ಕೊರೊನಾ ಕರಿನೆರಳು.. ಇಂಡಿಯಾ-ಲಂಕಾ ನಡುವಿನ ಮೊದಲ ODI ಪಂದ್ಯ ಮುಂದೂಡಿಕೆ

ಕೊರೊನಾ ಕರಿನೆರಳು.. ಇಂಡಿಯಾ-ಲಂಕಾ ನಡುವಿನ ಮೊದಲ ODI ಪಂದ್ಯ ಮುಂದೂಡಿಕೆ

ನವದೆಹಲಿ: ಭಾರತ ಮತ್ತು ಶ್ರೀಲಂಕಾ ನಡುವಿನ ಕ್ರಿಕೆಟ್ ಟೂರ್ನಿಗೆ ಕೊರೊನಾ ಕರಿನೆರಳು ಬೀರಿದೆ. ಇದೇ ಜುಲೈ 13 ರಿಂದ ಪ್ರಾರಂಭವಾಗಬೇಕಿದ್ದ ಏಕದಿನ ಸರಣಿ ಮುಂದೂಡಿಕೆಯಾಗಿದೆ.

ಶ್ರೀಲಂಕಾ ತಂಡದ ಬ್ಯಾಟಿಂಗ್ ಕೋಚ್​ ಹಾಗೂ ಸಿಬ್ಬಂದಿಗೆ ಕೊರೊನಾ ಪಾಸಿಟಿವ್ ಬಂದಿದೆ. ಹೀಗಾಗಿ ಶ್ರೀಲಂಕಾ ಮ್ಯಾನೇಜ್​ಮೆಂಟ್​ ಇಡೀ ತಂಡವನ್ನ ಕ್ವಾರೆಂಟೀನ್​ಗೆ ಒಳಪಡಿಸಿದೆ. ಹೀಗಾಗಿ ಜುಲೈ 13 ರಿಂದ ಆರಂಭವಾಗಬೇಕಿದ್ದ ಸರಣಿ ಮುಂದೂಡಿಕೆಯಾಗಿದೆ.

ಇದನ್ನೂ ಓದಿ: ಲಂಕಾ ಸರಣಿ ಟೀಂ ಇಂಡಿಯಾಗೆ ಮಾತ್ರವಲ್ಲ, ಕೋಚ್​ ​ದ್ರಾವಿಡ್ ಪಾಲಿಗೂ ಚಾಲೆಂಜಿಂಗ್​ ಸಿರೀಸ್!

ಮೂಲಗಳ ಪ್ರಕಾರ ಜುಲೈ 17, 19 ಹಾಗೂ 21 ರಂದು ಏಕದಿನ ಪಂದ್ಯ ಮತ್ತು ಜುಲೈ 24, 25 ಹಾಗೂ 27 ರಂದು ಟಿ-20 ಪಂದ್ಯಗಳು ನಡಯಲಿವೆ ಎನ್ನಲಾಗ್ತಿದೆ. ಇಂಗ್ಲೆಂಡ್ ಸರಣಿ ಮುಗಿಸಿಕೊಂಡು ಬಂದಿದ್ದ ಶ್ರೀಲಂಕಾ ತಂಡದ ಕೋಚ್​​ ಗ್ರ್ಯಾಂಟ್​​​​​​ ಫ್ಲಾವರ್​​ಗೆ ಆರ್​​ಟಿಪಿಸಿಆರ್​ ಟೆಸ್ಟ್​ ವೇಳೆ ಕೊರೊನಾ ಸಿಮ್ಟಮ್ಸ್​ ಇರೋದು ದೃಢಪಟ್ಟಿದೆ. ಸದ್ಯ ಕೊರೊನಾ ಸೋಂಕು ಇರೋದ್ರಿಂದ ಕೋಚ್​ ಗ್ರ್ಯಾಂಟ್ ಕ್ವಾರೆಂಟೀನ್​ಗೆ ಒಳಗಾಗಿದ್ದಾರೆ. ಶ್ರೀಲಂಕಾ ವಿರುದ್ಧ ಭಾರತ, 3 ಟಿ-20 ಹಾಗೂ 3 ಏಕದಿನ ಪಂದ್ಯಗಳನ್ನ ಆಡಲಿದೆ.

ಇದನ್ನೂ ಓದಿ: ಶ್ರೀಲಂಕಾ ಬ್ಯಾಟಿಂಗ್ ಕೋಚ್​​ಗೆ ಕೊರೊನಾ; ಭಾರತ-ಲಂಕಾ ಸರಣಿಗೆ ‘ಕೊರೊನಾ ಕಂಟಕ’?

The post ಕೊರೊನಾ ಕರಿನೆರಳು.. ಇಂಡಿಯಾ-ಲಂಕಾ ನಡುವಿನ ಮೊದಲ ODI ಪಂದ್ಯ ಮುಂದೂಡಿಕೆ appeared first on News First Kannada.

Source: newsfirstlive.com

Source link