ಬೆಂಗಳೂರು ಸೌತ್ ಡಾನ್ ಪಟ್ಟಕಾಗಿ ಫೈಟ್.. ಜೈಲಿನಲ್ಲಿದ್ದುಕೊಂಡೇ ಕೊಲೆಗೆ ನಟೋರಿಯಸ್​ ಪ್ಲಾನ್

ಬೆಂಗಳೂರು ಸೌತ್ ಡಾನ್ ಪಟ್ಟಕಾಗಿ ಫೈಟ್.. ಜೈಲಿನಲ್ಲಿದ್ದುಕೊಂಡೇ ಕೊಲೆಗೆ ನಟೋರಿಯಸ್​ ಪ್ಲಾನ್

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಲಾಕ್​ಡೌನ್​ ವೇಳೆ ಸೈಲೆಂಟ್​ ಆಗಿದ್ದ ಕ್ರೈಂ ಲೋಕ ಅನ್​ಲಾಕ್​ ಬೆನ್ನಲ್ಲೇ ಆ್ಯಕ್ಟೀವ್ ಆಗಿದೆ. ಅದ್ರಲ್ಲೂ ಬೆಂಗಳೂರು ಸೌತ್​​ ಡಾನ್ ಪಟ್ಟಕ್ಕಾಗಿ ಜೋರಾಗಿ ಫೈಟ್​ ನಡೆಯುತ್ತಿದೆ ಎಂದು ಹೇಳಲಾಗ್ತಿದೆ. ರೌಡಿಶೀಟರ್​​​​ವೊಬ್ಬ ಜೈಲಿನಲ್ಲಿದ್ದುಕೊಂಡೇ ಸೈಕಲ್ ರವಿ ಶಿಷ್ಯನ ಕೊಲೆಗೆ ಸುಪಾರಿ ನೀಡಿದ್ದಾನೆ ಎನ್ನಲಾಗಿದೆ.

ರೌಡಿಶೀಟರ್ ಕುಳ್ಳು ರಿಜ್ವಾನ್ ಡಾನ್ ಪಟ್ಟಕಾಗಿ ಜೈಲಲ್ಲಿ ಕೂತ್ಕೊಂಡೆ, ಮತ್ತೋರ್ವ ರೌಡಿಶೀಟರ್ ಬೇಕರಿ ರಘುಗೆ ಮುಹೂರ್ತ ಇಟ್ಟಿದ್ದಾನಂತೆ. ಸದ್ಯ ರಘು ಬೇಲ್ ಮೇಲೆ ಹೊರಗಿದ್ದಾನೆ. ಈತ ನಟೋರಿಯೆಸ್ ರೌಡಿಶೀಟರ್​​ಗಳಾದ ಅರಸಯ್ಯ ಹಾಗೂ ಸೈಕಲ್ ರವಿಯ ಪಟ್ಟಾ ಶಿಷ್ಯ. ಕಳೆದ ಹದಿನೈದು ವರ್ಷಗಳಿಂದ ಅರಸಯ್ಯ ಹಾಗೂ ಸೈಕಲ್ ರವಿ ಬೆಂಗಳೂರು ಸೌತ್ ಅಂಡರ್ ವರ್ಲ್ಡ್​​ ಕಂಟ್ರೊಲ್ ಮಾಡಿದ್ದರು. 2018ರಲ್ಲಿ ಮಂಡ್ಯದಲ್ಲಿ ಬನಶಂಕರಿ ಸ್ಟಾಂಡ್ ಕುಟ್ಟಿ ಹುಡ್ಗರಿಂದ ಅರಸಯ್ಯ ಕೊಲೆಯಾದ. ಆತ ಸತ್ತ ನಂತರ ಸೈಕಲ್ ರವಿ ಫೀಲ್ಡ್ ಬಿಟ್ಟು ಅಂದರ್ ಆಗಿದ್ದಾನೆ.

ಅರಸಯ್ಯ ಕೊಲೆಯಾಗಿ, ಸೈಕಲ್ ರವಿ ಅಂದರ್ ಆಗ್ತಿದ್ದಂತೆ ಬೇಕರಿ ರಘು ಮುನ್ನೆಲೆಗೆ ಬಂದಿದ್ದಾನೆ. ಅತ್ತ ಸ್ಟಾಂಡ್ ಕುಟ್ಟಿ ಹಾಗೂ ಹುಡ್ಗರು ಜೈಲಲ್ಲಿದ್ದಾರೆ. ಅರಸಯ್ಯ ಕೊಲೆಯಾದ, ಸೈಕಲ್ ರವಿ ಪ್ರಾಣಭೀತಿಯಿಂದ ಅಂದರ್ ಆದ.. ಈಗ ಇರೋದು ಬೇಕರಿ ರಘ.  ರಘುನ ಎತ್ತಿದ್ರೆ ಅವರೇ ಸೌತ್​​ಗೆ ಹೊಸ ಡಾನ್ ಎಂಬ ಲೆಕ್ಕಾಚಾರ ರೌಡಿಗಳದ್ದು ಎನ್ನಲಾಗಿದೆ.

ಅಲ್ಲದೆ 2016ರಲ್ಲಿ ರೌಡಿಶೀಟರ್ ಕುಳ್ಳು ರಿಜ್ವಾನ್ ಶಿಷ್ಯ ಅವಿನಾಶ್​​ನನ್ನು ರಘು ಶಿಷ್ಯಂದಿರು ಬನಶಂಕರಿಯಲ್ಲಿ ಕೊಲೆ ಮಾಡಿದ್ದರು. ಹೀಗಾಗಿ ರಿಜ್ವಾನ್ ಜೈಲಿನಿಂದಲೇ ಬೇಕರಿ ರಘು ಕೊಲೆಗೆ ಸ್ಕೆಚ್​ ಹಾಕಿದ್ದು, ಸ್ಟಾರ್ ನವೀನ್ ಹಾಗೂ ರಾಹುಲ್ ಗ್ಯಾಂಗ್​​ಗೆ ಜೈಲಿನಿಂದಲೇ ಸುಪಾರಿ ನೀಡಿದ್ದಾನೆ ಎಂದು ತಿಳಿದುಬಂದಿದೆ. ಪೊಲೀಸರ ವಾಹನ ತಪಾಸಣೆ ವೇಳೆ ಕುಳ್ಳು ರಿಜ್ವಾನ್ ಶಿಷ್ಯ ಸ್ಟಾರ್ ನವೀನ್ ಟೂಲ್ಸ್ ಸಮೇತ ಸಿಕ್ಕಿಬಿದ್ದಿದ್ದಾನೆ. ನವೀನ್​ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ ವೇಳೆ ಬೇಕರಿ ರಘು ಹತ್ಯೆಗೆ ಕುಳ್ಳು ರಿಜ್ವಾನ್ ಜೈಲಿನಿಂದಲೇ ಸುಪಾರಿ ನೀಡಿರೋದು ಬೆಳಕಿಗೆ ಬಂದಿದೆ.

ಸದ್ಯ ಸಿದ್ದಾಪುರ ಪೊಲೀಸರು ಕುಳ್ಳು ರಿಜ್ವಾನ್ ಶಿಷ್ಯಂದಿರಾದ ಸ್ಟಾರ್ ನವೀನ್, ಸ್ಟಾರ್ ರಾಹುಲ್, ಆಂಡ್ರೋ ಹರಿ, ಗುಡ್ಡೆ ಭರತ್, ಸೈಕೋ ಶಿವು ಸೇರಿ ಹತ್ತು ಮಂದಿಯನ್ನ ಅರೆಸ್ಟ್​ ಮಾಡಿದ್ದಾರೆ.

The post ಬೆಂಗಳೂರು ಸೌತ್ ಡಾನ್ ಪಟ್ಟಕಾಗಿ ಫೈಟ್.. ಜೈಲಿನಲ್ಲಿದ್ದುಕೊಂಡೇ ಕೊಲೆಗೆ ನಟೋರಿಯಸ್​ ಪ್ಲಾನ್ appeared first on News First Kannada.

Source: newsfirstlive.com

Source link