ಸದಾನಂದಗೌಡರಿಗೆ ಅದ್ಧೂರಿ ಸ್ವಾಗತ: ಹೆಗಲ ಮೇಲೆ ಹೊತ್ತು ಮೆರೆಸಿದ ಬೆಂಬಲಿಗರು

ಸದಾನಂದಗೌಡರಿಗೆ ಅದ್ಧೂರಿ ಸ್ವಾಗತ: ಹೆಗಲ ಮೇಲೆ ಹೊತ್ತು ಮೆರೆಸಿದ ಬೆಂಬಲಿಗರು

ಬೆಂಗಳೂರು: ಇಂದು ಸಂಜೆ 5.15 ರ ವಿಮಾನದಲ್ಲಿ ಕೆಐಎಎಲ್​ಗೆ ಆಗಮಿಸಿದ ಮಾಜಿ‌ ಕೇಂದ್ರ ಸಚಿವ ಡಿವಿಎಸ್ ಅವರು ವಿಮಾನ ನಿಲ್ದಾಣದ ಹೊರಗಡೆ ಬರುತ್ತಿದ್ದಂತೆ ಬೆಂಬಲಿಗರು ಘೋಷಣೆ ಕೂಗಿ ನಿಮ್ಮ ಜತೆ ನಾವಿದ್ದೇವೆ ಎಂದಿದ್ದಾರೆ. ಅಲ್ಲದೇ ಡಿವಿಎಸ್​ ಅವರನ್ನು ಹೆಗಲ ಮೇಲೆ ಹೊತ್ತು ಮೆರೆಸಿದ್ದಾರೆ.

blank

ಈ ವೇಳೆ ಹೇಳಿಕೆ ನೀಡಿದ ಡಿವಿಎಸ್​.. ನನ್ನ ಮತ್ತು ಪಕ್ಷದ ಕಾರ್ಯಕರ್ತರ ಸಂಬಂಧ ಎಲ್ಲೇ ಇದ್ರೂ ನಾವೆಲ್ಲರೂ ಒಟ್ಟಾಗಿ ಇದ್ದೇವೆ ಎಂಬ ಸಂದೇಶ ಇದು. ನಾನು ಪಕ್ಷದ ನಿಷ್ಟಾವಂತ ಕಾರ್ಯಕರ್ತ. ರಾಷ್ಟ್ರೀಯ ಅಧ್ಯಕ್ಷರು ನನ್ನನ್ನು ಪಕ್ಷಕ್ಕೆ ತೊಡಗಿಸಿಕೊಳ್ತೇನೆ ಅಂದಿದ್ರು. ಆ ಕಾರಣಕ್ಕೆ ನಾನು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಬಂದಿದ್ದೇನೆ.. ಮುಂದೆ ಪಕ್ಷ ಸಂಘಟನೆಯೇ ನನ್ನ ಗುರಿ ಎಂದಿದ್ದಾರೆ.

blank

ಪಕ್ಷ ಸಂಘಟನೆಯ ಹುಮ್ಮಸ್ಸಿನಲ್ಲಿರೋ ನಿಮಗೆ ಮುಂದೆ ಅದೃಷ್ಟ ಒಲಿಯುತ್ತಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು.. ಅದನ್ನು ನಾನು ಹೇಗೆ ಹೇಳಲಿ? ಆದರೆ ಹಿರಿಯರು ಏನು ಹೇಳುತ್ತಾರೆ ಹಾಗೆ ನಡೆಯುತ್ತೇನೆ ಎಂದಿದ್ದಾರೆ. ಮುಂದಿನ ಮುಖ್ಯಮಂತ್ರಿ ಸದಾನಂದಗೌಡ ಎಂಬ ಕಾರ್ಯಕರ್ತನ ಕೂಗಿನ ವಿಚಾರವಾಗಿ ಪ್ರತಿಕ್ರಿಯೆ ನೀಡಿ.. ಅದು ಅವರ ಅಭಿಪ್ರಾಯ. ಹಾಗಂತ ಅದನ್ನು ನಾನು ಹೇಳಿಸಿದ್ದು ಅಲ್ಲ ಎಂದು ಹೇಳಿದ್ದಾರೆ.

blank

ಪಕ್ಷದ ಅಧ್ಯಕ್ಷರ ಸೂಚನೆ ಮೆರೆಗೆ ರಾಜಿನಾಮೆ ನೀಡಿದ್ದೇನೆ, ಪಕ್ಷ ನನಗೆ ಎಲ್ಲವನ್ನೂ ನೀಡಿದೆ, ನಾನು ಸಂತೋಷದಿಂದ ಇದ್ದೇನೆ, ಅಧಿಕಾರ ಸಿಕ್ಕಾಗ ಮಾತ್ರವಲ್ಲ.. ಕಳೆದುಕೊಂಡಾಗಲೂ ಜನ ನನ್ನೊಂದಿಗೆ ಇದ್ದಾರೆ. ಜನರ ಪ್ರೀತಿಗೆ ನಾನು ಚಿರರುಣಿ, ರಾಜ್ಯ ರಾಜಕಾರಣದ ಬಗ್ಗೆ ಈಗಲೇ ನಾನು ಏನೂ ಹೇಳಲಾಗುವುದಿಲ್ಲ, ಪಕ್ಷ ನೀಡುವ ಜವಾಬ್ದಾರಿ ಮತ್ತು ಸೂಚನೆ ಮೇರೆಗೆ ಕೆಲಸ ಮಾಡ್ತೀನಿ ಎಂದಿದ್ದಾರೆ.

 

The post ಸದಾನಂದಗೌಡರಿಗೆ ಅದ್ಧೂರಿ ಸ್ವಾಗತ: ಹೆಗಲ ಮೇಲೆ ಹೊತ್ತು ಮೆರೆಸಿದ ಬೆಂಬಲಿಗರು appeared first on News First Kannada.

Source: newsfirstlive.com

Source link