ನನಗೆ ನುಗ್ಗೆಕಾಯಿ ಇಷ್ಟ ಇಲ್ಲ.. ಹಾಲು ಕುಡಿಯಲ್ಲ- ರಮ್ಯಾ ಊಟದ ಸೀಕ್ರೆಟ್

ನನಗೆ ನುಗ್ಗೆಕಾಯಿ ಇಷ್ಟ ಇಲ್ಲ.. ಹಾಲು ಕುಡಿಯಲ್ಲ- ರಮ್ಯಾ ಊಟದ ಸೀಕ್ರೆಟ್

ಸ್ಯಾಂಡಲ್​ವುಡ್​​ನ ಕ್ವೀನ್ ರಮ್ಯಾ ಬಹಳ ದಿನಗಳ ನಂತರ ಇಂದು ಇದ್ದಕ್ಕಿದ್ದಂತೆ ಇನ್​ಸ್ಟಾಗ್ರಾಂನಲ್ಲಿ ಲೈವ್ ಬರುವ ಮೂಲಕ ಪ್ರತ್ಯಕ್ಷವಾಗಿದ್ರು.. ಕಾಮಿಡಿಯನ್ ಸೋನು ವೇಣುಗೋಪಾಲ್ ಜೊತೆ ಮನಬಿಚ್ಚಿ ಮಾತನಾಡಿದ ರಮ್ಯಾ ಹಲವು ಪರ್ಸನಲ್ ವಿಷಯಗಳನ್ನೂ ಹಂಚಿಕೊಂಡರು.

ಸೋನು ವೇಣುಗೋಪಾಲ್ ರಮ್ಯಾ ಅವರ ಇಷ್ಟ ಕಷ್ಟಗಳ ಬಗ್ಗೆ ಮಾಹಿತಿ ಕೇಳಿದ್ರು.. ನಾನು ಮಶ್ರೂಮ್, ಬದನೆಕಾಯಿ, ಇಡ್ಲಿ, ಐಸ್​ಕ್ರೀಮ್ ತಿಂತೀನಿ.. ಆದ್ರೆ ಇಡ್ಲಿಯನ್ನ ಸಾಂಬಾರ್ ಜೊತೆ ಯಾವತ್ತೂ ತಿನ್ನೋಕೆ ಇಷ್ಟಪಡಲ್ಲ.. ಚಟ್ನಿ ಜೊತೆಯಷ್ಟೇ ತಿಂತೀನಿ ಎಂದರು. ಇನ್ನು ನನಗೆ ನುಗ್ಗೆಕಾಯಿ ಅಂದ್ರೆ ಇಷ್ಟವಿಲ್ಲ.. ಹಾಲನ್ನೂ ಕುಡಿಯಲ್ಲ ಎಂದರು.

ಅಲ್ಲದೇ ನಾನು ಆಗಾಗ ನನ್ನ ಮೊಬೈಲ್, ಕನ್ನಡಕ ಮತ್ತು ಟೀತ್ ಅಲೈನರ್​ನ್ನ ಮರೆತುಹೋಗ್ತೇನೆ ಎಂದು ಹೇಳಿದ್ರು. ಸಿನಿಮಾ ನಾನ್​ವೆಜ್​ ಮಧ್ಯೆ ಯಾವುದು ಆಯ್ಕೆ ಮಾಡಿಕೊಳ್ತೀರಾ ಎಂದು ಕೇಳಿದಾಗ ಎರಡನ್ನೂ ಆಯ್ಕೆ ಮಾಡಿಕೊಳ್ತೇನೆ ಎಂದರು.

The post ನನಗೆ ನುಗ್ಗೆಕಾಯಿ ಇಷ್ಟ ಇಲ್ಲ.. ಹಾಲು ಕುಡಿಯಲ್ಲ- ರಮ್ಯಾ ಊಟದ ಸೀಕ್ರೆಟ್ appeared first on News First Kannada.

Source: newsfirstlive.com

Source link