ಸುಮಲತಾ-ಹೆಚ್​ಡಿಕೆ ಜಟಾಪಟಿ: ಸಂಸದೆ ಸುಮಲತಾ ನಿವಾಸಕ್ಕೆ ಭಾರೀ ಭದ್ರತೆ

ಸುಮಲತಾ-ಹೆಚ್​ಡಿಕೆ ಜಟಾಪಟಿ: ಸಂಸದೆ ಸುಮಲತಾ ನಿವಾಸಕ್ಕೆ ಭಾರೀ ಭದ್ರತೆ

ಬೆಂಗಳೂರು: ಇಂದು ಬೆಳ್ಳಂಬೆಳಗ್ಗೆಯೇ ನಿರ್ಮಾಪಕ ರಾಕ್​ಲೈನ್ ವೆಂಕಟೇಶ್​ ನಿವಾಸದ ಮುಂದೆ ಜೆಡಿಎಸ್​ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಈ ಹಿನ್ನೆಲೆಯಲ್ಲಿ ಜೆಡಿಎಸ್​ ಕಾರ್ಯಕರ್ತರು ಸಂಸದೆ ಸುಮಲತಾ ಅಂಬರೀಶ್ ನಿವಾಸದ ಮುಂದೆಯೂ ಪ್ರತಿಭಟನೆ ನಡೆಸುವ ಭೀತಿ ಎದುರಾಗಿದೆ.

ಇದನ್ನೂ ಓದಿ:ರಾಕ್​​ಲೈನ್​ ವೆಂಕಟೇಶ್​ ನಿವಾಸಕ್ಕೆ ಭದ್ರತೆ; ರಸ್ತೆಗೆ ಬ್ಯಾರಿಕೇಡ್​ ಹಾಕಿದ್ಕೆ ಜನ ಆಕ್ರೋಶ

blank

ಇದೇ ಕಾರಣಕ್ಕೆ ಎಚ್ಚೆತ್ತುಕೊಂಡಿರುವ ಬೆಂಗಳೂರು ಪೊಲೀಸರು, ಜೆಪಿ ನಗರದಲ್ಲಿರುವ ಸುಮಲತಾ ಅಂಬರೀಶ್ ನಿವಾಸಕ್ಕೆ ಭದ್ರತೆಯನ್ನ ನಿಯೋಜನೆ ಮಾಡಿದ್ದಾರೆ. ಸುಮಲತಾ ಮನೆಗೆ ಸುಮಾರು 30ಕ್ಕೂ ಹೆಚ್ಚು ಪೊಲೀಸರನ್ನ ನಿಯೋಜನೆ ಮಾಡಲಾಗಿದೆ.

ಇದನ್ನೂ ಓದಿ: ರಾಕ್​ಲೈನ್ ನಿವಾಸದ ಮುಂದೆ ಹೈಡ್ರಾಮಾ.. ಜೆಡಿಎಸ್ ಕಾರ್ಯಕರ್ತರು ವಶಕ್ಕೆ

The post ಸುಮಲತಾ-ಹೆಚ್​ಡಿಕೆ ಜಟಾಪಟಿ: ಸಂಸದೆ ಸುಮಲತಾ ನಿವಾಸಕ್ಕೆ ಭಾರೀ ಭದ್ರತೆ appeared first on News First Kannada.

Source: newsfirstlive.com

Source link