ಮಹಾರಾಷ್ಟ್ರದಲ್ಲಿ ಗುಡುಗು ಸಮೇತ ಭಾರೀ ಮಳೆ; ಆರೆಂಜ್​​ ಅಲರ್ಟ್​ ಘೋಷಣೆ

ಮಹಾರಾಷ್ಟ್ರದಲ್ಲಿ ಗುಡುಗು ಸಮೇತ ಭಾರೀ ಮಳೆ; ಆರೆಂಜ್​​ ಅಲರ್ಟ್​ ಘೋಷಣೆ

ಮುಂಬೈ: ಮಹಾರಾಷ್ಟ್ರದಲ್ಲಿಂದು ಗುಡುಗು ಸಮೇತ ಭಾರೀ ಮಳೆಯಾಗಿದೆ. ಇಲ್ಲಿನ ನಾಗ್ಪುರ ಜಿಲ್ಲೆಯಲ್ಲಿ ಸುರಿದ ಭೀಕರ ಮಳೆಯಿಂದಾಗಿ ರಸ್ತೆಗಳು ಜಲಾವೃತಗೊಂಡಿವೆ. ಕೆಲವು ಪ್ರದೇಶಗಳಲ್ಲಿ ಮನೆಯೊಳಗೆ ನೀರು ನುಗ್ಗಿದ ಪರಿಣಾಮ ಜನರು ಆತಂಕಕ್ಕೀಡಾಗಿದ್ದಾರೆ. ಹೀಗಾಗಿ ಮಹಾರಾಷ್ಟ್ರದಲ್ಲಿ ಹವಾಮಾನ ಇಲಾಖೆ ಆರೆಂಜ್​​ ಅಲರ್ಟ್​ ಘೋಷಿಸಿದೆ.

ನಾಗ್ಪುರ, ವಾದ್ರಾ, ಭಾಂದಾರ, ಚಂದ್ರಪುರ್, ಯಾವತ್ಮಲ್, ಅಮರಾವತಿ, ಗೋಂಡಿಯಾ ಸೇರಿದಂತೆ ಹಲವು ಪ್ರದೇಶಗಳಲ್ಲಿ ವರುಣನ ಆರ್ಭಟ ಜೋರಾಗಿದೆ. ಇನ್ನು ಮೂರು ದಿನಗಳ ಕಾಲ ಮಳೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.

ಪ್ರತೀವರ್ಷ ಹೀಗೆ ಮಳೆಯಾಗುತ್ತದೆ. ಈ ಬಾರಿಯೂ ಜೋರು ಮಳೆ ಬಂದಿದೆ. ಇದರ ಕುರಿತು ಮಾಹಿತಿಯಿದ್ದರೂ ಯಾವುದೇ ಅಧಿಕಾರಿಗಳು ಅಗತ್ಯ ಕ್ರಮಗಳನ್ನು ತೆಗೆದುಕೊಂಡಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ರಾಜ್ಯದಲ್ಲಿ ಇಂದಿನಿಂದ ಜು.13ರವರೆಗೆ ವ್ಯಾಪಕ ಮಳೆ ಸಾಧ್ಯತೆ- 7 ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್​

ಜುಲೈ 12ನೇ ತಾರೀಕಿನವರೆಗೂ ಅಂದರೆ ಮೂರು ದಿನಗಳು ಗುಡುಗು ಸಮೇತ ಮಳೆಯಾಗಲಿದೆ. ಆದ್ದರಿಂದ ಸ್ಥಳೀಯರು ಎಚ್ಚರಿಕೆಯಿಂದಿರಬೇಕು, ಯಾವುದೇ ಕಾರಣಕ್ಕೂ ಮನೆಯಿಂದ ಹೊರಗೆ ಹೋಗಬಾರದು ಎಂದು ಆಯಾ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಆದೇಶಿಸಿದೆ.

The post ಮಹಾರಾಷ್ಟ್ರದಲ್ಲಿ ಗುಡುಗು ಸಮೇತ ಭಾರೀ ಮಳೆ; ಆರೆಂಜ್​​ ಅಲರ್ಟ್​ ಘೋಷಣೆ appeared first on News First Kannada.

Source: newsfirstlive.com

Source link