ಭಾರತದ ಶೇ.53ರಷ್ಟು ಕೊರೊನಾ ಕೇಸ್​​ ಮಹಾರಾಷ್ಟ್ರ, ಕೇರಳದಲ್ಲೇ ಪತ್ತೆ; ಕೇಂದ್ರ ಆತಂಕ

ಭಾರತದ ಶೇ.53ರಷ್ಟು ಕೊರೊನಾ ಕೇಸ್​​ ಮಹಾರಾಷ್ಟ್ರ, ಕೇರಳದಲ್ಲೇ ಪತ್ತೆ; ಕೇಂದ್ರ ಆತಂಕ

ನವದೆಹಲಿ: ದೇಶದಲ್ಲಿ ಕೊರೋನಾ ವೈರಸ್​ ತೀವ್ರತೆ ಕಡಿಮೆಯಾಗಿದೆ ಎಂದು ಎಲ್ಲಾ ರಾಜ್ಯಗಳಲ್ಲೂ ಬಹುತೇಕ ಲೌಕ್ಡೌನ್​​ ತೆರವುಗೊಳಿಸಲಾಗಿದೆ. ಕೋವಿಡ್​​-19 ಎರಡನೇ ಅಲೆ ವಿರುದ್ಧ ಗೆಲ್ಲಲು ಲಸಿಕೆ ತೆಗೆದುಕೊಳ್ಳುತ್ತಿದ್ದೇವೆ; ಇನ್ನೇನು ಕೆಲವೇ ತಿಂಗಳಿನಲ್ಲಿ ನಮ್ಮದು ಕೊರೊನಾ ಮುಕ್ತ ಭಾರತವಾಗಲಿದೆ ಎಂಬ ಚರ್ಚೆಯೂ ನಡೆಯುತ್ತಿದೆ. ಹೀಗಿರುವಾಗಲೇ ಕೇಂದ್ರ ಸರ್ಕಾರದಿಂದ ಆಘಾತಕಾರಿ ಸುದ್ದಿಯೊಂದು ಬಯಲಿಗೆ ಬಂದಿದೆ.

ಹೌದು, ಕೋವಿಡ್​​​-19 ಸಾಂಕ್ರಾಮಿಕ ರೋಗವೂ ಹೊರಟು ಹೋಗಿದೆ ಎಂದು ಜನ ನಿರ್ಲಕ್ಷ್ಯ ತೋರುತ್ತಿದ್ದಾರೆ. ಇದು ನಮ್ಮಲ್ಲಿರುವ ತಪ್ಪು ಕಲ್ಪನೆ. ಏಕೆಂದರೆ, ಕಳೆದ ವಾರ ಭಾರತದಲ್ಲಿ ಒಟ್ಟು ದಾಖಲಾದ ಕೊರೋನಾ ಕೇಸುಗಳಲ್ಲಿ ಅರ್ಧಕ್ಕಿಂತ ಹೆಚ್ಚು ಮಹಾರಾಷ್ಟ್ರ ಮತ್ತು ಕೇರಳದಲ್ಲ್ಲೇ ದಾಖಲಾಗಿವೆ. ಹೀಗಾಗಿ ಈಗಲೂ ದೇಶ ಕೊರೊನಾದ ಅಪಾಯದಲ್ಲಿದೆ ಎಂದು ಕೇಂದ್ರ ಸರ್ಕಾರವೇ ತಿಳಿಸಿದೆ.

ಇದನ್ನೂ ಓದಿ:  ರಾಜ್ಯದಲ್ಲಿ 1.48%ಗೆ ಇಳಿದ ಪಾಸಿಟಿವಿಟಿ ರೇಟ್; ಇಂದು 2,290 ಮಂದಿಗೆ ಸೋಂಕು ದೃಢ

ಈ ಸಂಬಂಧ ಸುದ್ದಿಗೋಷ್ಠಿ ನಡೆಸಿದ ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ್ ಅಗರ್ವಾಲ್, ನಾವು ಇನ್ನು ಕೊರೊನಾ ಎರಡನೇ ಅಲೆಯನ್ನು ಎದುರಿಸುತ್ತಿದ್ದೇವೆ. ಯಾವುದೇ ಕಾರಣಕ್ಕೂ ಕೊರೊನಾ ಇಲ್ಲ ಎಂದು ಭಾವಿಸಬೇಡಿ. ಇಂತಹ ತಪ್ಪು ಕಲ್ಪನೆ ಹೊಂದುವ ಬದಲಿಗೆ ಯಾಕೆ ಕೊರೊನಾವನ್ನು ನಿರ್ಲಕ್ಷಿಸುತ್ತಿದ್ದೇವೆ ಎನ್ನುವ ಕುರಿತು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ ಎಂದಿದ್ದಾರೆ.

ದೇಶದ ಜನತೆ ಈಗ ಯಾಕೋ ಕೇಂದ್ರದ ಕೊರೊನಾ ಪ್ರೋಟೋಕಾಲ್​​​ ಫಾಲೋ ಮಾಡುತ್ತಿಲ್ಲ. ಸಾಮಾಜಿಕ ಅಂತರ ಕಾಪಾಡಿಕೊಳ್ಳುತ್ತಿಲ್ಲ. ಮಾಸ್ಕ್​ ಧರಿಸದೇ ಪ್ರವಾಸಿ ತಾಣಗಳಲ್ಲಿ ಬೇಕಾಬಿಟ್ಟಿ ಅಂಟಿಕೊಂಡು ಜನ ಸೇರಿರುತ್ತಾರೆ. ಇದರಿಂದ ಕೊರೊನಾ ಹೇಗೆ ಹೋಗಲು ಸಾಧ್ಯ..? ದೇಶ ಅಪಾಯದಲ್ಲಿದೆ ಎಂದು ಎಚ್ಚರಿಸಿದ್ದಾರೆ.

ಇತ್ತೀಚೆಗೆ ರಷ್ಯಾ, ಅಮೆರಿಕಾ ಸೇರಿದಂತೆ ಭಾರತದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿವೆ. ಆದ್ದರಿಂದ ಮಾಸ್ಕ್​ ಧರಿಸುವುದು, ಸಾಮಾಜಿಕ ಅಂತರ ಕಾಪಾಡುವುದು ಕಡ್ಡಾಯ. ಎಲ್ಲರೂ ಕೇಂದ್ರ ಸರ್ಕಾರದ ಕೋವಿಡ್​​ ಪ್ರೋಟೋಕಾಲ್​​​ ಅನುಸರಿಸಲೇಬೇಕು ಎಂದು ವಾರ್ನ್​​ ಮಾಡಿದ್ದಾರೆ.

ಇದನ್ನೂ ಓದಿ: ವ್ಯಾಕ್ಸಿನೇಷನ್​ನಲ್ಲಿ ಮಹತ್ವದ ಮೈಲಿಗಲ್ಲು; ರಾಜ್ಯದಲ್ಲಿ ಈವರೆಗೆ 2.5 ಕೋಟಿ ಡೋಸ್ ಲಸಿಕೆ ಹಂಚಿಕೆ

ಇನ್ನು, ಕಳೆದ ವಾರ ದೇಶದಲ್ಲಿ ದಾಖಲಾದ ಒಟ್ಟು ಕೇಸುಗಳಲ್ಲಿ ಅರ್ಧಕ್ಕಿಂತ ಹೆಚ್ಚು ಅಂದರೆ ಮಹಾರಾಷ್ಟ್ರ(ಶೇ.21) ಮತ್ತು ಕೇರಳದಿಂದ(ಶೇ.32) ದಾಖಲಾಗಿವೆ. ಹೀಗಾಗಿ ದೇಶಾದ್ಯಂತ ಮತ್ತೆ ಕೊರೊನಾ ಬಗ್ಗೆ ಹೆಚ್ಚು ನಿಗಾ ಹರಿಸಬೇಕಾದ ಅಗತ್ಯವಿದೆ ಎಂದರು.

ದೇಶದಲ್ಲಿ ಇದುವರೆಗೂ ಒಂದು ಲಾಂಬ್ಡಾ ಕೇಸ್​ ಪತ್ತೆಯಾಗಿಲ್ಲ. ಗರ್ಭಿಣಿ ಮಹಿಳೆಯರು ಕೊರೊನಾದಿಂದ ಪಾರಾಗಲು ಲಸಿಕೆಯನ್ನು ಬೇಗೆ ಪಡೆಯಬೇಕು ಎಂದು ನೀತಿ ಆಯೋಗ ಸದಸ್ಯ ವಿ.ಕೆ. ಪಾಲ್ ತಿಳಿಸಿದರು.

The post ಭಾರತದ ಶೇ.53ರಷ್ಟು ಕೊರೊನಾ ಕೇಸ್​​ ಮಹಾರಾಷ್ಟ್ರ, ಕೇರಳದಲ್ಲೇ ಪತ್ತೆ; ಕೇಂದ್ರ ಆತಂಕ appeared first on News First Kannada.

Source: newsfirstlive.com

Source link