ರಾಕ್​ಲೈನ್ ನಿವಾಸದ ಮುಂದೆ ಹೈಡ್ರಾಮಾ.. ಜೆಡಿಎಸ್ ಕಾರ್ಯಕರ್ತರು ವಶಕ್ಕೆ

ರಾಕ್​ಲೈನ್ ನಿವಾಸದ ಮುಂದೆ ಹೈಡ್ರಾಮಾ.. ಜೆಡಿಎಸ್ ಕಾರ್ಯಕರ್ತರು ವಶಕ್ಕೆ

ಬೆಂಗಳೂರು: ನಿರ್ಮಾಪಕ ರಾಕ್​ಲೈನ್ ವೆಂಕಟೇಶ್ ನಿವಾಸದ ಮುಂದೆ ಜೆಡಿಎಸ್​ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಹೆಚ್​​ಡಿ ಕುಮಾರಸ್ವಾಮಿ ವಿರುದ್ಧ ರಾಕ್​ಲೈನ್ ವೆಂಕಟೇಶ್ ನಿನ್ನೆ ನೀಡಿರುವ ಹೇಳಿಕೆಯನ್ನ ಖಂಡಿಸಿ ಪ್ರತಿಭಟನೆ ನಡೆಸಿದರು. ವೆಂಕಟೇಶ್ ಮನೆಗೆ ನುಗ್ಗಲು ಯತ್ನಿಸಿದ  ಪ್ರತಿಭಟನಾಕಾರರನ್ನ ಪೊಲೀಸರು ವಶಕ್ಕೆ ಪಡೆದುಕೊಂಡರು.

ಇದನ್ನೂ ಓದಿ: ಅಂಬರೀಶ್ ಇದ್ದಾಗ ಕೈ-ಕಾಲು ಕಟ್ಟಿಕೊಂಡು ಮಾತಾಡುತ್ತಿದ್ದರು.. ಇಂದು..? ರಾಕ್​ಲೈನ್ ಕೆಂಡ

blank

ಪ್ರತಿಭಟನೆ ವೇಳೆ ಮಾತನಾಡಿದ ಯುವ ಜನತಾದಳದ ರಾಜ್ಯ ಕಾರ್ಯದರ್ಶಿ ನರಸಿಂಹಮೂರ್ತಿ.. ಮಂಡ್ಯ ರಾಜಕಾರಣಕ್ಕೂ ಇವರಿಗೂ ಏನು ಸಂಬಂಧ? ಕುಮಾರಸ್ವಾಮಿ ಮನೆ‌ ಒಡೆಯಲು ರಾಕ್ ಲೈನ್ ಪ್ರಯತ್ನಿಸುತ್ತಿದ್ದಾರೆ. ಇವರಿಗೆ ರಾಜಕೀಯದ ಬಗ್ಗೆ ಗೊತ್ತಿಲ್ಲ, ಚಿತ್ರರಂಗ ಹಾಳು ಮಾಡಿ ಇವಾಗ ರಾಜಕೀಯ ಹಾಳು ಮಾಡುತ್ತಿದ್ದಾರೆ. ಸಾಮಾನ್ಯ ಜನರ ತಲೆ ಒಡೆದು ದುಡ್ಡು ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: ‘ದಾರಿಯಲ್ಲಿ ಹೋಗೋ ದಾಸಪ್ಪ CM ಆಗಿದ್ದರೂ ಅಂಬರೀಶ್ ಸತ್ತಾಗ ಹಾಗೇ ನೋಡಿಕೊಳ್ತಿದ್ದರು’

blank

ಸುಮಲತಾರನ್ನ ಮುಂದಿಟ್ಟುಕೊಂಡು ದೇವೇಗೌಡರ ಮನೆ ಹಾಳು ಮಾಡಲು ಪ್ರಯತ್ನಿಸುತ್ತಿದ್ದಾರೆ. ಇವರೇನು ಸಂಸದರಾ?, ಶಾಸಕರಾ? ಕುಮಾರಸ್ವಾಮಿ ಕ್ಷಮೆ ಕೇಳುವವರೆಗೂ ಪ್ರತಿಭಟನೆಯನ್ನ ಮುಂದಿವರೆಸುತ್ತೆವೆ ಎಂದು ಕಿಡಿಕಾರಿದರು.

ಇದನ್ನೂ ಓದಿ: ರಾಕ್​​ಲೈನ್​ ವೆಂಕಟೇಶ್​ ನಿವಾಸಕ್ಕೆ ಭದ್ರತೆ; ರಸ್ತೆಗೆ ಬ್ಯಾರಿಕೇಡ್​ ಹಾಕಿದ್ಕೆ ಜನ ಆಕ್ರೋಶ

The post ರಾಕ್​ಲೈನ್ ನಿವಾಸದ ಮುಂದೆ ಹೈಡ್ರಾಮಾ.. ಜೆಡಿಎಸ್ ಕಾರ್ಯಕರ್ತರು ವಶಕ್ಕೆ appeared first on News First Kannada.

Source: newsfirstlive.com

Source link