ತಾಯಿಯ ಆಸ್ತಿ ಬರೆಸಿಕೊಂಡು ಪುತ್ರನ ಕೊಲೆಗೆ ಯತ್ನ- ಐವರ ಬಂಧನ

ಹುಬ್ಬಳ್ಳಿ: ತಾಯಿಯ ಹೆಸರಿನಲ್ಲಿದ್ದ ಆಸ್ತಿಯನ್ನು ಬರೆಸಿಕೊಂಡು, ಮಗನ ಕೊಲೆ ಮಾಡಲು ಮುಂದಾಗಿದ್ದ ಆರೋಪಿಗಳನ್ನು ಹುಬ್ಬಳ್ಳಿಯ ಕೇಶ್ವಾಪುರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಗೋಪನಕೊಪ್ಪ ಸ್ವಾಗತ ಕಾಲೋನಿ ನಿವಾಸಿ ವೀರೇಶ್ ಹೆಗಡಾಳ ಅವರನ್ನು ಕೊಲೆ ಮಾಡಲು ಮುಂದಾಗಿದ್ದ ಐವರು ಆರೋಪಿಗಳನ್ನು ಕೇಶ್ವಾಪುರ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ನಾಗಶೆಟ್ಟಿಕೊಪ್ಪ ಕೆರಿವಂಡಿಯ ಅಲ್ತಾಫ ಮಹ್ಮದಲಿ ಬೇಪಾರಿ, ಮುನ್ನಾ ಮಹ್ಮದಲಿ ಬೇಪಾರಿ, ಬಸವೇಶ್ವರ ಪಾರ್ಕಿನ ಶ್ರೀನಿವಾಸ ದಲಭಂಜನ, ಜಾವೇದ ತಾಳಿಕೋಟೆ, ಇಮ್ರಾನ್ ತಾಳಿಕೋಟೆ ಹಾಗೂ ಮಂಜುನಾಥ ಬಾನಪ್ಪನವರ ಎಂದು ಗುರುತಿಸಲಾಗಿದೆ.

ಬಂಧಿತ ಆರೋಪಿಗಳಿಂದ ಹಲ್ಲೆಗೆ ಒಳಗಾಗಿರುವ ವೀರೇಶ್ ಹೆಗಡಾಳ ಪರಿಸ್ಥಿತಿ ಗಂಭೀರವಾಗಿದ್ದು, ಕಿಮ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೇಶ್ವಾಪುರ ಠಾಣೆಯ ಇನ್ಸಪೆಕ್ಟರ್ ಜಗದೀಶ ಹಂಚಿನಾಳ ನೇತೃತ್ವದಲ್ಲಿನ ಪಿಎಸ್‍ಐ ಬಾಬಾ, ಸಿಬ್ಬಂದಿಯಾದ ಎಂ.ಡಿ.ಕಾಲವಾಡ, ಎಚ್.ಎಂ.ಗುಳೇಶ, ಆರ್.ಪಿ.ಕೆಂದೂರ, ಆರ್.ಎಲ್.ರಾಠೋಡ, ಎಚ್.ಆರ್.ರಾಮಾಪುರ, ವಿರುಪಾಕ್ಷಿ ಅಳಗವಾಡಿ ತಂಡ ಆರೋಪಿಗಳನ್ನು ಬಂಧಿಸಿದೆ.

The post ತಾಯಿಯ ಆಸ್ತಿ ಬರೆಸಿಕೊಂಡು ಪುತ್ರನ ಕೊಲೆಗೆ ಯತ್ನ- ಐವರ ಬಂಧನ appeared first on Public TV.

Source: publictv.in

Source link