ಇಲ್ಲಿ ಮಾಸ್ಕ್​ ಹಾಕದಿದ್ದರೆ 5 ಸಾವಿರ ದಂಡ, 8 ದಿನಗಳ ಜೈಲು ಶಿಕ್ಷೆ

ಇಲ್ಲಿ ಮಾಸ್ಕ್​ ಹಾಕದಿದ್ದರೆ 5 ಸಾವಿರ ದಂಡ, 8 ದಿನಗಳ ಜೈಲು ಶಿಕ್ಷೆ

ಮನಾಲಿ: ಜನಜಾತ್ರೆಯ ವಿಡಿಯೋ ವೈರಲ್​ ಆಗುತ್ತಿದಂತೆ ಹರಿಯಾಣ ಸರ್ಕಾರ ಕೊರೊನಾ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಜಾರಿ ಮಾಡಲು ಮುಂದಾಗಿದ್ದು, ನಿಯಮಗಳನ್ನು ಉಲ್ಲಂಘಿಸಿದವರ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಿದೆ.

ಕೊರೊನಾ ಅನ್​​ಲಾಕ್ ಆಗುತ್ತಿದಂತೆ ಜನರು ಹರಿಯಾಣ ಪ್ರವಾಸಿ ತಾಣಗಳಿಗೆ ಲಗ್ಗೆ ಇಟ್ಟಿದ್ದರು. ಅದರಲ್ಲೂ ಮನಾಲಿಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದರು. ಈ ವೇಳೆ ಯಾವುದೇ ಕೊರೊನಾ ನಿಯಮಗಳನ್ನು ಪಾಲನೆ ಮಾಡದೆ ಕೋವಿಡ್​ ಮೂರನೇ ಅಲೆಗೆ ಮುಕ್ತ ಆಹ್ವಾನ ನೀಡುವಂತೆ ವರ್ತಿಸಿದ್ದರು. ಇದಕ್ಕೆ ಸಂಬಂಧಿಸಿದ ಫೋಟೋಗಳು ಹಾಗೂ ವಿಡಿಯೋಗಳು ದೇಶದಾದ್ಯಂತ ವೈರಲ್ ಆಗಿದ್ದವು. ಈ ಬಗ್ಗೆ ಕೇಂದ್ರ ಆರೋಗ್ಯ ಇಲಾಖೆ ಕೂಡ ಆತಂಕ ವ್ಯಕ್ತಪಡಿಸಿತ್ತು. ಈ ಹಿನ್ನೆಲೆಯಲ್ಲಿ ಕಠಿಣ ಕ್ರಮಕ್ಕೆ ಮುಂದಾಗಿರುವ ಹರಿಯಾಣದ ಮನಾಲಿ ಸ್ಥಳೀಯ ಅಧಿಕಾರಿಗಳು ನಿಯಮಗಳನ್ನು ಉಲ್ಲಂಘಿಸಿದವರಿಗೆ ಬರೋಬ್ಬರಿ 5 ಸಾವಿರ ದಂಡ ಅಥವಾ 8 ದಿನಗಳ ಜೈಲು ಶಿಕ್ಷೆ ನೀಡುವ ನಿಯಮಗಳನ್ನು ಜಾರಿ ಮಾಡಲು ಮುಂದಾಗಿದೆ.

blank

ಯಾವುದೇ ವ್ಯಕ್ತಿ ಸಾರ್ವಜನಿಕರ ಸ್ಥಳದಲ್ಲಿ ಓಡಾಡುವ ಸಂದರ್ಭದಲ್ಲಿ ಫೇಸ್​ ಮಾಸ್ಕ್​, ಸಾಮಾಜಿಕ ಅಂತರ ಪಾಲನೆ ಮಾಡದಿದ್ದರೆ 5 ಸಾವಿರ ದಂಡ ಅಥವಾ 8 ದಿನಗಳ ಜೈಲು ಶಿಕ್ಷೆ ವಿಧಿಸಲು ಮನಾಲಿ ಆಡಳಿತ ಅಧಿಕಾರಿಗಳು ನಿರ್ಧರಿಸಿದ್ದಾರೆ. ಈ ಕುರಿತು ಮಾಹಿತಿ ನೀಡಿರುವ ಎಸ್​ಪಿ ಗುರುದೇವ್​ ಶರ್ಮಾ, ಪ್ರವಾಸಿಗರಲ್ಲಿ ಜಾಗೃತಿ ಮೂಡಿಸಲು ಅಭಿಯಾನಗಳನ್ನು ಕೈಗೊಳ್ಳುತ್ತಿದ್ದೇವೆ. ಕಳೆದ 7-8 ದಿನಗಳಲ್ಲಿ 300ಕ್ಕೂ ಹೆಚ್ಚು ಮಂದಿಗೆ ದಂಡ ವಿಧಿಸಲಾಗಿದ್ದು, 3 ಲಕ್ಷ ರೂಪಾಯಿ ದಂಡ ವಸೂಲಿಯಾಗಿದೆ. ಆದ್ದರಿಂದ ಫೇಸ್​ ಮಾಸ್ಕ್​ ಹಾಕದ ಜನರಿಗೆ 5 ಸಾವಿರ ದಂಡ ಅಥವಾ 8 ದಿನ ಜೈಲು ಶಿಕ್ಷೆ ವಿಧಿಸಲಾಗುವುದು ಎಂದು ಹೇಳಿದ್ದಾರೆ.

ಹರಿಯಾಣದ ಶಿಮ್ಲಾ, ಮನಾಲಿ, ಧರ್ಮಶಾಲಾ, ಡಾಲ್ಹೌಸಿ, ನರ್ಕಂಡ ಪ್ರದೇಶಗಳಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಳವಾಗಿದೆ. ಜುಲೈ ಆರಂಭದಿಂದ ಹಿಮಾಚಲ ಪ್ರದೇಶಕ್ಕೆ ಸುಮಾರು 6-7 ಲಕ್ಷ ಮಂದಿ ಪ್ರವಾಸಿಗಾರು ಭೇಟಿ ನೀಡಿದ್ದಾರೆ. ಪ್ರತಿವರ್ಷ ಹರಿಯಾಣ ರಾಜ್ಯಕ್ಕೆ ವಿದೇಶಿಗರು ಸೇರಿ ಸುಮಾರು 32 ಲಕ್ಷ ಮಂದಿ ಪ್ರವಾಸಿಗರು ಭೇಟಿ ನೀಡುತ್ತಿದ್ದರು. ಆದರೆ ಕೊರೊನಾ ಹಾಗೂ ಲಾಕ್​​ಡೌನ್ ಕಾರಣದಿಂದ ಮೇ 31ರ ವೇಳೆಗೆ ಕೇವಲ 13 ಲಕ್ಷ ಪ್ರವಾಸಿಗರು ಮಾತ್ರ ಭೇಟಿ ನೀಡಿದ್ದಾರೆ.

The post ಇಲ್ಲಿ ಮಾಸ್ಕ್​ ಹಾಕದಿದ್ದರೆ 5 ಸಾವಿರ ದಂಡ, 8 ದಿನಗಳ ಜೈಲು ಶಿಕ್ಷೆ appeared first on News First Kannada.

Source: newsfirstlive.com

Source link