ಬೆಳ್ಳಂಬೆಳಗ್ಗೆ ಬೆಂಗಳೂರಿನ ಭೂಗತ ಲೋಕಕ್ಕೆ ಬಿಗ್​ ಶಾಕ್​ ನೀಡಿದ ಪೊಲೀಸರು

ಬೆಳ್ಳಂಬೆಳಗ್ಗೆ ಬೆಂಗಳೂರಿನ ಭೂಗತ ಲೋಕಕ್ಕೆ ಬಿಗ್​ ಶಾಕ್​ ನೀಡಿದ ಪೊಲೀಸರು

ಬೆಂಗಳೂರು: ಬೆಳ್ಳಂಬೆಳಗ್ಗೆ ಬೆಂಗಳೂರಿನ ಭೂಗತ ಲೋಕಕ್ಕೆ ಪೊಲೀಸರು ಬಿಗ್​ ಶಾಕ್​ ನೀಡಿದ್ದು, ರೌಡಿಶೀಟರ್​ಗಳ ಮನೆ ಕದ ತಟ್ಟಿದ್ದಾರೆ. ಯಾವೊಬ್ಬ ರೌಡಿಯೂ ಮನೆಯಲ್ಲಿ  ಇರಬಾರದು. ಎಲ್ಲರನ್ನ ತಕ್ಷಣ ವಶಕ್ಕೆ ಪಡೆಯಿರಿ ಎಂಬ ಕಮೀಷನರ್​ ಕಮಲ್​ ಪಂತ್​ ಆದೇಶದ ಮೇರೆಗೆ ಪೊಲೀಸರು ಅಲರ್ಟ್​ ಆಗಿದ್ದಾರೆ. ಎಂಟು ವಿಭಾಗದಿಂದ 1200ಕ್ಕೂ ಹೆಚ್ಚಿನ ರೌಡಿಶೀಟರ್​ಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

ಲಾಕ್​ಡೌನ್​ ತೆರವಾದ ಬಳಿಕ ನಗರದಲ್ಲಿ ರೌಡಿಸಂ ಚಟುವಟಿಕೆಗಳು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ನಿನ್ನೆ ರಾತ್ರಿ ಕಮೀಷನರ್​ ಕಮಲ್​ ಪಂತ್ ವೈರ್​ಲೆಸ್​ ಮೆಸೇಜ್​ ಮೂಲಕ ಆದೇಶ ನೀಡಿದ್ದಾರೆ ಎನ್ನಲಾಗಿದೆ. ಹೀಗಾಗಿ ಪೊಲೀಸರ ಈ ಕಾರ್ಯಾಚರಣೆ ನಡೆದಿದೆ.

ಇತ್ತ ಈಶಾನ್ಯ ವಿಭಾಗದಲ್ಲೂ ಪೊಲೀಸರು ದಾಳಿ ಮುಂದುವರೆಸಿದ್ದಾರೆ. ಯಲಹಂಕ, ಕೊತ್ತನೂರು, ವಿದ್ಯಾರಣ್ಯಪುರ ಸೇರಿದಂತೆ ಹಲವು ಕಡೆ ಪ್ರಮುಖ ರೌಡಿಶೀಟರ್​ಗಳಾದ ಮುಬಾರಕ್​, ಸಿಖಂದರ್ ಅಜಯ್​, ಸೇರಿದಂತೆ ಹಲವರ ಮನೆ ಮೇಲೆ ದಾಳಿ ಮಾಡಿದ್ದಾರೆ. ಈ ವೇಳೆ ಪರಿಶೀಲನೆ ನಡೆಸಿ ಯಾವುದೇ ರೌಡಿ ಚಟುವಟಿಕೆಗಳಲ್ಲಿ ತೊಡಗದಂತೆ ಎಚ್ಚರಿಕೆ ನೀಡಿದ್ದಾರೆ.

blankರೌಡಿಶೀಟರ್​ಗಳಿಂದ ಮಾರಕಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ವಶಕ್ಕೆ ಪಡೆದಿರೊ ಎಲ್ಲ ರೌಡಿಗಳಿಗೂ ವೈದ್ಯಕೀಯ ಪರೀಕ್ಷೆ ನಡೆಸಲಾಗುವದು, ಈ ಪರೀಕ್ಷೆಯಲ್ಲಿ ಗಾಂಜಾ ಸೇವನೆ ಕಂಡುಬಂದಲ್ಲಿ NDPS​ ಅಡಿ ಕೇಸ್​ ದಾಖಲಿಸಲಾಗುವುದು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಇನ್ಮುಂದೆ ರೌಡಿ ಚಟುವಟಿಕೆಗಳಲ್ಲಿ ತೊಡಗದಂತೆ CRPC 110ರ ಅಡಿಯಲ್ಲಿ ಐವತ್ತು ಸಾವಿರದಿಂದ 1ಲಕ್ಷದವರೆಗೆ ದಂಡ ವಿಧಿಸಿ ಮುಚ್ಚಳಿಕೆ ಬರೆಸಿಕೊಳ್ಳಲಿದ್ದಾರೆ ಅಂತ ತಿಳಿದುಬಂದಿದೆ.

The post ಬೆಳ್ಳಂಬೆಳಗ್ಗೆ ಬೆಂಗಳೂರಿನ ಭೂಗತ ಲೋಕಕ್ಕೆ ಬಿಗ್​ ಶಾಕ್​ ನೀಡಿದ ಪೊಲೀಸರು appeared first on News First Kannada.

Source: newsfirstlive.com

Source link