ಸ್ಫುಟ್ನಿಕ್​​-ವಿ 2 ಡೋಸ್​​​ಗಳ ನಡುವಿನ ಅಂತರ ಹೆಚ್ಚಳ; ಎಷ್ಟು ದಿನಕ್ಕೆ ತಗೋಬೇಕು?

ಸ್ಫುಟ್ನಿಕ್​​-ವಿ 2 ಡೋಸ್​​​ಗಳ ನಡುವಿನ ಅಂತರ ಹೆಚ್ಚಳ; ಎಷ್ಟು ದಿನಕ್ಕೆ ತಗೋಬೇಕು?

ನವದೆಹಲಿ: ಸ್ಪುಟ್ನಿಕ್ ವಿ ಲಸಿಕೆಯ 2 ಡೋಸ್​ಗಳ ನಡುವಿನ ಅಂತರವನ್ನು 180 ದಿನಗಳವರೆಗೆ ವಿಸ್ತರಿಸಬಹುದು ಅಂತಾ ಆರ್​ಡಿಐಎಫ್​ (Russian Direct Investment Fund) ಹೇಳಿದೆ.

ರಷ್ಯಾದಲ್ಲಿ ಅಭಿವೃದ್ಧಿಪಡಿಸಲಾಗಿರುವ ಸ್ಪುಟ್ನಿಕ್​​ ವಿ ಲಸಿಕೆಯನ್ನು RDIF ಜಾಗತಿಕವಾಗಿ ಮಾರಾಟ ಮಾಡುತ್ತಿದೆ. ಕಜಕಿಸ್ತಾನ ಹಾಗೂ ಅರ್ಜೆಂಟೀನಾ ರಾಷ್ಟ್ರಗಳು ಸ್ಪುಟ್ನಿಕ್​ -ವಿ ಲಸಿಕೆಯ ಎರಡು ಡೋಸ್​​ಗಳ ನಡುವಿನ ಅಂತರವನ್ನ 180 ದಿನಗಳವರೆಗೆ ವಿಸ್ತರಣೆ ಮಾಡಲು ನಿರ್ಧರಿಸಿದ ಬೆನ್ನಲ್ಲೇ RDIF ಈ ಮಾಹಿತಿ ನೀಡಿದೆ.

blank

ಎರಡು ಡೋಸ್​​​​​ಗಳ ನಡುವಿನ ಹೆಚ್ಚಿನ ಅಂತರವು ಉತ್ತಮ ರೋಗನಿರೋಧಕ ಪ್ರತಿಕ್ರಿಯೆಯನ್ನು ನೀಡುತ್ತದೆ ಅಂತಾ ಹೇಳಿದೆ. ಈ ಮೊದಲು ಸ್ಪುಟ್ನಿಕ್​ ವಿ ಲಸಿಕೆಯನ್ನು 21 ದಿನಗಳ ಅಂತರದಲ್ಲಿ ನೀಡಲಾಗುತ್ತಿತ್ತು.

ಇದನ್ನೂ ಓದಿ: ವ್ಯಾಕ್ಸಿನೇಷನ್​ನಲ್ಲಿ ಮಹತ್ವದ ಮೈಲಿಗಲ್ಲು; ರಾಜ್ಯದಲ್ಲಿ ಈವರೆಗೆ 2.5 ಕೋಟಿ ಡೋಸ್ ಲಸಿಕೆ ಹಂಚಿಕೆ

 

The post ಸ್ಫುಟ್ನಿಕ್​​-ವಿ 2 ಡೋಸ್​​​ಗಳ ನಡುವಿನ ಅಂತರ ಹೆಚ್ಚಳ; ಎಷ್ಟು ದಿನಕ್ಕೆ ತಗೋಬೇಕು? appeared first on News First Kannada.

Source: newsfirstlive.com

Source link