₹4.50 ಹೆಚ್ಚಿಗೆ ಸ್ವೀಕರಿಸಿ 20 ಸಾವಿರ ದಂಡ ಕಟ್ಟಿದ ಸ್ವಿಗ್ಗಿ

₹4.50 ಹೆಚ್ಚಿಗೆ ಸ್ವೀಕರಿಸಿ 20 ಸಾವಿರ ದಂಡ ಕಟ್ಟಿದ ಸ್ವಿಗ್ಗಿ

ಫುಡ್​​ ಡೆಲಿವರಿ ಮಾಡುವ ವೇಳೆ ಸಾಫ್ಟ್​ ಡ್ರಿಂಕ್ ಮೇಲೆ ಹೆಚ್ಚುವರಿಯಾಗಿ 4.50 ರೂಪಾಯಿ ಜಿಎಸ್​​ಟಿ ಚಾರ್ಜ್​​ ಮಾಡಿದ್ದ ಕಾರಣ ಸ್ವಿಗ್ಗಿ 20 ಸಾವಿರ ರೂಪಾಯಿ ದಂಡ ಪಾವತಿ ಮಾಡಿರುವ ಘಟನೆ ಪಂಚಕುಲಾದಲ್ಲಿ ನಡೆದಿದೆ.

2018ರ ಆಗಸ್ಟ್​ನಲ್ಲಿ ಅಭಿಷೇಕ್ ಎಂಬುವವರು ಸ್ವಿಗ್ಗಿ ಆ್ಯಪ್ ಮೂಲಕ ಫುಡ್​ ಅರ್ಡರ್ ಮಾಡಿದ್ದರು. ಈ ವೇಳೆ ಚೀಸ್​ ಗಾರ್ಲಿಕ್ ಸ್ಟಿಕ್​​ಗೆ 144 ರೂಪಾಯಿ, ಸಾಫ್ಟ್​ ಡ್ರಿಂಕ್​​​ಗೆ 90 ರೂಪಾಯಿ ಚಾರ್ಜ್​ ಮಾಡಿದ್ದರು. ಆದರೆ ಸಾಫ್ಟ್​ ಡ್ರಿಂಕ್​ ಮೇಲೆ ಎಂಆರ್​​ಪಿ ಬೆಲೆಯಂತೆ ಹಣ ನೀಡಿದ್ದರೂ, ಹೆಚ್ಚುವರಿಯಾಗಿ 4.50 ರೂಪಾಯಿಗಳನ್ನು ಜಿಎಸ್​​ಟಿ ಎಂದು ನಮೂದಿಸಿ ಹಣ ಪಡೆದುಕೊಂಡಿದ್ದರು.

ಎಂಆರ್​​ಪಿಗಿಂತ ಹೆಚ್ಚುವರಿಯಾಗಿ ಹಣ ಪಡೆಯುವುದು ಗ್ರಾಹಕ ರಕ್ಷಣಾ ಕಾಯ್ದೆ ಅಡಿ ಅಪರಾಧ ಎಂದು ಅರಿತು ಸಂಸ್ಥೆಯ ವಿರುದ್ಧ ಜಿಲ್ಲಾ ಗ್ರಾಹಕ ವಿವಾದಗಳ ಪರಿಹಾರ ಆಯೋಗದಲ್ಲಿ ದೂರು ದಾಖಲಿಸಿದ್ದರು. ಆದರೆ ತನ್ನ ನಡೆಯನ್ನು ಸಮರ್ಥಿಸಿಕೊಂಡಿದ್ದ ಸ್ವಿಗ್ಗಿ, ತಾನು ಮಧ್ಯವರ್ತಿ ಮಾತ್ರ. ವ್ಯಾಪಾರಿಯ ಪರವಾಗಿ ಪಾವತಿಯನ್ನು ಸಂಗ್ರಹಿಸುತ್ತೇನೆ. ಬಿಲ್​ಗೆ ಅನ್ವಯವಾಗುವ ಎಲ್ಲಾ ತೆರಿಗೆಗಳನ್ನು ಅವರೇ ವಿಧಿಸಿದ್ದಾರೆ ಎಂದು ವಾದ ಮಂಡಿಸಿತ್ತು.

ಪ್ರಕರಣದ ವಿಚಾರಣೆ ನಡೆಸಿದ ಜಿಲ್ಲಾ ಗ್ರಾಹಕ ವಿವಾದಗಳ ಪರಿಹಾರ ಆಯೋಗ, ದೂರು ದಾಖಲಾದ ದಿನದಿಂದ ಗ್ರಾಹಕನಿಗೆ ವಾರ್ಷಿಕ ಶೇ.9ರ ಬಡ್ಡಿದರದಂತೆ 10 ಸಾವಿರ ರೂಪಾಯಿ ದಂಡ ಪಾವತಿ ಮಾಡಬೇಕು. ಅಲ್ಲದೇ ಗ್ರಾಹಕರು ಎದುರಿಸಿದ ಮಾನಸಿಕ ಒತ್ತಡ, ಕಿರುಕುಳ ಹಾಗೂ ಕಾನೂನು ಪ್ರಕ್ರಿಯೆ ಶುಲ್ಕ ಕಾರಣಕ್ಕಾಗಿ ಹೆಚ್ಚುವರಿಯಾಗಿ 10 ಸಾವಿರ ರೂಪಾಯಿಗಳನ್ನು ಹರಿಯಾಣ ಸರ್ಕಾರ ಮಕ್ಕಳ ಹಿತರಕ್ಷಣಾ ಸಮಿತಿಗೆ ಪಾವತಿ ಮಾಡಬೇಕು ಎಂದು ಆದೇಶ ನೀಡಿದೆ.

The post ₹4.50 ಹೆಚ್ಚಿಗೆ ಸ್ವೀಕರಿಸಿ 20 ಸಾವಿರ ದಂಡ ಕಟ್ಟಿದ ಸ್ವಿಗ್ಗಿ appeared first on News First Kannada.

Source: newsfirstlive.com

Source link