ಲಂಕಾ ಸರಣಿಯಲ್ಲಿ ಅಬ್ಬರಿಸಿದ್ರೆ ಮಾತ್ರ ಧವನ್​ಗೆ ವಿಶ್ವಕಪ್​ ಟಿಕೆಟ್..!

ಲಂಕಾ ಸರಣಿಯಲ್ಲಿ ಅಬ್ಬರಿಸಿದ್ರೆ ಮಾತ್ರ ಧವನ್​ಗೆ ವಿಶ್ವಕಪ್​ ಟಿಕೆಟ್..!

ಶ್ರೀಲಂಕಾ ಪ್ರವಾಸದಲ್ಲಿ ನೀಡೋ ಪ್ರದರ್ಶನ, ವಿಶ್ವಕಪ್​ ಟೂರ್ನಿಯ ದೃಷ್ಟಿಯಿಂದ ತಂಡದ ಆಯ್ಕೆಯ ಮಾನದಂಡ ಎಂದೇ ಹೇಳಲಾಗ್ತಿದೆ. ಇದು ಸಹಜವಾಗಿಯೇ ಆಟಗಾರರ ಮೇಲೆ ಸಾಲಿಡ್​​​ ಪ್ರದರ್ಶನ ನೀಡಬೇಕಾದ ಒತ್ತಡವನ್ನುಂಟು ಮಾಡಿದೆ. ಅದರಲ್ಲೂ ಸ್ವತಃ ನಾಯಕ ಶಿಖರ್​ ಧವನ್​ ಪಾಲಿಗೂ ಇದು ಡು ಆರ್​ ಡೈ ಸರಣಿಯಾಗಿದೆ.

ಭಾರತ – ಶ್ರೀಲಂಕಾ ನಡುವಿನ ಸೀಮಿತ ಓವರ್​ಗಳ ಸರಣಿಯ ಕುತೂಹಲ, ದಿನದಿಂದ ದಿನಕ್ಕೆ ಹೆಚ್ಚಾಗ್ತಿದೆ. ಟಿ20 ವಿಶ್ವಕಪ್​ ಟೂರ್ನಿಯ ದಿನಾಂಕವನ್ನ, ICC​ ನಿಗದಿ ಮಾಡಿದ ಮೇಲಂತೂ, ಈ ಸರಣಿಯ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಚುಟುಕು ವಿಶ್ವ ಸಮರಕ್ಕೆ ಆಯ್ಕೆ ಆಗಬೇಕಂದ್ರೆ, ಹಲವು ಆಟಗಾರರ ಪಾಲಿಗೆ ಲಂಕಾ ವಿರುದ್ಧದ ಟಿ20 ಸರಣಿಯಲ್ಲಿ ನೀಡೋ ಪ್ರದರ್ಶನ, ನಿರ್ಣಾಯಕವಾಗಿದೆ. ಉತ್ತಮ ಪ್ರದರ್ಶನ ನೀಡಬೇಕಾದ​ ಒತ್ತಡದಿಂದ ಸ್ವತಃ ನಾಯಕ ಶಿಖರ್​ ಧವನ್​ ಕೂಡ ಹೊರತಾಗಿಲ್ಲ.

ವನ್​ ಮುಂದಿದೆ ಸ್ಥಾನ ಉಳಿಸಿಕೊಳ್ಳೋ ಸವಾಲು..!
ತ್ರಿವಳಿಗಳ ನಡುವಿನ ಫೈಟ್​​ನಲ್ಲಿ ಯಾರಿಗೆ ವಿಶ್ವಕಪ್​ ಟಿಕೆಟ್​..?

ಕಳೆದ ಮಾರ್ಚ್​​ನಲ್ಲಿ ನಡೆದ ಭಾರತ -ಇಂಗ್ಲೆಂಡ್​​ ನಡುವಿನ ಟಿ20 ಸರಣಿ, ಅತಿ ಹೆಚ್ಚು ಪ್ರಯೋಗಕ್ಕೆ ಸಾಕ್ಷಿಯಾಯ್ತು. ಅದರಲ್ಲೂ ಓಪನಿಂಗ್​ ಸ್ಲಾಟ್​​ಗೆ ಹೆಚ್ಚು ಪರೀಕ್ಷೆಗಳನ್ನ ಮಾಡಲಾಗಿತ್ತು. ಶಿಖರ್​​ ಧವನ್​, ಕೆಎಲ್​ ರಾಹುಲ್​, ನಾಯಕ ವಿರಾಟ್​​ ಕೊಹ್ಲಿ, ತಮ್ಮನ್ನ ತಾವು ಪರೀಕ್ಷೆಗೊಡ್ಡಿಕೊಂಡಿದ್ರು. ಈ ಪರೀಕ್ಷೆಯಲ್ಲಿ ಧವನ್​ ಫೇಲ್​ ಆದ್ರೆ, ರಾಹುಲ್​ ಅಟ್ಟರ್​ ಪ್ಲಾಫ್​ ಆದ್ರು. ಆ ಬಳಿಕ ರಾಹುಲ್​, ಧವನ್​ ಇಬ್ಬರಿಗೂ ವಿಶ್ವಕಪ್​ ಟಿಕೆಟ್​​ ಇಲ್ಲ ಎಂದೇ ಹೇಳಲಾಗಿತ್ತು. ಯಾಕಂದ್ರೆ, ಅಂತಿಮ ಪಂದ್ಯದಲ್ಲಿ ಓಪನರ್​​ ಆಗಿ ಕಣಕ್ಕಿಳಿದ ಕೊಹ್ಲಿ ಸಕ್ಸಸ್​ ಕಂಡಿದ್ರು.

blank

ಇಷ್ಟೇ ಅಲ್ಲ, ಈ ಪಂದ್ಯದ ಬಳಿಕ ಮಾತನಾಡಿದ್ದ ಕೊಹ್ಲಿ, ವಿಶ್ವಕಪ್​ ದೃಷ್ಟಿಯಿಂದ ನಾನು ಐಪಿಎಲ್​ನಲ್ಲೂ ಆರಂಭಿಕನಾಗಿಯೇ ಕಣಕ್ಕಿಳಿಯುತ್ತೇನೆ ಎಂದು ಹೇಳಿದ್ರು. ಹೇಳಿದ ಮಾತಿನಂತೆ ಅರ್ಧಕ್ಕೆ ನಿಂತಿರುವ 14ನೇ ಆವೃತ್ತಿಯ ಐಪಿಎಲ್​ನಲ್ಲಿ ಆರಂಭಿಕನಾಗಿ ಕಣಕ್ಕಿಳಿದ ಕೊಹ್ಲಿ, ಉತ್ತಮ ಪ್ರದರ್ಶನ ನೀಡಿದ್ರು. ಆಡಿದ 7 ಪಂದ್ಯಗಳಲ್ಲಿ 121.47ರ ಸ್ಟ್ರೈಕ್​ರೇಟ್​​ನಲ್ಲಿ ಬ್ಯಾಟ್​ ಬೀಸಿದ್ರು.

ಆದ್ರೆ ಅರ್ಧಕ್ಕೆ ನಿಂತಿರುವ ಐಪಿಎಲ್​ನಲ್ಲಿ ಕೊಹ್ಲಿ ಮಾತ್ರವಲ್ಲ, ಧವನ್​, ರಾಹುಲ್​ ಕೂಡ ಆರಂಭಿಕನಾಗಿ ಸಕ್ಸಸ್​ ಕಂಡಿದ್ದಾರೆ. ರಾಹುಲ್​ 66.20ರ ಸರಾಸರಿಯಲ್ಲಿ ರನ್​ ಕಲೆ ಹಾಕಿದ್ರೆ, ಧವನ್​ 54.28ರ ಸರಾಸರಿಯಲ್ಲಿ ರನ್​ಗಳಿಸಿದ್ದಾರೆ. ಮಿಡಲ್​ ಆರ್ಡರ್​​ನಲ್ಲಿ ಆಡೋ ಸಾಮರ್ಥ್ಯವಿರೋದ್ರಿಂದ ರಾಹುಲ್​ ಆಯ್ಕೆಗೆ, ಬೇರೆಯ ಮಾನದಂಡವೇ ಇದೆ. ಆದ್ರೆ ಧವನ್​ ಆಯ್ಕೆಯಾಗಬೇಕಂದ್ರೆ, ಮುಂದಿರುವ ಲಂಕಾ ಪ್ರವಾಸ ಹಾಗೂ IPL PHASE 2 ನಲ್ಲಿ, ಅಬ್ಬರಿಸಬೇಕಿದೆ. ಯಾಕಂದ್ರೆ ಆಯ್ಕೆಯನ್ನ ನಿರ್ಧರಿಸೋದು ಪ್ರದರ್ಶನ ಮಾತ್ರ.

The post ಲಂಕಾ ಸರಣಿಯಲ್ಲಿ ಅಬ್ಬರಿಸಿದ್ರೆ ಮಾತ್ರ ಧವನ್​ಗೆ ವಿಶ್ವಕಪ್​ ಟಿಕೆಟ್..! appeared first on News First Kannada.

Source: newsfirstlive.com

Source link