ರಾಕ್​​ಲೈನ್​ ವೆಂಕಟೇಶ್​ ನಿವಾಸಕ್ಕೆ ಭದ್ರತೆ; ರಸ್ತೆಗೆ ಬ್ಯಾರಿಕೇಡ್​ ಹಾಕಿದ್ಕೆ ಜನ ಆಕ್ರೋಶ

ರಾಕ್​​ಲೈನ್​ ವೆಂಕಟೇಶ್​ ನಿವಾಸಕ್ಕೆ ಭದ್ರತೆ; ರಸ್ತೆಗೆ ಬ್ಯಾರಿಕೇಡ್​ ಹಾಕಿದ್ಕೆ ಜನ ಆಕ್ರೋಶ

ಬೆಂಗಳೂರು: ನಿರ್ಮಾಪಕ ರಾಕ್​ಲೈನ್​​ ವೆಂಕಟೇಶ್​​​ ಮನೆ ಮುಂದೆ ಜೆಡಿಎಸ್​ ಕಾರ್ಯಕರ್ತರು ಪ್ರತಿಭಟನೆ ನಡೆಸುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ನಿರ್ಮಾಪಕರ ಮನೆ ಮುಂದೆ ಪೊಲೀಸ್ ಬಿಗಿ ಭದ್ರತೆ ನಿಯೋಜನೆ ಮಾಡಲಾಗಿದೆ.

ಮಹಾಲಕ್ಷ್ಮಿ ಲೇಔಟ್​​ನಲ್ಲಿರುವ ರಾಕ್​ಲೈನ್ ಮನೆಯ ಎರಡು ರಸ್ತೆಗೆ ಬ್ಯಾರಿಕೇಡ್​ಗಳನ್ನ ಪೊಲೀಸರು ಅಳವಡಿಸಿದ್ದಾರೆ. ಸಂಸದೆ ಸುಮಲತಾ ಆಪ್ತ ವಲಯದಲ್ಲಿ ರಾಕ್​​ಲೈನ್ ಗುರುತಿಸಿಕೊಂಡಿದ್ದಾರೆ. ಅಂಬರೀಶ್ ವಿರುದ್ಧ ಮಾಜಿ ಸಿಎಂ ಹೆಚ್​ಡಿಕೆ ಹೇಳಿದ್ದನ್ನ ತೀವ್ರವಾಗಿ ವಿರೋಧಿಸಿದ್ದ ರಾಕ್​ಲೈನ್ ವೆಂಕಟೇಶ್, ನಿನ್ನೆ ವಾಗ್ದಾಳಿ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಜೆಡಿಎಸ್​ ಕಾರ್ಯಕರ್ತರು ಪ್ರತಿಭಟಿಸುವ ಸಾಧ್ಯತೆಯಿಂದ ಅವರ ಮನೆಗೆ ಭದ್ರತೆಯನ್ನ ನೀಡಲಾಗಿದೆ.

ಇದನ್ನೂ ಓದಿ: ‘ದಾರಿಯಲ್ಲಿ ಹೋಗೋ ದಾಸಪ್ಪ CM ಆಗಿದ್ದರೂ ಅಂಬರೀಶ್ ಸತ್ತಾಗ ಹಾಗೇ ನೋಡಿಕೊಳ್ತಿದ್ದರು’

blank

ಇನ್ನು ರಸ್ತೆಯಲ್ಲಿ ಬ್ಯಾರಿಕೇಡ್​ ಹಾಕಿರೋದ್ರಿಂದ ಸಾರ್ವಜನಿಕರಿಗೆ ತೊಂದರೆಯಾಗಿದೆ. ರಸ್ತೆಯನ್ನ ಸಂಪೂರ್ಣವಾಗಿ ಕ್ಲೋಸ್ ಮಾಡಿರೋದು ಜನರ ವಿರೋಧಕ್ಕೆ ಕಾರಣವಾಗಿದೆ. ಗಾಡಿ ಒಳಗೆ ಹೊಗಲು ಬಿಡುತ್ತಿಲ್ಲ. ನಮಗೆ ಓಡಾಟ ನಡೆಸಲಿಕ್ಕೆ ಸಾಕಷ್ಟು ತೊಂದರೆಯಾಗುತ್ತಿದೆ ಎಂದು ಪೊಲೀಸರೊಂದಿಗೆ ಸಾರ್ವಜನಿಕರು ವಾಗ್ವಾದಕ್ಕೆ ಇಳಿದಿದ್ದಾರೆ.

blank

ಇದನ್ನೂ ಓದಿ: ಅಂಬರೀಶ್ ಇದ್ದಾಗ ಕೈ-ಕಾಲು ಕಟ್ಟಿಕೊಂಡು ಮಾತಾಡುತ್ತಿದ್ದರು.. ಇಂದು..? ರಾಕ್​ಲೈನ್ ಕೆಂಡ

The post ರಾಕ್​​ಲೈನ್​ ವೆಂಕಟೇಶ್​ ನಿವಾಸಕ್ಕೆ ಭದ್ರತೆ; ರಸ್ತೆಗೆ ಬ್ಯಾರಿಕೇಡ್​ ಹಾಕಿದ್ಕೆ ಜನ ಆಕ್ರೋಶ appeared first on News First Kannada.

Source: newsfirstlive.com

Source link