ಬೆಂಬಲಿಗನ ತಲೆಗೆ ಹೊಡೆದ ಡಿ.ಕೆ.ಶಿವಕುಮಾರ್​; ತಬ್ಬಿಬ್ಬಾದ ಕಾರ್ಯಕರ್ತರು..!

ಬೆಂಬಲಿಗನ ತಲೆಗೆ ಹೊಡೆದ ಡಿ.ಕೆ.ಶಿವಕುಮಾರ್​; ತಬ್ಬಿಬ್ಬಾದ ಕಾರ್ಯಕರ್ತರು..!

ಮಂಡ್ಯ: ಕಾಂಗ್ರೆಸ್​ ಕಾರ್ಯಕರ್ತನ ತಲೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಬಾರಿಸಿದ ಪ್ರಸಂಗ ನಡೆದಿದೆ. ಹೌದು ಮಾಜಿ ಸಂಸದ ಜಿ.ಮಾದೇಗೌಡರ ಆರೋಗ್ಯ ವಿಚಾರಿಸಲು ಮಂಡ್ಯದ ಮದ್ದೂರು ತಾಲೂಕಿನ ಕೆ.ಎಂ.ದೊಡ್ಡಿಗೆ ಡಿಕೆ ಶಿವಕುಮಾರ್ ನಿನ್ನೆ ತೆರಳಿದ್ರು.

ಆಗ ಡಿಕೆ ಶಿವಕುಮಾರ್ ಹಿಂದೆ ಕಾಂಗ್ರೆಸ್ ಕಾರ್ಯಕರ್ತರು ಕೂಡ ಹಿಂಬಾಲಿಸಿದ್ರು, ಈ ವೇಳೆ ಓರ್ವ ಬೆಂಬಲಿಗ ಹೆಗಲ ಮೇಲೆ ಕೈ ಹಾಕಲು ಯತ್ನಿಸಿದ್ದಾನೆ ಅಂತ ಡಿ.ಕೆ.ಶಿವಕುಮಾರ್ ಆ ಬೆಂಬಲಿಗನ ತಲೆಗೆ ಬಾರಿಸಿದ್ದಾರೆ. ಇದರಿಂದ ಸ್ಥಳದಲ್ಲಿದ್ದ ಕಾಂಗ್ರೆಸ್ ಕಾರ್ಯಕರ್ತರು ಒಂದು ಕ್ಷಣ ತಬ್ಬಿಬ್ಬಾಗಿದ್ದಾರೆ.

The post ಬೆಂಬಲಿಗನ ತಲೆಗೆ ಹೊಡೆದ ಡಿ.ಕೆ.ಶಿವಕುಮಾರ್​; ತಬ್ಬಿಬ್ಬಾದ ಕಾರ್ಯಕರ್ತರು..! appeared first on News First Kannada.

Source: newsfirstlive.com

Source link