ಕುಡಿಯೋಕೆ ಹಣ ಕೊಡಲಿಲ್ಲ ಅಂತಾ ತಾಯಿಯನ್ನೇ ಕೊಂದ ಆರೋಪಿಗೆ ಗಲ್ಲು ಶಿಕ್ಷೆ

ಕುಡಿಯೋಕೆ ಹಣ ಕೊಡಲಿಲ್ಲ ಅಂತಾ ತಾಯಿಯನ್ನೇ ಕೊಂದ ಆರೋಪಿಗೆ ಗಲ್ಲು ಶಿಕ್ಷೆ

ಕೊಲ್ಲಾಪುರ: ಮದ್ಯ ಸೇವೆನೆ ಮಾಡಲು ಹಣ ಕೊಡಲಿಲ್ಲ ಎಂದು ತಾಯಿಯನ್ನೇ ಕೊಲೆ ಮಾಡಿದ್ದ ಅಪರಾಧಿಗೆ ಕೊಲ್ಲಾಪುರ ಸೆಷನ್ಸ್ ಕೋರ್ಟ್ ಗಲ್ಲು ಶಿಕ್ಷೆ ನೀಡಿ ಆದೇಶ ನೀಡಿದೆ.

ಸುನೀಲ್ ರಾಮ ಕುಚ್ಕೊರವಿ (35) ಗೆ ಮರಣ ದಂಡನೆ ಶಿಕ್ಷೆಗೆ ಗುರಿಯಾದ ಅಪರಾಧಿ. ಕೊಲ್ಲಾಪುರ ಸೆಷನ್ಸ್ ಕೋರ್ಟ್​ನ ನ್ಯಾಯಾಧೀಶ ಮಹೇಶ್ ಕೃಷ್ಣಾಜೀ ಜಾಧವ್ ಅವರು ಶಿಕ್ಷೆಯನ್ನು ಪ್ರಕಟ ಮಾಡಿ ಆದೇಶ ನೀಡಿದ್ದಾರೆ.

ಏನಿದು ಪ್ರಕರಣ..?

ಮಹಾರಾಷ್ಟ್ರ ಮಕವಾಡ ವಾಸಹತ್ ನಲ್ಲಿ 2017 ಆಗಸ್ಟ್ 28 ರಂದು ಮರ್ಡರ್ ಯಲ್ಲಮ್ಮ ರಾಮ ಕುಚ್ಕೊರವಿ‌ (63) ಅವರನ್ನು ಮಟ ಮಟ ಮಧ್ಯಾಹ್ನವೇ ಬರ್ಬರವಾಗಿ ಕೊಲೆ ಮಾಡಲಾಗಿತ್ತು. ಎಣ್ಣೆಗೆ ದುಡ್ಡು ಕೊಡಲಿಲ್ಲ ಅಂತಾ ಯಲ್ಲಮ್ಮ ಪುತ್ರ ಸುನೀಲ್​ ಕೊಲೆ ಮಾಡಿ ಸ್ಥಳದಿಂದ ಪರಾರಿಯಾಗಿದ್ದ. ಬೆಳಗ್ಗೆಯೇ ಕುಡಿತದ ಚಟಕ್ಕೆ ಸುನೀಲ್ ತಾಯಿ ಬಳಿ ಹಣ ಕೇಳಿದ್ದ, ಇದಕ್ಕೆ ತಾಯಿ ಯಲ್ಲಮ್ಮ ಹಣ ಕೊಡಲು ನಿರಾಕರಿಸಿದ್ದರು. ಇದರಿಂದ ಸಿಟ್ಟಿಗೆದ್ದ ಆತ ತಾಯಿಯನ್ನ ಬರ್ಬರವಾಗಿ ಹತ್ಯೆ ಮಾಡಿದ್ದ.

ಆದಾದ ಬಳಿಕ ಸ್ಥಳದಿಂದ ಎಸ್ಕೇಪ್ ಆಗಿ ತಪ್ಪಿಸಿಕೊಂಡಿದ್ದ. ಘಟನೆ ಕುರಿತಂತೆ ಶಾಹುಪುರಿ ಠಾಣೆ ಪೊಲೀಸರು ತನಿಖೆ ಮಾಡಿ ಆರೋಪಿಯನ್ನ ಪತ್ತೆ ಮಾಡಿದ್ದರು. ಈತನೇ ಆರೋಪಿ ಅಂತಾ ಸಾಬೀತು ಪಡಿಸಲು ಪೊಲೀಸರು ಡಿಎನ್ಎ ಟೆಸ್ಟ್ ಮೊರೆ ಹೋಗಿದ್ದರು. ಆತನ ಹೊಟ್ಟೆಯ ವಾಷ್ ಮಾಡಿಸಿ ಅದನ್ನು ಎಫ್ಎಸ್ಎಲ್​ ಪರೀಕ್ಷೆಗೆ ಕಳುಹಿಸಿದ್ದರು. ಆದಾದ ಬಳಿಕ ಡಿಎನ್ಎ ಮ್ಯಾಚ್ ಆದ ಕಾರಣ ಈತನೇ ಕೊಲೆ ಆರೋಪಿ ಎಂಬುವುದು ಖಚಿತವಾಗಿ.

ಪ್ರಕರಣದಲ್ಲಿ ಪಿಪಿ ಶುಕ್ಲ ಅವರು ನ್ಯಾಯಾಲಯದಲ್ಲಿ ಅಪರಾಧಿ ವಿರುದ್ಧ ವಾದ ಮಂಡಿಸಿದ್ದರು. ಇಂದು ತುಂಬಾ ಅಪರೂಪದ ಕ್ರೂರ ಕೃತ್ಯ, ಯಾರು ಸಹ ಊಹಿಸಲಾಗದಂತಹ ಹೀನಾ ಕೃತ್ಯವೆಂದು ವಾದಿಸಿದ್ದರು. ವಕೀಲರ ವಾದ ಆಲಿಸಿದ ಕೋರ್ಟ್ ಅಪರಾಧಿಗೆ ಮರಣದಂಡನೆ ಶಿಕ್ಷೆ ನೀಡಿದೆ.

The post ಕುಡಿಯೋಕೆ ಹಣ ಕೊಡಲಿಲ್ಲ ಅಂತಾ ತಾಯಿಯನ್ನೇ ಕೊಂದ ಆರೋಪಿಗೆ ಗಲ್ಲು ಶಿಕ್ಷೆ appeared first on News First Kannada.

Source: newsfirstlive.com

Source link