ನಾನು ಇನ್ನೂ ಲಸಿಕೆ ಪಡೆದುಕೊಂಡಿಲ್ಲ: ರಮ್ಯಾ

ಬೆಂಗಳೂರು: ಚಿತ್ರರಂಗದಲ್ಲಿ ಇದ್ದಷ್ಟು ದಿನ ನಂಬರ್ 1 ನಟಿಯಾಗಿದ್ದ ಸ್ಯಾಂಡಲ್‍ವುಡ್ ಕ್ವೀನ್ ರಮ್ಯಾ ವರ್ಷಗಳ ನಂತರ ಇನ್‍ಸ್ಟಾಗ್ರಾಮ್ ಲೈವ್ ಮೂಲಕ ಅಭಿಮಾನಿಗಳಿಗೆ ದರ್ಶನ ನೀಡಿದ್ದಾರೆ. ಈ ವೇಳೆ ಅನೇಕ ವಿಷಯ ಹಂಚಿಕೊಂಡಿದ್ದಾರೆ.

ಹಲವು ವರ್ಷಗಳಿಂದ ಚಿತ್ರರಂಗ, ಅಭಿಮಾನಿಗಳು, ರಾಜಕೀಯದಿಂದ ದೂರವಾಗಿರುವ ರಮ್ಯಾ ಅವರನ್ನು ಸೋಶಿಯಲ್ ಮೀಡಿಯಾದಲ್ಲಿ ಲೈವ್ ನೋಡಿದ ಅಭಿಮಾನಿಗಳು ಸಖತ್ ಖುಷಿಯಾಗಿದ್ದಾರೆ. ಕಾಮಿಡಿಯನ್ ಸೋನು ವೇಣುಗೋಪಾಲ್ ಜೊತೆಗೆ ಹಲವು ವಿಚಾರಗಳನ್ನು ಅವರು ಲೈವ್‍ನಲ್ಲಿ ಹೇಳಿಕೊಂಡಿದ್ದಾರೆ.

 

View this post on Instagram

 

A post shared by Sonu Venugopal (@sonuvenugopaal)

ಮಿಲಿಯನ್ ಡಾಲರ್ ಪ್ರಶ್ನೆ ಒಂದಿದೆ ಎಲ್ಲರೂ ಕೇಳುತ್ತಿದ್ದಾರೆ ರಮ್ಯಾ ಅವರು ಕೊರೊನ ಲಸಿಕೆ ಪಡೆದುಕೊಂಡ್ರಾ ಎಂದು ಸೋನು ವೇಣುಗೋಪಾಲ್ ಪ್ರಶ್ನಿಸಿದಾಗ ರಮ್ಯಾ.. ನಾನು ಅಮೆರಿಕಾದ ವ್ಯಾಕ್ಸಿನ್‍ಗೆ ಕಾಯುತ್ತಾ ಇದ್ದೇನೆ. ನಾನಿನ್ನೂ ವ್ಯಾಕ್ಸಿನ್ ತೆಗೆದುಕೊಂಡಿಲ್ಲ. ನಾನು ಮೊಡೆರ್ನಾಗೆ ಕಾಯುತ್ತಿದ್ದೇನೆ. ಫೈಜರ್ ವ್ಯಾಕ್ಸಿನ್‍ನ್ನು ಮೂರು ಡೋಸ್ ತೆಗೆದುಕೊಳ್ಳಬೇಕು ಎಂದು ಹೇಳುತ್ತಿದ್ದಾರೆ. ವ್ಯಾಕ್ಸಿನ್ ವಿಚಾರದಲ್ಲಿ ಸಿಕ್ಕಪಟ್ಟೆ ಗೊಂದಲ ಶುರುವಾಗಿದೆ. ಮೊಡೆರ್ನಾಗೆ ಸದ್ಯ ಅನುಮತಿ ಸಿಕ್ಕಿದೆ ನನಗೆ ಅದು ಖುಷಿಯ ವಿಚಾರವಾಗಿದೆ.

The post ನಾನು ಇನ್ನೂ ಲಸಿಕೆ ಪಡೆದುಕೊಂಡಿಲ್ಲ: ರಮ್ಯಾ appeared first on Public TV.

Source: publictv.in

Source link