‘HDK ಮನಸ್ಸಿಗೆ ನೋವಾಗುವಂತೆ ಮಾತಾಡಿದ್ರೆ ಕ್ಷಮೆ ಕೇಳ್ತೀನಿ, ಆದ್ರೆ..’

‘HDK ಮನಸ್ಸಿಗೆ ನೋವಾಗುವಂತೆ ಮಾತಾಡಿದ್ರೆ ಕ್ಷಮೆ ಕೇಳ್ತೀನಿ, ಆದ್ರೆ..’

ಬೆಂಗಳೂರು: ಮಾಜಿ ಸಿಎಂ ಹೆಚ್.​​ಡಿ ಕುಮಾರಸ್ವಾಮಿ ಅವರಿಗೆ ನೋವಾಗುವಂತೆ ನಾನು ಮಾತಾಡಿದ್ರೆ ಕ್ಷಮೆ ಕೇಳ್ತೀನಿ ಅಂತಾ ರಾಕ್​ಲೈನ್​ ವೆಂಕಟೇಶ್​ ಹೇಳಿದ್ದಾರೆ.

ತಮ್ಮ ನಿವಾಸದ ಮುಂದೆ ಜೆಡಿಎಸ್​ ಕಾರ್ಯಕರ್ತರು ಪ್ರತಿಭಟಿಸಿದ ಬೆನ್ನಲ್ಲೇ ಮಾಧ್ಯಮಗಳ ಎದುರು ಮಾತನಾಡಿದ ರಾಕ್​​ಲೈನ್ ವೆಂಕಟೇಶ್​.. ತಾಯಿ ತಂದೆ ಮುಖ ನೋಡೋಕೆ ಆಗ್ತಿಲ್ಲ. ಕುಮಾರಸ್ವಾಮಿ ಅವರ ಮನಸ್ಸಿಗೆ ನೋವಾಗುವಂತೆ ಮಾತಾಡಿದ್ರೆ ನೀವು ಎಲ್ಲಿ ಕರೆದ್ರೂ ಕ್ಷಮೆ ಕೇಳ್ತೀನಿ. ನ್ಯಾಯವಾಗಿ ಬಾಳ್ತೀನಿ ನಾನು.. ಯಾಕೆ ಬೇಕು ಈ ಪ್ರತಿಭಟನೆಗಳು ಎಂದು ಕಿಡಿಕಾರಿದರು.

ಆದರೆ ನಾನು ಎಲ್ಲಿಯೂ ಅವರಿಗೆ ನೋವಾಗುವಂತೆ ಮಾತಾಡಿಲ್ಲ. ಸಾಮರಸ್ಯ ಇದ್ದಿದ್ರೆ ಅವರು ಅರ್ಥ ಮಾಡ್ಕೊಳ್ತಿದ್ರು. ಕಲಾವಿದರ ಬಗ್ಗೆ ಮಾತಾನಾಡಿದ್ದಕ್ಕೆ ಬೇಸರ ಇದೆ. ಅದಕ್ಕೆ ನಾನು ಇವತ್ತು ಮಾತಾಡ್ತಿದ್ದೀನಿ. ನಾನು ರಾಜಕೀಯವಾಗಿ ಮಾತಾನಾಡಲ್ಲ. ಕುಮಾರಸ್ವಾಮಿ ಅವರು ಅಂಬರೀಶ್ ಮತ್ತು ಕಲಾವಿದರ ಬಗ್ಗೆ ಮಾತನಾಡಿದ್ದಕ್ಕೆ ನಾನು ಮಾತನಾಡಿದ್ದು ಎಂದು ಹೇಳಿದ್ರು.

ಇದನ್ನೂ ಓದಿ: ಅಂಬರೀಶ್ ಇದ್ದಾಗ ಕೈ-ಕಾಲು ಕಟ್ಟಿಕೊಂಡು ಮಾತಾಡುತ್ತಿದ್ದರು.. ಇಂದು..? ರಾಕ್​ಲೈನ್ ಕೆಂಡ

ಪ್ರತಿಭಟನೆ ಮಾಡಿಸ್ತಿರೋರು ಚೆನ್ನಾಗಿ ಊಟ ಮಾಡಿ ಮಲಗಿದ್ದಾರೆ. ಪ್ರತಿಭಟನೆ ಮಾಡುವವರು ಇಲ್ಲಿ ನಿದ್ದೆಗೆಟ್ಟಿದ್ದಾರೆ. ದೇವೇಗೌಡರ ಕುಟುಂಬವನ್ನ ನಾನ್ಯಾಕೆ ಒಡೆಯಬೇಕು? ದೇವೇಗೌಡರ ಕುಟುಂಬವನ್ನ ನಾನು ಒಡೆಯಲ್ಲ. ಕಾರ್ಯಕರ್ತರು ಇವತ್ತು ಬರ್ತಾರೆ, ನಾಳೆ ಹೋಗ್ತಾರೆ. ನಾನು ತಪ್ಪು ಮಾಡಿದ್ರೆ ಕ್ಷಮೆ ಕೇಳ್ತೀನಿ. ಆವೇಶದಲ್ಲಿ ಮಾತಾನಾಡಿದ್ರೆ ಕ್ಷಮೆ ಕೇಳ್ತೀನಿ. ಯಾವ ವಿಚಾರಕ್ಕೆ ಕ್ಷಮೆ ಕೇಳಬೇಕು ಅಂತಾ ಹೇಳಿ? ನಾನು ಏನೂ ತಪ್ಪು ಮಾಡಿದ್ದೇನೆ ಅಂತ ನನಗೆ ಗೊತ್ತಾಗಬೇಕು. ಮನುಷ್ಯ ಅಂದ್ರೆ ತಪ್ಪಾಗೇ ಆಗುತ್ತೆ, ತಪ್ಪಾಗಿದ್ರೆ ಕ್ಷಮೆ ಕೇಳ್ತೀನಿ ಎಂದರು.

ಇದನ್ನೂ ಓದಿ: ಸುಮಲತಾ-ಹೆಚ್​ಡಿಕೆ ಜಟಾಪಟಿ: ಸಂಸದೆ ಸುಮಲತಾ ನಿವಾಸಕ್ಕೆ ಭಾರೀ ಭದ್ರತೆ

The post ‘HDK ಮನಸ್ಸಿಗೆ ನೋವಾಗುವಂತೆ ಮಾತಾಡಿದ್ರೆ ಕ್ಷಮೆ ಕೇಳ್ತೀನಿ, ಆದ್ರೆ..’ appeared first on News First Kannada.

Source: newsfirstlive.com

Source link