ಧೋನಿ IPL ಭವಿಷ್ಯ: ಅಭಿಮಾನಿಗಳಿಗೆ ಶೀಘ್ರದಲ್ಲೇ ಕಾದಿದ್ಯಾ ಶಾಕಿಂಗ್ ನ್ಯೂಸ್​?

ಧೋನಿ IPL ಭವಿಷ್ಯ: ಅಭಿಮಾನಿಗಳಿಗೆ ಶೀಘ್ರದಲ್ಲೇ ಕಾದಿದ್ಯಾ ಶಾಕಿಂಗ್ ನ್ಯೂಸ್​?

ಐಪಿಎಲ್​ ಮೆಗಾ ಆಕ್ಷನ್​ಗೆ ಬಿಸಿಸಿಐ ಸಿದ್ಧತೆ ಆರಂಭಿಸಿದ ಬೆನ್ನಲ್ಲೇ, ಆಟಗಾರರ ರಿಟೈನ್​​​​ ಕುರಿತಾದ ಚರ್ಚೆಗಳು ಗರಿಗೆದರಿವೆ. ಅದರಲ್ಲೂ ಮುಖ್ಯವಾಗಿ ಧೋನಿಗೆ ಚೆನ್ನೈ ಸೂಪರ್​ ಕಿಂಗ್ಸ್​ ತಂಡ, ಮತ್ತೆ ಮಣೆ ಹಾಕುತ್ತಾ ಅನ್ನೋ ವಿಚಾರ, ಹೆಚ್ಚು ಚರ್ಚೆಯಲ್ಲಿದೆ. ಈ ಬಗ್ಗೆ ಸ್ವತಃ ಸಿಎಸ್​ಕೆ ಸಿಇಒ ಕಾಸಿ ವಿಶ್ವನಾಥನ್​ ಮಾತನಾಡಿದ್ದಾರೆ.

13ನೇ ಆವೃತ್ತಿಯ ಐಪಿಎಲ್​ಗೂ ಮುನ್ನ, ಟೀಮ್​ ಇಂಡಿಯಾ ಮಾಜಿ ನಾಯಕ ಎಮ್.ಎಸ್​ ಧೋನಿ, ಅಂತಾರಾಷ್ಟ್ರೀಯ ಕ್ರಿಕೆಟ್​​ಗೆ ಧಿಡೀರ್​​​ ನಿವೃತ್ತಿ ಘೋಷಿಸಿದ್ರು. ಅದಾದ ಬಳಿಕ ಐಪಿಎಲ್​ಗೂ ಮಾಹಿ, ಗುಡ್​​ ಬೈ ಹೇಳ್ತಾರೆ ಅನ್ನೋ ಚರ್ಚೆ ಆರಂಭವಾಗಿತ್ತು. ಧೋನಿಯ ನಡೆಗಳೂ ಈ ವಾದಕ್ಕೆ ಪುಷ್ಠಿ ನೀಡಿದ್ವು. ಆದ್ರೆ ಕೊನೆಯಲ್ಲಿ ಈ ಬಗ್ಗೆ ಮಾತನಾಡಿದ್ದ ಧೋನಿ ‘definitely not’ ಎಂಬ ಎರಡು ಶಬ್ದಗಳಲ್ಲೇ, ಚರ್ಚೆಗೆ ಇತಿಶ್ರೀ ಹಾಡಿದ್ರು.

ಇದನ್ನೂ ಓದಿ: ಪತ್ನಿಯ ಟೇಸ್ಟ್​​ಗೆ ತಕ್ಕಂತೆ ಮದುವೆ ವಾರ್ಷಿಕೋತ್ಸವ ದಿನದಂದು ಧೋನಿ ಸ್ಪೆಷಲ್ ಗಿಫ್ಟ್

ಇದೀಗ 14ನೇ ಆವೃತ್ತಿಯ ಉಳಿದ ಪಂದ್ಯಗಳ ಆಯೋಜನೆಯೊಂದಿಗೆ, 15ನೇ ಆವೃತ್ತಿಯ ಐಪಿಎಲ್ ಟೂರ್ನಿಗೂ ಬಿಸಿಸಿಐ, ಭರ್ಜರಿ ಸಿದ್ಧತೆ ನಡೆಸಿದೆ. ಡಿಸೆಂಬರ್​​ನಲ್ಲಿ ಮೆಗಾ ಆಕ್ಷನ್​ ನಡೆಸೋಕು, ಬ್ಲೂ ಪ್ರಿಂಟ್​​ ರೆಡಿಯಾಗಿದೆ. ಹೀಗಾಗಿ ಯಾವೆಲ್ಲಾ ಆಟಗಾರನನ್ನ ಫ್ರಾಂಚೈಸಿಗಳು ರಿಟೈನ್​ ಮಾಡಿಕೊಳ್ಳಲಿವೆ ಅನ್ನೋದು, ಹೆಚ್ಚು ಚರ್ಚೆಯಾಗ್ತಿದೆ. ಅದರಲ್ಲೂ ಧೋನಿಗೆ, ಸಿಎಸ್​ಕೆ ಫ್ರಾಂಚೈಸಿ ಮತ್ತೆ ಮಣೆ ಹಾಕುತ್ತಾ ಅನ್ನೋದು ಹಾಟ್​ ಟಾಪಿಕ್​ ಆಗಿದೆ. ಅದರಲ್ಲೂ ಸಿಎಸ್​​ಕೆ ಫ್ರಾಂಚೈಸಿಯ ಸಿಇಒ ನೀಡಿರುವ ಈ ಹೇಳಿಕೆ, ಚರ್ಚೆಯ ತೀವ್ರತೆಯನ್ನ ಹೆಚ್ಚಿಸಿದೆ.

ಅಡ್ಡಗೋಡೆ ಮೇಲೆ ದೀಪವಿಟ್ಟ ಕಾಸಿ ವಿಶ್ವನಾಥನ್​..!
ಧೋನಿ ಒಂದೆರಡು ವರ್ಷ ಆಡಿದ್ರೂ ಆಡಬಹುದಂತೆ..!

ಇಷ್ಟು ದಿನ ಧೋನಿ ನಿವೃತ್ತಿಯ ಮಾತೇ ಇಲ್ಲ ಎಂದು ಹೇಳ್ತಿದ್ದ ಸಿಎಸ್​​ಕೆ ಸಿಇಒ ಕಾಸಿ ವಿಶ್ವನಾಥನ್​ ವರಸೆ, ಇದೀಗ ಬದಲಾಗಿದೆ. ಧೋನಿ ಐಪಿಎಲ್​ ಭವಿಷ್ಯದ ಬಗ್ಗೆ ಮಾತನಾಡಿರುವ ವಿಶ್ವನಾಥನ್,​ ಮುಂದಿನ ಒಂದು ಅಥವಾ ಎರಡು ವರ್ಷಗಳ ಕಾಲ ಚೆನ್ನೈ ಪರ ಆಡಬಹುದು ಎಂದಿದ್ದಾರೆ.

ಈ ಹೇಳಿಕೆಯನ್ನ ಸಿಎಸ್​​ಕೆ ಫ್ರಾಂಚೈಸಿ ಧೋನಿಯನ್ನ ರಿಟೈನ್​ ಮಾಡಿಕೊಳ್ಳೋ ಸಾಧ್ಯತೆ ಕಡಿಮೆಯಿದೆ ಎಂಬುದರ ಸುಳಿವು, ಎಂದೇ ಹೇಳಲಾಗ್ತಿದೆ. ಯಾಕಂದ್ರೆ 40ನೇ ವರ್ಷದ ಧೋನಿಯನ್ನ ರಿಟೈನ್​ ಮಾಡಿಕೊಂಡರೂ, ಸುದೀರ್ಘ 3 ವರ್ಷಗಳ ಕಾಲ ಆಡೋದು ಅನುಮಾನ. ಹೀಗಾಗಿ ಭವಿಷ್ಯದ ದೃಷ್ಟಿಯಿಂದ ಯಶಸ್ವಿ ನಾಯಕನಿಗೆ, ಸಿಎಸ್​​ಕೆ ಕೊಕ್​ ನೀಡಲಿದೆ ಎನ್ನಲಾಗ್ತಿದೆ.

ಇದನ್ನೂ ಓದಿ: 40ನೇ ವರ್ಷಕ್ಕೆ ಕಾಲಿಟ್ಟ ಧೋನಿ ಮುಂದಿನ ಆಯ್ಕೆ ಏನು? CSK ಕೋಚ್ ಅಥವಾ ಸಲಹೆಗಾರನಾಗ್ತಾರಾ?

ಧೋನಿ ವಯಸ್ಸು ಮಾತ್ರವಲ್ಲ..! ಅರ್ಧಕ್ಕೆ ನಿಂತಿರುವ ಐಪಿಎಲ್​ನಲ್ಲಿ ಧೋನಿ ನೀಡಿರುವ ಪ್ರದರ್ಶನ ಕೂಡ, ಹೇಳಿಕೊಳ್ಳುವ ಮಟ್ಟದಲ್ಲಿಲ್ಲ. ಇದು ಕೂಡ ರಿಟೈನ್​ ಮಾಡಿಕೊಳ್ಳದಿರೋಕೆ ಒಂದು ಕಾರಣವಾಗೋ ಸಾಧ್ಯತೆಯಿದೆ. ಇದು ಅಭಿಮಾನಿಗಳ ವಲಯದಲ್ಲಿ ತಮ್ಮ ನೆಚ್ಚಿನ ತಲಾ ಮುಂದೆ ತಂಡದಲ್ಲಿರ್ತಾರೋ ಇಲ್ವೋ..? ಎಂಬ ಪ್ರಶ್ನೆಯನ್ನ ಹುಟ್ಟಿಸಿದೆ.

ಇದನ್ನೂ ಓದಿ:ಹೊಸ ಲುಕ್​​ನಲ್ಲಿ ಕಾಣಿಸಿಕೊಂಡ ಎಂ.ಎಸ್ ಧೋನಿ.. ಅಭಿಮಾನಿಗಳು ಫಿದಾ

The post ಧೋನಿ IPL ಭವಿಷ್ಯ: ಅಭಿಮಾನಿಗಳಿಗೆ ಶೀಘ್ರದಲ್ಲೇ ಕಾದಿದ್ಯಾ ಶಾಕಿಂಗ್ ನ್ಯೂಸ್​? appeared first on News First Kannada.

Source: newsfirstlive.com

Source link