ಸುವರ್ಣ ಸೂಪರ್‌ ಸ್ಟಾರ್‌ ರಿಯಾಲಿಟಿ ಶೋ ಅವಧಿ ವಿಸ್ತರಣೆ..ಯಾಕೆ ಗೊತ್ತಾ..?

ಸುವರ್ಣ ಸೂಪರ್‌ ಸ್ಟಾರ್‌ ರಿಯಾಲಿಟಿ ಶೋ ಅವಧಿ ವಿಸ್ತರಣೆ..ಯಾಕೆ ಗೊತ್ತಾ..?

ಸುವರ್ಣ ಸೂಪರ್‌ ಸ್ಟಾರ್‌.. ಮಹಿಳೆಯರ ಮನಗೆದ್ದ ಗೇಮಿಂಗ್ ರಿಯಾಲಿಟಿ ಶೋ. ಮಹಿಳೆಯರ ಅಚ್ಚುಮೆಚ್ಚಿನ ಶೋ.. ನಿರೂಪಕಿ ಶಾಲಿನಿ ಅವರ ಪಟ್ ಪಟಾಕಿ ಮಾತು.. ನೊಂದವರಿಗೆ ಸಾಂತ್ವನ ಹೇಳೋ ಗುಣ.. ಗೇಮ್​ನಲ್ಲಿ ಸ್ಪರ್ಧಿಗಳಿಗೆ ಜೋಶ್‌ ತುಂಬಾ ಸ್ಟೈಲ್‌.. ಎಲ್ಲವೂ ಜನ್ರಿಗೆ ಇಷ್ಟವಾಗ್ಬಿಟ್ಟಿದೆ. ಈ ಶೋನ ಅವಧಿಯೂ ಕೂಡ ಈಗ ವಿಸ್ತಾರವಾಗಿದೆ. ಇದರರ್ಥ.. ಜನರಿಗೆ ಈ ಶೋ ಹತ್ತಿರವಾಗಿದೆ.

ಸುವರ್ಣ ಸೂಪರ್‌ ಸ್ಟಾರ್‌ ಬಗ್ಗೆ ಮಾತನಾಡಲು ಒಂದು ಕಾರಣವಿದೆ. ಅದೇನಂದ್ರೆ, ಸದ್ಯದಲ್ಲಿಯೇ ಸುವರ್ಣ ಸೂಪರ್‌ ಸ್ಟಾರ್‌ 200 ಎಪಿಸೋಡ್‌ ಪೂರೈಸಲಿದೆ. ಆದ್ರೆ, ಈಗಾಗ್ಲೇ ಆ ಎಪಿಸೋಡ್‌ನ ಶೂಟಿಂಗ್ ಮುಗಿದಿದೆ. ಅದೊಂದು ಸ್ಪೆಷಲ್ ಎಪಿಸೋಡ್ ಆಗಿರಲಿದೆ ಅನ್ನೋ ಮಾಹಿತಿ ನಮ್ಗೆ ಸಿಕ್ಕಿದೆ.

ವಿಶೇಷ ಅಂದ್ರೆ, ರೇಟಿಂಗ್‌ ಲಿಸ್ಟ್​ನಲ್ಲೂ ಸುವರ್ಣ ಸೂಪರ್‌ಸ್ಟಾರ್‌ಗೆ ಉತ್ತಮ ಸ್ಥಾನವಿದೆ. ವಾರದಿಂದ ವಾರಕ್ಕೆ ರೇಟಿಂಗ್‌ಗೂ ಏರ್ತಿದೆ. ಇಷ್ಟೇ ಅಲ್ಲ, ಜನರಿಗೆ ಈ ಶೋ ಫಾರ್ಮ್ಯಾಟ್ ಇಷ್ಟವಾಗ್ಬಿಟ್ಟಿದೆ.

 

 

The post ಸುವರ್ಣ ಸೂಪರ್‌ ಸ್ಟಾರ್‌ ರಿಯಾಲಿಟಿ ಶೋ ಅವಧಿ ವಿಸ್ತರಣೆ..ಯಾಕೆ ಗೊತ್ತಾ..? appeared first on News First Kannada.

Source: newsfirstlive.com

Source link