ಲಹರಿ ಮ್ಯೂಸಿಕ್‍ಗೆ ಯೂಟ್ಯೂಬ್ ಡೈಮಂಡ್ ಅವಾರ್ಡ್

ಬೆಂಗಳೂರು: ಲಹರಿ ಮ್ಯೂಸಿಕ್‍ಗೆ ಯೂಟ್ಯೂಬ್ ನೀಡುವ ಪ್ರತಿಷ್ಠಿತ ಡೈಮಂಡ್ ಅವಾರ್ಡ್ ಸಿಕ್ಕಿದೆ.

ಸಂಗೀತ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಲಹರಿ ಯುಟ್ಯೂಬ್ ಚಾನೆಲ್ ಶುರುವಾಗಿ ಇಲ್ಲಿಗೆ 10 ವರ್ಷ. ಈ ಸಂಭ್ರಮದ ಹೊತ್ತಲ್ಲೇ ಲಹರಿ ಮ್ಯೂಸಿಕ್ ಯೂಟ್ಯೂಬ್ ಚಾನೆಲ್ ಅನ್ನು ಈಗ 1.18 ಕೋಟಿ ಮಂದಿ  ಸಬ್‍ಸ್ಕ್ರೈಬರ್ಸ್ ಆಗಿದ್ದಾರೆ.

1 ಕೋಟಿ ಸಬ್‍ಸ್ಕ್ರೈಬರ್ಸ್ ಆದ ಹಿನ್ನೆಲೆಯಲ್ಲಿ ನ್ಯೂಯಾರ್ಕ್‍ನಲ್ಲಿರುವ ಯೂಟ್ಯೂಬ್ ಸಂಸ್ಥೆಯಿಂದ ಲಹರಿ ಮ್ಯೂಸಿಕ್‍ಗೆ ಪ್ರತಿಷ್ಠಿತ ಡೈಮಂಡ್ ಅವಾರ್ಡ್ ಪ್ರಶಸ್ತಿ ಸಿಕ್ಕಿದೆ.  ಇದನ್ನೂ ಓದಿ: ಲಹರಿ ಮ್ಯೂಸಿಕ್ ಪಾಲಾಯ್ತು ಕೆಜಿಎಫ್ 2 ಆಡಿಯೋ ರೈಟ್ಸ್

ಕನ್ನಡಕ್ಕೆ ಮಾತ್ರ ಸೀಮಿತವಾಗದೆ ತೆಲುಗು, ತಮಿಳು ಹಾಗೂ ಮಲೆಯಾಳಂಗೂ ಲಹರಿ ಯೂಟ್ಯೂಬ್ ಚಾನೆಲ್ ವಿಸ್ತರಣೆ ಗೊಂಡಿದೆ. ಇದು ನಮಗೆ ಸಿಕ್ಕ ಗೌರವವಲ್ಲ, ಸಮಸ್ತ ಕನ್ನಡಿಗರ ಸಹಕಾರದ ಫಲ. ಹಾಗಾಗಿ ಇದು ಸಮಸ್ತ ಕನ್ನಡಿಗರಿಗೆ ಸಲ್ಲಬೇಕಾದ ಗೌರವ. ಅವರಿಗೆ ಇದು ಅರ್ಪಣೆ ಅಂತಾ ಲಹರಿ ಸಂಸ್ಥೆಯ ಮುಖ್ಯಸ್ಥರಾದ ಲಹರಿ ವೇಲು ತಿಳಿಸಿದ್ದಾರೆ.

The post ಲಹರಿ ಮ್ಯೂಸಿಕ್‍ಗೆ ಯೂಟ್ಯೂಬ್ ಡೈಮಂಡ್ ಅವಾರ್ಡ್ appeared first on Public TV.

Source: publictv.in

Source link