ಕೋವಿಡ್​ನಿಂದ ಗರ್ಭಿಣಿಯರಿಗೆ ಅವಧಿಗೂ ಮುನ್ನವೇ ಹೆರಿಗೆಯಾಗಬಹುದು.. ಕೇಂದ್ರದ ಸಲಹೆ ಏನು?

ಕೋವಿಡ್​ನಿಂದ ಗರ್ಭಿಣಿಯರಿಗೆ ಅವಧಿಗೂ ಮುನ್ನವೇ ಹೆರಿಗೆಯಾಗಬಹುದು.. ಕೇಂದ್ರದ ಸಲಹೆ ಏನು?

ನವದೆಹಲಿ: ವ್ಯಾಕ್ಸಿನೇಷನ್ ಪ್ರಾರಂಭವಾದಾಗಿನಿಂದಲೂ ಗರ್ಭಿಣಿ ಮಹಿಳೆಯರು ವ್ಯಾಕ್ಸಿನ್ ತೆಗೆದುಕೊಳ್ಳುವ ವಿಚಾರದಲ್ಲಿ ಗೊಂದಲ ಏರ್ಪಟ್ಟಿತ್ತು. ಈ ಕುರಿತು ಹೇಳಿಕೆ ನೀಡಿರುವ ನೀತಿ ಆಯೋಗದ ಸದಸ್ಯ ವಿ.ಕೆ. ಪೌಲ್.. ಕೊರೊನಾ ವಿರುದ್ಧ ಹೋರಾಡಲು ಗರ್ಭಿಣಿ ಮಹಿಳೆಯರು ಕೊರೊನಾ ವ್ಯಾಕ್ಸಿನ್ ತೆಗೆದುಕೊಳ್ಳಲೇಬೇಕು. ಈ ವಿಚಾರದಲ್ಲಿ ಹಿಂದೆಮುಂದೆ ನೋಡುವ ಅಗತ್ಯವೇ ಇಲ್ಲ.. ಯಾಕಂದ್ರೆ ಎಲ್ಲಾ ವೈಜ್ಞಾನಿಕ ಅಧ್ಯಯನಗಳು ಗರ್ಭಿಣಿ ಮಹಿಳೆಯರು ವ್ಯಾಕ್ಸಿನ್ ತೆಗೆದುಕೊಳ್ಳಬೇಕೆಂದೇ ಹೇಳುತ್ತವೆ ಎಂದಿದ್ದಾರೆ.

ಕೋವಿಡ್​ನಿಂದ ಅವಧಿಗೂ ಮುನ್ನ ಹೆರಿಗೆಯಾಗಬಹದು.

ಮುಂದುವರೆದು ಇತರರಿಗೆ ಕೊರೊನಾದಿಂದಾಗುವ ಪರಿಣಾಮಗಳಿಗೂ ಗರ್ಭಿಣಿ ಮಹಿಳೆಯರಿಗಾಗುವ ಪರಿಣಾಮಗಳಿಗೂ ಅಂಥಾ ದೊಡ್ಡ ವ್ಯತ್ಯಾಸವೇನೂ ಇಲ್ಲ. ಪ್ರೆಗ್ನೆನ್ಸಿಗೆ ಸಂಬಂಧಿಸಿದ ಅಥವಾ ಸಂಬಂಧಿಸಿರದ ಕೆಲವು ಸಮಸ್ಯೆಗಳು ಇದ್ದಿರಬಹುದು ಅಥವಾ ಇರದಿರಬಹುದು.. ಇದು ಎರಡು ಜೀವಗಳ ಪ್ರಶ್ನೆ.. ಆದರೆ ಇದೊಂದೇ ಅಲ್ಲ.. ಕೋವಿಡ್​ನಿಂದ ಗರ್ಭಿಣಿ ಮಹಿಳೆಯರಿಗೆ ಅವಧಿಗೂ ಮುನ್ನವೇ ಹೆರಿಗೆಯಾಗುವ ಸಾಧ್ಯತೆಗಳಿರುತ್ತವೆ. ನಂತರ ಕೊರೊನಾ ತಾಯಿ ಹಾಗೂ ಮಗು ಇಬ್ಬರನ್ನೂ ಕಾಡುವ ಸಾಧ್ಯತೆಗಳಿರುತ್ತವೆ. ಹೀಗಾಗಿ ಕೊರೊನಾ ವ್ಯಾಕ್ಸಿನ್ ಇಂಥ ಸಮಸ್ಯೆಗಳಿಂದ ಮುಕ್ತಿ ನೀಡುತ್ತದೆ ಎಂದು ಹೇಳಿದ್ದಾರೆ.

ಕೋವ್ಯಾಕ್ಸಿನ್, ಕೋವಿಶೀಲ್ಡ್ ಹಾಗೂ ಸ್ಫುಟ್ನಿಕ್ ಮೂರೂ ಲಸಿಕೆಗಳು ಗರ್ಭಿಣಿ ಮಹಿಳೆಯರಿಗೆ ಸೇಫ್

ಇತ್ತೀಚೆಗೆ ಕೇಂದ್ರ ಸರ್ಕಾರ ಗರ್ಭಿಣಿ ಮಹಿಳೆಯರಿಗೆ ವ್ಯಾಕ್ಸಿನೇಷನ್​ ಸಂಬಂಧಿಸಿದಂತೆ ಗೈಡ್​ಲೈನ್ಸ್ ಕೂಡ ಹೊರಡಿಸಿತ್ತು. ಅಲ್ಲದೇ ದೇಶದಲ್ಲಿ ಸದ್ಯ ಲಭ್ಯವಿರುವ ಕೋವ್ಯಾಕ್ಸಿನ್, ಕೋವಿಶೀಲ್ಡ್ ಹಾಗೂ ಸ್ಫುಟ್ನಿಕ್ ಮೂರೂ ಲಸಿಕೆಗಳು ಗರ್ಭಿಣಿ ಮಹಿಳೆಯರಿಗೆ ಸೇಫ್ ಎಂದು ಹೇಳಿದ್ದಾರೆ.

ನಾವೀಗ ಇದನ್ನ ಬಲವಾಗಿ ರೆಕಮೆಂಡ್ ಮಾಡುತ್ತಿದ್ದೇವೆ..

ದೇಶದಲ್ಲಿ ಜನವರಿಯಿಂದಲೇ ವ್ಯಾಕ್ಸಿನೇಷನ್ ಪ್ರಾರಂಭವಾಗಿದ್ದರೂ ವೈದ್ಯಕೀಯ ಪ್ರಯೋಗ ನಡೆಸದ ಹಿನ್ನೆಲೆಯಲ್ಲಿ ಗರ್ಭಿಣಿ ಮಹಿಳೆಯರಿಗೆ ವ್ಯಾಕ್ಸಿನೇಷನ್ ನೀಡುವುದನ್ನು ಪ್ರಾರಂಭಿಸಿರಲಿಲ್ಲ. ಈ ಕುರಿತು ಹೇಳಿಕೆ ನೀಡಿದ ವಿ.ಕೆ. ಪೌಲ್.. ಗರ್ಭಿಣಿ ಮಹಿಳೆಯರಿಗೆ ವ್ಯಾಕ್ಸಿನೇಷನ್ ರೆಕಮೆಂಡ್ ಮಾಡಲು ಸ್ವಲ್ಪ ಸಮಯ ತೆಗೆದುಕೊಳ್ಳಬೇಕಾಯ್ತು.. ಇದೀಗ ಎಲ್ಲಾ ಅಧ್ಯಯನಗಳೂ ವ್ಯಾಕ್ಸಿನ್​ನಿಂದ ಗರ್ಭಿಣಿ ಮಹಿಳೆಯರ ಪರವಾಗಿಯೇ ಇವೆ.. ಹೀಗಾಗಿ ನಾವೀಗ ಇದನ್ನ ಬಲವಾಗಿ ರೆಕಮೆಂಡ್ ಮಾಡುತ್ತಿದ್ದೇವೆ ಎಂದಿದ್ದಾರೆ. ಅಲ್ಲದೇ ಗರ್ಭಿಣಿ ಮಹಿಳೆಯರು ಕೋವಿಡ್ ವ್ಯಾಕ್ಸಿನೇಷನ್​ ಪಡೆಯುವ ಮುನ್ನ ಯಾವುದೇ ಪರೀಕ್ಷೆಗೆ ಒಳಪಡುವ ಅಗತ್ಯತೆ ಇಲ್ಲ ಅಂತಲೂ ಕೇಂದ್ರ ಸರ್ಕಾರ ಹೇಳಿದೆ.

The post ಕೋವಿಡ್​ನಿಂದ ಗರ್ಭಿಣಿಯರಿಗೆ ಅವಧಿಗೂ ಮುನ್ನವೇ ಹೆರಿಗೆಯಾಗಬಹುದು.. ಕೇಂದ್ರದ ಸಲಹೆ ಏನು? appeared first on News First Kannada.

Source: newsfirstlive.com

Source link