ನೌಕಪಡೆಗೆ ಸೇರಿದ ಜಾಗದಲ್ಲಿ ಡ್ರೋನ್​​ ಹಾರಿಸಿದ್ರೆ ಜೈಲು ಗ್ಯಾರಂಟಿ; ಏನಿದು ಹೊಸ ಆದೇಶ?

ನೌಕಪಡೆಗೆ ಸೇರಿದ ಜಾಗದಲ್ಲಿ ಡ್ರೋನ್​​ ಹಾರಿಸಿದ್ರೆ ಜೈಲು ಗ್ಯಾರಂಟಿ; ಏನಿದು ಹೊಸ ಆದೇಶ?

ಕೊಚ್ಚಿ: ನೌಕಪಡೆಗೆ ಸೇರಿದ ಸ್ವತ್ತುಗಳ 3 ಕಿಲೋ ಮೀಟರ್​ ವ್ಯಾಪ್ತಿಯಲ್ಲಿ ಸಾಂಪ್ರದಾಯಿಕವಲ್ಲದ ವೈಮಾನಿಕ ವಾಹನಗಳ ಹಾರಾಟವನ್ನು ನಿಷೇಧಿಸಲಾಗಿದೆ. ನೌಕಾ ನೆಲೆ, ನೌಕಾ ಘಟಕ ಮತ್ತು ನೌಕಾದಳಕ್ಕೆ ಸೇರಿದ ಜಾಗದಲ್ಲಿ ಯಾವುದೇ ಕಾರಣಕ್ಕೂ ಡ್ರೋನ್ ಮತ್ತು ಮಾನವರಹಿತ ವೈಮಾನಿಕ ವಾಹನಗಳ ಹಾರಾಟ ನಡೆಸುವಂತಿಲ್ಲ ಎಂದು ಶುಕ್ರವಾರ ಭಾರತೀಯ ನೌಕಾಪಡೆ ಸ್ಪಷ್ಟಪಡಿಸಿದೆ.

ನಮ್ಮ ಇಲಾಖೆಗೆ ಸೇರಿದ ಜಾಗದಲ್ಲಿ ಯಾವುದೇ ಡ್ರೋನ್​​​ ಹಾರಾಟ ನಡೆಸುವಂತಿಲ್ಲ. ಒಂದು ವೇಳೆ ರಿಮೋಟ್ ಪೈಲಟ್ ಏರ್‌ಕ್ರಾಫ್ಟ್ ಸಿಸ್ಟಮ್ಸ್ ಸೇರಿದಂತೆ ಯಾರೇ ಆಗಲಿ ತಮ್ಮ ಡ್ರೋನ್​​ ಹಾರಾಟ ನಡೆಸಿ ಆದೇಶ ಉಲ್ಲಂಘಿಸಿದರೆ ಕ್ರಮ ತೆಗೆದುಕೊಳ್ಳಲಾಗುವುದು. ಅವರ ಡ್ರೋನ್ ಮತ್ತು ಮಾನವರಹಿತ ವೈಮಾನಿಕ ವಾಹನಗಳನ್ನು ವಶಪಡಿಸಿಕೊಳ್ಳಲಾಗುವುದು ಎಂದು ನೌಕಪಡೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

ಇನ್ನು, ಹೀಗೆ ಆದೇಶ ಉಲ್ಲಂಘಿಸಿದವರ ವಿರುದ್ಧ ಐಪಿಸಿ ಸೆಕ್ಷನ್​​​ 121, 121 ಎ, 287, 336, 337 ಮತ್ತು 338 ಸೆಕ್ಷನ್ ಅಡಿಯಲ್ಲಿ ಎಫ್​​ಐಆರ್​​ ದಾಖಲಿಸಲಾಗುವುದು. ಬಳಿಕ ಇದರ ಅನ್ವಯ ತಪ್ಪಿತಸ್ಥರನ್ನು ಜೈಲಿಗೆ ಕಳಿಸಲಾಗುವುದು ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಸಿಎಂ ಕಾರ್ಯಕ್ರಮದ ವೇಳೆ ಲೈಸೆನ್ಸ್​ ಇಲ್ದೆ ಡ್ರೋನ್​​ ಹಾರಿಸಿದ ವ್ಯಕ್ತಿ ಮೇಲೆ ಬಿತ್ತು ಕೇಸ್

ಕಳೆದ ತಿಂಗಳು ಜಮ್ಮು-ಕಾಶ್ಮೀರದ ಭಾರತೀಯ ವಾಯುನೆಲೆ ಮೇಲೆ ಡ್ರೋನ್​​ ದಾಳಿ ನಡೆಸಲಾಗಿತ್ತು. ಈ ಡ್ರೋನ್​​ ದಾಳಿಯೂ ಭಯೋತ್ಪಾದಕರಿಂದಲೇ ಆಗಿದೆ ಎನ್ನಲಾಗಿತ್ತು. ಈ ಬೆನ್ನಲ್ಲೇ ಎಚ್ಚೆತ್ತ ನೌಕಾಪಡೆ ಈ ನಿರ್ಧಾರಕ್ಕೆ ಬಂದಿದೆ.

The post ನೌಕಪಡೆಗೆ ಸೇರಿದ ಜಾಗದಲ್ಲಿ ಡ್ರೋನ್​​ ಹಾರಿಸಿದ್ರೆ ಜೈಲು ಗ್ಯಾರಂಟಿ; ಏನಿದು ಹೊಸ ಆದೇಶ? appeared first on News First Kannada.

Source: newsfirstlive.com

Source link