ಮೊಬೈಲ್ ಕೊಡಿಸಿ ಎಂದು ಮೊರೆಯಿಟ್ಟ ಸಹೋದರಿಯರಿಗೆ ಸ್ಪಂದಿಸಿದ ಸಂಸದರ ಪುತ್ರ

ಮೊಬೈಲ್ ಕೊಡಿಸಿ ಎಂದು ಮೊರೆಯಿಟ್ಟ ಸಹೋದರಿಯರಿಗೆ ಸ್ಪಂದಿಸಿದ ಸಂಸದರ ಪುತ್ರ

ಕೊಪ್ಪಳ: ತಂದೆ ಕಳೆದುಕೊಂಡ ಸಹೋದರಿಯರು ಮೊಬೈಲ್​ ಇಲ್ಲದೇ ಆನ್​ಲೈನ್​ ಶಿಕ್ಷಣದಿಂದ ವಂಚಿತರಾಗಿ ತಮಗೆ ಮೊಬೈಲ್ ಕೊಡಿಸುವಂತೆ ಭಿತ್ತಿಪತ್ರ ಹಿಡಿದು ನಿಂತಿದ್ದ ಸುದ್ದಿ ವರದಿಯಾಗಿತ್ತು. ಕೊಪ್ಪಳದ ಗಾಂಧಿನಗರದ ನಿವಾಸಿಗಳಾದ ಗಿರಿಜಾ ಹಾಗೂ ಪ್ರೀತಿ ಹೀಗೆ ಭಿತ್ತಿಪತ್ರ ಹಿಡಿದು ನಿಂತಿದ್ದ ಸಹೋದರಿಯರು.

ಇದನ್ನೂ ಓದಿ: ಆನ್​ಲೈನ್​ ಕ್ಲಾಸ್ ಕಷ್ಟ; ಮೊಬೈಲ್​ ಖರೀದಿಸಲು ಸಹಾಯ ಮಾಡಿ ಎಂದು ಸಹೋದರಿಯರ ಮನವಿ

ಇದೀಗ ಈ ಸಹೋದರಿಯರ ಸಂಕಷ್ಟಕ್ಕೆ ಸಂಸದ ಕರಡಿ ಸಂಗಣ್ಣ ಅವರ ಪುತ್ರ ಗವಿಸಿದ್ದಪ್ಪ ಕರಡಿ ಮೊಬೈಲ್ ಕೊಡಿಸಿ ಶಿಕ್ಷಣಕ್ಕೆ ನೆರವಾಗಿದ್ದಾರೆ. ಗಿರಿಜಾ ಹಾಗೂ ಪ್ರೀತಿ ತಂದೆಯನ್ನು ಕಳೆದುಕೊಂಡಿದ್ದು ಸದ್ಯ ಗಿರಿಜಾ 8 ನೇ ತರಗತಿ ಹಾಗೂ ಪ್ರೀತಿ 10 ನೇ ತರಗತಿಯಲ್ಲಿ ಅಭ್ಯಾಸ ಮಾಡುತ್ತಿದ್ದಾರೆ.

blank

ತಾಯಿ‌ ಮಲ್ಲಮ್ಮ ನಿಂಬೆ ಹಣ್ಣು ವ್ಯಾಪಾರ ಮಾಡುವ ಮೂಲಕ ಮಕ್ಕಳ ಪಾಲನೆ ಮಾಡುತ್ತಿದ್ದು.. ಓದುವ ಹಂಬಲದಿಂದಾಗಿ ಹೆಣ್ಣುಮಕ್ಕಳು ಮೊಬೈಲ್ ಕೇಳಿದ್ದರು. ಈ ಕುರಿತು ನ್ಯೂಸ್​ಫಸ್ಟ್​ ವರದಿ ಮಾಡಿತ್ತು.. ಸಹೋದರಿಯರ ಸಂಕಷ್ಟಕ್ಕೆ ಕೆಲವರು ಸ್ಪಂದಿಸಿ ಆರ್ಥಿಕ ಸಹಾಯವನ್ನೂ ಮಾಡಿದ್ದಾರೆ.

The post ಮೊಬೈಲ್ ಕೊಡಿಸಿ ಎಂದು ಮೊರೆಯಿಟ್ಟ ಸಹೋದರಿಯರಿಗೆ ಸ್ಪಂದಿಸಿದ ಸಂಸದರ ಪುತ್ರ appeared first on News First Kannada.

Source: newsfirstlive.com

Source link