ನೀನ್ ಯಾರು ಕೇಳೋಕೆ – ಸಂಬರಗಿ ವಿರುದ್ಧ ಅರವಿಂದ್ ಗರಂ

ಬಿಗ್ ಬಾಸ್ ಮನೆಯಲ್ಲಿ ಒಂದಿಲ್ಲೊಂದು ವಿಚಾರಕ್ಕೆ ಪ್ರತಿ ದಿನ ಜಗಳ ಆಗುತ್ತಲೇ ಇದೆ. ಅದೇ ರೀತಿ ಇದೀಗ ಅರವಿಂದ್ ಹಾಗೂ ಪ್ರಶಾಂತ್ ಸಂಬರಗಿ ಮಧ್ಯೆ ನಡೆದಿದ್ದು, ಅರವಿಂದ್ ಸಂಬರಗಿಗೆ ಚಳಿ ಬಿಡಿಸಿದ್ದಾರೆ.

ಹೌದು ಬಿಗ್ ಬಾಸ್ ದಿವ್ಯಾ ಉರುಡುಗ ಅವರ ಕ್ಯಾಪ್ಟೆನ್ಸಿ ಅವಧಿ ಮುಗಿದಿದೆ ಎನ್ನುತ್ತಲೇ ಎಲ್ಲರೂ ಚಪ್ಪಾಳೆ ತಟ್ಟಿದ್ದು, ಬಳಿಕ ಪ್ರಶಾಂತ್ ಸಂಬರಗಿ ದಿವ್ಯಾ ಉರುಡುಗ ಅವರ ಕೈ ಕುಲುಕಿದ್ದಾರೆ. ಈ ವೇಳೆ ಅರವಿಂದ್ ಅದು ಸುಳ್ಳು, ಇದನ್ನು ನಂಬಬೇಡ. ಹುಚ್ಚ ಬಂದರು, ಅವರು ಸ್ನೇಹಿತರಂತೆ ಚೆನ್ನಾಗಿದ್ದು, ಹಿಂದೆ ಮಾತನಾಡುತ್ತಾರೆ ಎಂದಿದ್ದಾರೆ. ಇದಕ್ಕೆ ಪ್ರಶಾಂತ್ ಸಂಬರಗಿ ಉತ್ತರಿಸಿ ನಾನು ನೇರವಾಗಿಯೇ ಮಾತನಾಡುತ್ತೇನೆ. ನಿನಗೆ ಸ್ಪೋರ್ಟಿವ್ ಸ್ಪಿರಿಟ್ ಇಲ್ಲ ಗುರು ಎಂದಿದ್ದಾರೆ.

ನನ್ನ ಕ್ಯಾರೆಕ್ಟರ್ ಬಗ್ಗೆ ನೀವು ಮಾತನಾಡಬೇಕಿಲ್ಲ, ನಿಮ್ದು ನೀವು ನೋಡ್ಕೊಳಿ. ನಿಮ್ಮ ಮಾರ್ಗದರ್ಶನ ನಮಗೆ ಬೇಕಾಗಿಲ್ಲ. ನಿನ್ನ ಬಗ್ಗೆ ಎಲ್ಲರಿಗೂ ಗೊತ್ತು ಎಂದು ಹೇಳಿದ್ದಾರೆ. ನಿನಗೆ ಒಂದು ವಿಮರ್ಶೆಯನ್ನು ಸಹಿಸಿಕೊಳ್ಳಲು ಆಗುವುದಿಲ್ಲವೆಂದರೆ ಹೇಗೆ ಎಂದು ಸಂಬರಗಿ ಪ್ರಶ್ನಿಸಿದ್ದಾರೆ. ತಕ್ಷಣವೇ ಉತ್ತರಿಸಿದ ಅರವಿಂದ್ ಕ್ರಿಟಿಸಿಸಂ ತೆಗೆದುಕೊಳ್ಳುವುದು ನನಗೆ ಗೊತ್ತಿದೆ ಎಂದು ಹೇಳಿದ್ದಾರೆ.

blank

ಹುಚ್ಚ ಆಚೆ ಹೋಗಿ ವಿದ್ಯಾ ಉರುಡುಗ ಹೀಗೆ, ಹಾಗೆ ಎಂದು ಹೇಳುತ್ತಿದ್ದಾರೆ. ಇದಕ್ಕೆ ಸಂಬರಗಿ ಪ್ರತಿಕ್ರಿಯಿಸಿ, ಹೌದು ಫೇವರಿಟಿಸಂ ಮಾಡುತ್ತಿದ್ದೀಯಾ ಎಂದು ನಾನು ಹೇಳಿದೆ. ಎರಡು ವಿಚಾರದಲ್ಲಿ ಫೇವರಿಟಿಸಂ ಆಗಿತ್ತು ಎಂದು ಏರು ಧ್ವನಿಯಲ್ಲಿ ಹೇಳಿದ್ದಾರೆ. ತಕ್ಷಣ ಅರವಿಂದ್ ನೀನ್ಯಾರು ಕೇಳಲು, ನೀನೇನು ಬಿಗ್ ಬಾಸಾ? ಎಂದು ಜೋರಾಗಿ ಕೇಳಿದ್ದಾರೆ. ಅಲ್ಲದೆ ನೀನು ಬಿಗ್ ಬಾಸಾ ಎಂದು ಪ್ರಶಾಂತ್ ಮರು ಪ್ರಶ್ನಿಸಿದ್ದಾರೆ.

ನೀನು ಆಟದಲ್ಲೇ ಇಲ್ಲ ನಿನ್ಯಾಗ್ಯಾಕೆ, ನೀನು ಅಡ್ವಕೇಟಾ ಅವರ ಪರ ಎಂದು ಪ್ರಶ್ನಿಸಿದ್ದಾರೆ. ಹೌದು ನಾನು ನ್ಯಾಯದ ಪರ ಮಾತನಾಡುವ ಅಡ್ವೋಕೇಟ್, ನೀನು ಮೋಸ ಮಾಡಿದ್ದೀಯಾ, ಎಷ್ಟು ಗೇಮ್‍ನಲ್ಲಿ ಚೀಟಿಂಗ್ ಮಾಡಿದ್ದೀಯಾ ಎಂದು ಹೇಳುತ್ತೇನೆ ಎಂದಿದ್ದಾರೆ. ಆಯ್ತು ಹೇಳು ಎಲ್ಲರೂ ನೋಡುತ್ತಿದ್ದಾರೆ, ಅಲ್ಲದೆ ಮುಂದೆ ನೀನು ನನ್ನ ಫ್ರೆಂಡ್ ಎಂದು ನೈಸ್ ಆಗಿ ಮಾತನಾಡುವುದು, ಬೇರೆಯವರ ಬಳಿ ಹೋಗಿ ನಮ್ಮ ವಿರುದ್ಧವೇ ಮಾತನಾಡುವುದು ಇದು ಯಾವ ರೀತಿಯ ಕನ್ನಿಂಗ್, ಮುಚ್ಚೋ ಎಂದು ಅರವಿಂದ್ ವಾರ್ನ್ ಮಾಡಿದ್ದಾರೆ.

blank

ಮುಚ್ಗೊಂಡು ಕೂರು ಎಂದು ಅರವಿಂದ್ ಹೇಳಿದ ತಕ್ಷಣ ನೀನ್ ಕೂರು ಎಂದು ಪ್ರಶಾಂತ್ ಹೇಳಿದ್ದಾರೆ. ಆಗ ಅರವಿಂದ್ ಕೂರಲ್ಲ ಏನ್ ಮಾಡ್ತಿಯಾ ಎಂದು ರಾಂಗ್ ಆಗಿದ್ದಾರೆ. ಆಗ ಸಂಬರಗಿ ಸಹ ನೀನ್ ಏನ್ ಮಾಡ್ತಿಯಾ ಎಂದು ಎದ್ದಿದ್ದಾರೆ. ಅರವಿಂದ್ ಸಹ ತರಕಾರಿ ಕಟ್ ಮಾಡುತ್ತಿದ್ದ ಚಾಕು ಕೆಳಗಿಟ್ಟು ಏನೂ ಎಂದು ಸಿಟ್ಟಿಂದ ಬಂದಿದ್ದಾರೆ. ಆಗ ರಘು ತಡೆದಿದ್ದಾರೆ. ಬಳಿಕ ಸಂಬರಗಿ ಏನು ಮಾಡ್ತಿಯಾ ಎಂದಿದ್ದಾರೆ, ನಾನು ಏನೂ ಮಾಡಲ್ಲ, ನೀನ್ ಹೇಳ್ತಿಯಲ್ಲ ಏನ್ ಮಾಡ್ತಿದಿಯಾ ಹೇಳು ಎಂದು ಜೋರಾಗಿಯೇ ಮಾತನಾಡಿದ್ದಾರೆ. ಕೈ ಕೈ ಮಿಲಾಯಿಸುವ ಹಂತಕ್ಕೂ ತಲುಪಿದ್ದರು. ಆದರೆ ಅಷ್ಟರಲ್ಲಿ ರಘು, ಹಾಗೂ ಶಮಂತ್ ತಡೆದಿದ್ದಾರೆ.

The post ನೀನ್ ಯಾರು ಕೇಳೋಕೆ – ಸಂಬರಗಿ ವಿರುದ್ಧ ಅರವಿಂದ್ ಗರಂ appeared first on Public TV.

Source: publictv.in

Source link