ನನ್ನ ಫ್ರೆಂಡ್ಸ್, ನನ್ನ ವಸ್ತುಗಳ ವಿಚಾರದಲ್ಲಿ ನಾನು ತುಂಬಾ ಪೊಸೆಸಿವ್: ಅರವಿಂದ್

ಬಿಗ್‍ಬಾಸ್ ಆರಂಭವಾಗಿ 89 ದಿನ ಕಳೆದಿದೆ. ಸದ್ಯ ದೊಡ್ಮನೆಯಲ್ಲಿರುವ ಸ್ಪರ್ಧಿಗಳು ಇಷ್ಟು ದಿನ ಒಟ್ಟಿಗೆ ಜೊತೆಯಾಗಿರುವುದರಿಂದ ಒಬ್ಬರನ್ನೊಬ್ಬರು ಆತ್ಮೀಯರಾಗಿ, ಸ್ನೇಹಿತರಾಗಿ ಎಷ್ಟು ಅರ್ಥ ಮಾಡಿಕೊಂಡಿದ್ದಾರೆ ಮತ್ತು ಮನೆಯ ಸದಸ್ಯರ ನಡುವಿನ ಹೊಂದಾಣಿಕೆಯನ್ನು ತಿಳಿದುಕೊಳ್ಳಲು ಬಿಗ್‍ಬಾಸ್ ಟಾಸ್ಕ್ ಒಂದನ್ನು ನೀಡಿದ್ದಾರೆ. ಈ ಹಿಂದೆ ಬಿಗ್‍ಬಾಸ್ ನೀಡಿದ್ದ ಜೋಡಿ ಟಾಸ್ಕ್ ವೇಳೆ ಜೋಡಿಯಾಗಿದ್ದ ಸ್ಪರ್ಧಿಗಳೇ ಈ ಬಾರಿ ಟಾಸ್ಕ್‌ನಲ್ಲಿ ಕೂಡ ಭಾಗವಹಿಸಬೇಕೆಂದು ಸೂಚಿಸಿದ್ದರು. ಇನ್ನೂ ಚಕ್ರವರ್ತಿ ಚಂದ್ರಚೂಡ್ ಈ ಟಾಸ್ಕ್‍ನನ್ನು ನಿರೂಪಣೆ ಮಾಡುವಂತೆ ಆದೇಶಿಸಿ, ಅವರು ಕೇಳುವ ಪ್ರಶ್ನೆಗಳಿಗೆ ಮನೆಯ ಸದಸ್ಯರು ಒಟ್ಟಿಗೆ ಉತ್ತರಿಸುವಂತೆ ತಿಳಿಸಿದ್ದರು.

ಬಿಗ್‍ಬಾಸ್ ಮನೆಯ ಕ್ಯೂಟ್ ಪೇರ್ ಎಂದೇ ಫೇಮಸ್ ಆಗಿರುವ ಅರವಿಂದ್ ಹಾಗೂ ದಿವ್ಯಾ ಉರುಡುಗ ಇಬ್ಬರಲ್ಲಿ ಹೆಚ್ಚು ಕಾಂಪ್ರಮೈಸ್ ಆಗುವವರು ಯಾರು ಎಂಬ ಪ್ರಶ್ನೆಗೆ ಅರವಿಂದ್ ಎಂದು ಸೂಚಿಸಿ ನಾನು ಏನಾದರೂ ಹಠ ಮಾಡಿಕೊಂಡು ಕೋಪಿಸಿಕೊಂಡರೆ ಅವರೇ ಕಾಂಪ್ರಮೈಸ್ ಆಗುತ್ತಾರೆ ಎಂದು ದಿವ್ಯಾ ಉರುಡುಗ ಹೇಳಿದ್ದಾರೆ. ಇಬ್ಬರಲ್ಲಿ ಕಳ್ಳತನ ಅಥವಾ ಸುಳ್ಳು ಹೇಳಿದರೆ ಬೇಗ ಸಿಕ್ಕಿ ಬೇಳುವುದು ಯಾರು ಎಂಬ ಪ್ರಶ್ನೆಗೆ ಇಬ್ಬರು ತಮ್ಮ ಹೆಸರುಗಳನ್ನು ಸೂಚಿಸಿಕೊಂಡಿದ್ದಾರೆ. ಇಬ್ಬರಲ್ಲಿ ಯಾರು ಜಾಸ್ತಿ ಪೊಸೆಸಿವ್ ಎಂಬ ಪ್ರಶ್ನೆಗೆ, ಅರವಿಂದ್ ಹೆಚ್ಚು ಪೊಸೆಸಿವ್ ಎಂದು ಇಬ್ಬರು ತಿಳಿಸಿದ್ದಾರೆ. ಇದಕ್ಕೆ ಅರವಿಂದ್ ನನ್ನ ಫ್ರೆಂಡ್ಸ್, ನನ್ನ ವಸ್ತು, ಕಾರುಗಳ ಬಗ್ಗೆ ನಾನು ಜಾಸ್ತಿ ಪೊಸೆಸಿವ್ ಎಂದು ಹೇಳಿದ್ದಾರೆ. ಇನ್ನೂ ಇಬ್ಬರಲ್ಲಿ ಹೆಚ್ಚು ಖರ್ಚು ಮಾಡುವವರು ಯಾರು ಎಂಬ ಪ್ರಶ್ನೆಗೆ ಇಬ್ಬರು ಅರವಿಂದ್ ಹೆಸರನ್ನು ಸೂಚಿಸಿದ್ದಾರೆ. ನಂತರ ಇಬ್ಬರಲ್ಲಿ ಹೆಚ್ಚು ಆಟ್ರಾಕ್ಟಿವ್ ಯಾರು ಎಂಬ ಪ್ರಶ್ನೆಗೆ, ಇಬ್ಬರು ಅರವಿಂದ್ ಎಂದು ಒಂದೇ ಉತ್ತರ ನೀಡಿದ್ದು, ದಿವ್ಯಾ ಉರುಡುಗ ಅವರು ನೋಡಲು ಚೆನ್ನಾಗಿದ್ದಾರೆ, ಆಕರ್ಷಕವಾಗಿ ಕಾಣಲು ಕಾರಣಬೇಡ ನೋಡಿದ ತಕ್ಷಣವೇ ಬಹಳ ಆಟ್ರಾಕ್ಟಿವ್ ಆಗಿ ಕಾಣಿಸುತ್ತಾರೆ ಎಂದು ಉತ್ತರಿಸಿದ್ದಾರೆ.

ಬಳಿಕ ರಾಗಿ ಮುದ್ದೆ ಹಾಗೂ ಪಿಜ್ಜಾ ಹಟ್ ಕಾಂಬಿನೇಷನ್‍ನಂತೆ ಇರುವ ದಿವ್ಯಾ ಸುರೇಶ್ ಹಾಗೂ ಮಂಜು ಪಾವಗಡ, ಇಬ್ಬರಲ್ಲಿ ಯಾರಿಗೆ ಒಳ್ಳೆಯ ಸ್ಮೈಲ್ ಇದೆ, ನಿಮ್ಮಿಬ್ಬರಲ್ಲಿ ಮೊದಲು ಜಗಳ ಆರಂಭಿಸುವವರು ಯಾರು, ವೇಕಪ್ ಸಾಂಗ್ ವೇಳೆ ಬೆಳ್ಳಗ್ಗೆ ಎದ್ದೇಳುವುದಕ್ಕೆ ಕಷ್ಟ ಪಡುವವರು ಯಾರು, ಇನ್ನೂ ಇಬ್ಬರಲ್ಲಿ ಹೆಚ್ಚು ವಾಟ್ಸಾಪ್ ಫಾರರ್ವಡ್ ಮೆಸೇಜ್ ಹೆಚ್ಚು ಕಳುಹಿಸುವವರು ಯಾರು ಎಂಬ ಪ್ರಶ್ನೆಗೆ ಇಬ್ಬರು ಸರಿಯಾದ ಉತ್ತರ ನೀಡಿದ್ದು, ಉಳಿದ 1 ಪ್ರಶ್ನೆಗೆ ತಪ್ಪು ಉತ್ತರ ನೀಡಿದ್ದಾರೆ.

blank

ನಂತರ ಬಂದ ಶಮಂತ್ ಹಾಗೂ ಪ್ರಿಯಾಂಕಗೆ ನಿಮ್ಮಿಬ್ಬರಲ್ಲಿ ಹೆಚ್ಚು ಬುದ್ಧಿವಂತರು ಯಾರು ಎಂಬ ಪ್ರಶ್ನೆಗೆ ಇಬ್ಬರು ಅವರವರ ಹೆಸರನ್ನು ಸೂಚಿಸುತ್ತಾರೆ. ಬಳಿಕ ಶಮಂತ್ ಸ್ವಲ್ಪ ಬುದ್ಧಿವಂತನೇ ಹಾಗೇ ದಡ್ಡ ತರನೂ ಕಾಣಿಸುತ್ತಾನೆ ಎಂದು ಪ್ರಿಯಾಂಕ ಹೇಳಿದ್ದಾರೆ. ನಿಮ್ಮಿಬ್ಬರಲ್ಲಿ ಮೊದಲು ಮದುವೆಯಾಗುವವರು ಯಾರು ಎಂಬುದಕ್ಕೆ ಒಟ್ಟಿಗೆ ಪ್ರಿಯಾಂಕರವರು ಎಂದು ತಿಳಿಸಿದ್ದಾರೆ. ಅಲ್ಲದೇ ಶಮಂತ್ ಪ್ರಿಯಾಂಕರವರು ಬೇಗ ಮದುವೆಯಾದರೆ ಚೆನ್ನಾಗಿರುತ್ತದೆ ಎಂದು ಅಡ್ವೈಸ್ ಕೂಡ ಮಾಡಿದ್ದಾರೆ. ಇಬ್ಬರಲ್ಲಿ ರಾಗ ಎಳೆದು ಮಾತನಾಡುವ ಪ್ರಶ್ನೆಗೆ ಪ್ರಿಯಾಂಕ ಎಂದು ಇಬ್ಬರು ಒಟ್ಟಿಗೆ ಹೇಳಿದ್ದಾರೆ. ಉಳಿದ ಪ್ರಶ್ನೆಗಳಿಗೆ ತಪ್ಪಾಗಿ ಉತ್ತರ ನೀಡಿದ್ದಾರೆ.

blank

ವೈಷ್ಣವಿ ಹಾಗೂ ರಘುಗೆ ಕೇಳಿದ 5 ಪ್ರಶ್ನೆಗಳಲ್ಲಿ ನಾಲ್ಕು ಪ್ರಶ್ನೆಗಳಿಗೆ ಸರಿಯಾದ ಉತ್ತರ ನೀಡಿದ್ದಾರೆ. ಪ್ರಶಾಂತ್ ಹಾಗೂ ಶುಭಾ ಜೋಡಿ ಕೇಳಿದ 5 ಪ್ರಶ್ನೆಗಳಲ್ಲಿ ಇಬ್ಬರಲ್ಲಿ ಜಗಳ ಆಡುತ್ತಾ ಯಾವುದಕ್ಕೆ ಜಗಳ ಆಡುತ್ತಿದ್ದೇವೆ ಎಂದು ಮರೆತು ಹೋಗುವ ಮತ್ತು ಮತ್ತು ಮನೆಯಲ್ಲಿ ಹೆಚ್ಚಾಗಿ ಟೀ ಕುಡಿಯುವುದು ಯಾರು ಎಂಬ ಪ್ರಶ್ನೆಗೆ ಸರಿಯಾಗಿ ಉತ್ತರಿಸಿದ್ದು, ಉಳಿದ ಪ್ರಶ್ನೆಗಳಿಗೆ ತಪ್ಪಾಗಿ ಉತ್ತರಿಸಿದ್ದಾರೆ. ಇದನ್ನೂ ಓದಿ: ನೀನ್ ಯಾರು ಕೇಳೋಕೆ – ಸಂಬರಗಿ ವಿರುದ್ಧ ಅರವಿಂದ್ ಗರಂ

The post ನನ್ನ ಫ್ರೆಂಡ್ಸ್, ನನ್ನ ವಸ್ತುಗಳ ವಿಚಾರದಲ್ಲಿ ನಾನು ತುಂಬಾ ಪೊಸೆಸಿವ್: ಅರವಿಂದ್ appeared first on Public TV.

Source: publictv.in

Source link