ಜಸ್ಟ್ 11 ವರ್ಷಕ್ಕೆ ಫಿಸಿಕ್ಸ್​ನಲ್ಲಿ ಡಿಗ್ರಿ ಮುಗಿಸಿದ ಬಾಲಕ; ಈತನ ಗುರಿಯೇ ಭಯಂಕರ

ಜಸ್ಟ್ 11 ವರ್ಷಕ್ಕೆ ಫಿಸಿಕ್ಸ್​ನಲ್ಲಿ ಡಿಗ್ರಿ ಮುಗಿಸಿದ ಬಾಲಕ; ಈತನ ಗುರಿಯೇ ಭಯಂಕರ

ಬೆಲ್ಜಿಯಮ್​​​ ಬಾಲಕನೋರ್ವ 20 ವರ್ಷಕ್ಕೆ ಮುಗಿಸಬೇಕಾದ ಡಿಗ್ರಿಯನ್ನು ಕೇವಲ 11 ವರ್ಷಕ್ಕೆ ಪೂರ್ಣಗೊಳಿಸಿ ದಾಖಲೆ ಬರೆದಿದ್ದಾನೆ. ಅತೀ ಸಣ್ಣ ವಯಸ್ಸಿನಲ್ಲೇ ಈ ಬಾಲಕ ಮಾಡಿದ ಸಾಧನೆ ಎಲ್ಲರನ್ನೂ ಹುಬ್ಬೇರುವಂತೆ ಮಾಡಿದೆ.

ಈತನ ಹೆಸರು ಲೌರೆಂಟ್​​ ಸಿಮೋನ್ಸ್​, ಕೇವಲ 11 ವರ್ಷ. ಬೆಲ್ಜಿಯಂನ ಒಸ್ಟೆಂಡ್​​​ನ ನಿವಾಸಿಯಾದ ಸಿಮೋನ್ಸ್​ 11 ವರ್ಷದ ಪ್ರಾಯಕ್ಕೆ ವಿಶ್ವವಿದ್ಯಾಲಯವೊಂದರಲ್ಲಿ ಡಿಗ್ರೀ ಸರ್ಟಿಫಿಕೇಟ್​​ ಪಡೆಯುವ ಮೂಲಕ ಜಗತ್ತಿನ 2ನೇ ಅತೀ ಪುಟ್ಟ ಪದವೀಧರ ಎಂಬ ಕೀರ್ತಿಗೆ ಪಾತ್ರನಾಗಿದ್ದಾನೆ.

ಸಿಮೋನ್ಸ್​ ಆಂಟ್ವರ್ಪ್ ವಿಶ್ವವಿದ್ಯಾಲಯದಲ್ಲಿ ಭೌತಶಾಸ್ತ್ರ ವಿಭಾಗದಲ್ಲಿ ಪದವೀಧರ ಪ್ರಮಾಣ ಪತ್ರ ಪಡೆದಿದ್ದಾನೆ. ಸಾಮಾನ್ಯವಾಗಿ ಎಲ್ಲರೂ ಮೂರು ವರ್ಷದಲ್ಲಿ ಡಿಗ್ರೀ ಮುಗಿಸುತ್ತಾರೆ. ಆದರೆ, ಸಿಮೋನ್ಸ್ ಮಾತ್ರ ಕೇವಲ ಒಂದೇ ವರ್ಷದಲ್ಲಿ ಪದವಿ ಪೂರ್ಣಗೊಳಿಸಿ ಸಾಧನೆ ಮಾಡಿದ್ದಾನೆ.

ಶೇ.85ರಷ್ಟು ಅಂಕಗಳಿಸಿದ ಸಿಮೋನ್ಸ್​

ಇನ್ನು, ಆಶ್ಚರ್ಯಕರ ಸಂಗತಿಯೆಂದರೆ ಈ ಬಾಲಕ ಶೇ.85 ಅಂಕ ಗಳಿಸಿರುವುದು. ಇವರ ತರಗತಿಯಲ್ಲೇ ಎಲ್ಲರಿಗಿಂತಲೂ ಹೆಚ್ಚು ಅಂಕ ಪಡೆಯವ ಸಿಮೋನ್ಸ್. ಸದ್ಯ ಸಿಮೋನ್ಸ್​ ಸಣ್ಣ ವಯಸ್ಸಿನಲ್ಲೇ ಪದವಿಯನ್ನ ಪಡೆದ ಎರಡನೇ ಅತೀ ಚಿಕ್ಕ ಪುಟ್ಟ ಬಾಲಕ.

ಸಣ್ಣ ವಯಸ್ಸಿಗೆ ಡಿಗ್ರೀ ಪಡೆದ ಪ್ರಪಂಚದ 2ನೇ ವಿದ್ಯಾರ್ಥಿ
ಈ ಹಿಂದೆ 1994ರಲ್ಲಿ ಮೈಕಲ್​​​ ಕೀರ್ನಿ ಎಂಬುವರು 10 ವರ್ಷದಲ್ಲೇ ದಕ್ಷಿಣ ಅಲಬಾಮಾ ವಿಶ್ವವಿದ್ಯಾಲಯದಲ್ಲಿ ಮಾನವಶಾಸ್ತ್ರ ವಿಭಾಗದಲ್ಲಿ ಪದವಿ ಸಂಪಾದಿಸಿದ್ದ. ಈ ದಾಖಲೆಯನ್ನು ಸಿಮೋನ್ಸ್​ ಮುರಿಯಬಹುದಿತ್ತು. ಆದರೆ, 2019ರಲ್ಲಿ ನೆದರ್​ಲೆಂಡ್​ನ ಐಂಡ್‌ಹೋವನ್ ವಿಶ್ವವಿದ್ಯಾಲಯವು ಸಿಮೋನ್ಸ್​ಗೆ 10 ವರ್ಷ ವಯಸ್ಸಾಗದ ಹೊರತು ಡಿಗ್ರಿ ಓದಲು ಅವಕಾಶ ಇಲ್ಲ ಎಂದು ಹೇಳಿತ್ತು.

ಕ್ವಾಂಟಮ್​​ ಫಿಸಿಕ್ಸ್​ ಪಿಎಚ್​ಡಿ ನನ್ನ ಗುರಿ

ನಾನು ಸಾಧ್ಯವಾದಷ್ಟು ದೇಹಗಳ ಬಿಡಿ ಭಾಗಗಳನ್ನು ಮೆಕಾನಿಕಲ್​​ ಪಾರ್ಟ್ಸ್​​ ಜಾಗದಲ್ಲಿ ರೀಪ್ಲೇಸ್​​ ಮಾಡಬೇಕು. ಇದು ದೊಡ್ಡ ಪಜಲ್. ಇದರಲ್ಲಿ ಸಂಶೋಧನೆ ಮಾಡಬೇಕು. ಅದಕ್ಕಾಗಿ ನಾನು ಕ್ವಾಂಟಮ್​​​ ಫಿಸಿಕ್ಸ್​ ಮಾಡಬೇಕು. ಪ್ರಪಂಚದ ಅತ್ಯುತ್ತಮ ಪ್ರೊಫೆಸರ್​​ ಜೊತೆಗೆ ಕೆಲಸ ಮಾಡುವುದು ನನ್ನ ಗುರಿ ಎಂದಿದ್ದಾನೆ ಸಿಮೋನ್ಸ್.

The post ಜಸ್ಟ್ 11 ವರ್ಷಕ್ಕೆ ಫಿಸಿಕ್ಸ್​ನಲ್ಲಿ ಡಿಗ್ರಿ ಮುಗಿಸಿದ ಬಾಲಕ; ಈತನ ಗುರಿಯೇ ಭಯಂಕರ appeared first on News First Kannada.

Source: newsfirstlive.com

Source link