ಪರಪ್ಪನ ಅಗ್ರಹಾರ ಜೈಲಿನ ಮೇಲೆ ದಾಳಿ.. ಮಾರಕಾಸ್ತ್ರಗಳ ಕಂಡು ದಂಗಾದ ಸಿಸಿಬಿ

ಪರಪ್ಪನ ಅಗ್ರಹಾರ ಜೈಲಿನ ಮೇಲೆ ದಾಳಿ.. ಮಾರಕಾಸ್ತ್ರಗಳ ಕಂಡು ದಂಗಾದ ಸಿಸಿಬಿ

ಬೆಂಗಳೂರು: ಸಿಸಿಬಿ ಪೊಲೀಸ್ ಜಂಟಿ ಆಯುಕ್ತ ಸಂದೀಪ್ ಪಾಟೀಲ್ ನೇತೃತ್ವದಲ್ಲಿ ಪರಪ್ಪನ ಅಗ್ರಹಾರ ಜೈಲಿನ ಮೇಲೆ ಸಿಸಿಬಿ ಪೊಲೀಸ್ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

blank

ಬೆಳಗ್ಗೆ 5 ಗಂಟೆಗೆ ಡಾಗ್ ಸ್ಕ್ವಾಡ್​ ಸಮೇತ ಸಿಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ವೇಳೆ ಜೈಲಿನ ಪ್ರತಿ ಬ್ಯಾರಕ್​ನಲ್ಲೂ ತಪಾಸಣೆ ನಡೆಸಿದ್ದಾರೆ. ಅನ್ಲಾಕ್ ಆಗ್ತಿದ್ದಂತೆ ಅಪರಾಧ ಪ್ರಕರಣ ಹೆಚ್ಚಾದ ಹಿನ್ನೆಲೆಯಲ್ಲಿ ಈ ದಾಳಿ ನಡೆದಿದೆ.

blank

ಹಳೇ ದ್ವೇಷ ಹಿನ್ನೆಲೆಯಲ್ಲಿ ಜೈಲಿನಿಂದಲೇ ಕೆಲ ರೌಡಿಗಳು ಸ್ಕೇಚ್​ ಹಾಕಿರೋದು ತಿಳಿದುಬಂದಿತ್ತು. ಹೀಗಾಗಿ ಕಮಿಷನರ್ ಕಮಲ್ ಪಂತ್ ನಿಗಾ ಇಡುವಂತೆ ಸೂಚನೆ ನೀಡಿದ್ದರು. ಅವರ ಸೂಚನೆ ಬೆನ್ನಲ್ಲೇ ಸಿಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ದಾಳಿ ವೇಳೆ ಕೆಲವು ಬ್ಯಾರಕ್​​ಗಳಲ್ಲಿ ಮಾರಾಕಾಸ್ತ್ರಗಳು ಪತ್ತೆಯಾಗಿದ್ದು, ಅವುಗಳನ್ನ ಸೀಜ್ ಮಾಡಲಾಗಿದೆ. ಮಾತ್ರವಲ್ಲ ಮೊಬೈಲ್, ಸಿಗರೇಟ್​, ಗಾಂಜಾ ಕೂಡ ಬಳಕೆಯಾಗುತ್ತಿರೋದು ಬಯಲಾಗಿದೆ.

blank

ಇದನ್ನೂ ಓದಿ: ಬೆಂಗಳೂರು ರೌಡಿಗಳಿಗೆ ಬೆಳ್ಳಂಬೆಳಗ್ಗೆ ಶಾಕ್​; 1000ಕ್ಕೂ ಹೆಚ್ಚು ಮನೆಗಳ ಮೇಲೆ ದಾಳಿ

The post ಪರಪ್ಪನ ಅಗ್ರಹಾರ ಜೈಲಿನ ಮೇಲೆ ದಾಳಿ.. ಮಾರಕಾಸ್ತ್ರಗಳ ಕಂಡು ದಂಗಾದ ಸಿಸಿಬಿ appeared first on News First Kannada.

Source: newsfirstlive.com

Source link