದಾರೆ. ಡೆನ್ಮಾರ್ಕ್ ಪ್ರವಾಸಿಗರ ಸಾಲಿಗೆ ಇದೀಗ ಈ ಮರಳಿನ ಕೋಟೆ ಸೇರ್ಕೊಂಡಿದೆ.

ಇದನ್ನೂ ಓದಿ: ರಾತ್ರೋರಾತ್ರಿ ಸ್ಟಾರ್​​ ಆಯ್ತು ವಿಶ್ವದ ಈ ಅತೀ ಚಿಕ್ಕ ಹಸು!

blank

ಒಟ್ಟಿನಲ್ಲಿ ಅಗೋಚರ ವೈರಸ್ ವೊಂದು ಜಗತ್ತನ್ನೇ ಆಳುತ್ತಿದ್ರೂ ಏನ್ ಮಾಡಕ್ಕಾಗದ ಸ್ಥಿತಿ ಜನರದ್ದು. ಇದನ್ನು ಹೋಲುವಂತೆ ಇದೀಗ ಮರಳಿನ ಕೋಟೆ ನಿರ್ಮಾಣವಾಗಿದೆ. ಮುಂದೆ ಈ ಕೊರೋನಾ ಸೃಷ್ಟಿಸಿದ ಅವಾಂತರಗಳನ್ನು, ಕೊರೋನಾ ಕಾಲದ ಸ್ಥಿತಿಗತಿಗಳನ್ನು, ಕೊರೋನಾ ಕಾಲದ ಕರಾಳ ದಿನಗಳನ್ನು ಮುಂದಿನ ಪೀಳಿಗೆಗೆ ತೋರಿಸಲು ಕಲಾವಿದರು ಇನ್ಯಾವ ರೀತಿಯ ಪ್ರಯತ್ನ ಮಾಡ್ತಾರೋ ಎಂಬುದನ್ನು ಕಾದು ನೋಡಬೇಕಾಗಿದೆ.

ಇದನ್ನೂ ಓದಿ: 16 ರಾಜ್ಯಗಳಲ್ಲಿ 100ರ ಗಡಿ ದಾಟಿದ ಪೆಟ್ರೋಲ್ ಬೆಲೆ; ಸದ್ಯದಲ್ಲೇ 150 ರೂಪಾಯಿಗೆ ಏರಿಕೆ?

The post ಕಲ್ಲು, ಮಣ್ಣಿನ ಕೋಟೆಯಲ್ಲ.. ಇದು ಹಾಲೆಂಡ್ ಕಲಾವಿದನ ಮ್ಯಾಜಿಕ್ appeared first on News First Kannada.

Source: newsfirstlive.com

Source link