ಎರಡನೇ ಪುತ್ರನಿಗೆ ‘ಜೆಹ್’​​ ಎಂದು ಹೆಸರಿಟ್ಟ ಕರೀನಾ-ಸೈಫ್ ದಂಪತಿ

ಎರಡನೇ ಪುತ್ರನಿಗೆ ‘ಜೆಹ್’​​ ಎಂದು ಹೆಸರಿಟ್ಟ ಕರೀನಾ-ಸೈಫ್ ದಂಪತಿ

ಕರೀನಾ ಕಪೂರ್ ಖಾನ್ ಮತ್ತು ಸೈಫ್ ಅಲಿ ಖಾನ್ ದಂಪತಿಯ ಎರಡನೇ ಪುತ್ರನಿಗೆ ‘ಜೆಹ್​’(jeh) ಎಂದು ನಾಮಕರಣ ಮಾಡಲಾಗಿದೆ ಅಂತಾ ಕರೀನಾ ಕಪೂರ್ ತಂದೆ ಹಿರಿಯ ನಟ ರಣ್​ಧೀರ್ ಕಪೂರ್ ಹೇಳಿಕೆ ನೀಡಿದ್ದಾರೆ. ಅಲ್ಲದೇ ಕಳೆದ ವಾರವೇ ಎರಡನೇ ಪುತ್ರನಿಗೆ ನೇಮಕ ಮಾಡಲಾಗಿದೆ ಎಂದಿದ್ದಾರೆ.

ಕಳೆದ ಫೆಬ್ರವರಿ ತಿಂಗಳಿನಲ್ಲಿ ಕರೀನಾ ಮತ್ತು ಸೈಫ್ ದಂಪತಿಗೆ ಎರಡನೇ ಪುತ್ರ ಹುಟ್ಟಿದ್ದು ಮಾಧ್ಯಮಗಳಿಗೆ ಮಗುವಿನ ಮುಖ ತೋರಿಸಲು ನಿರಾಕರಿಸಿದ್ದಾರೆ. ಈ ಹಿಂದೆ ಮೊದಲ ಮಗನಿಗೆ ತೈಮೂರ್ ಎಂದು ದಂಪತಿ ಹೆಸರಿಟ್ಟಿದ್ದು ಈ ವಿಚಾರವಾಗಿ ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಮಟ್ಟದ ಚರ್ಚೆಗಳು ನಡೆದಿದ್ದವು.

The post ಎರಡನೇ ಪುತ್ರನಿಗೆ ‘ಜೆಹ್’​​ ಎಂದು ಹೆಸರಿಟ್ಟ ಕರೀನಾ-ಸೈಫ್ ದಂಪತಿ appeared first on News First Kannada.

Source: newsfirstlive.com

Source link