‘ಪಾಪ ಸಂಸದರನ್ನು ವರ್ಗಾವಣೆ ಮಾಡಲು ಬರುವುದಿಲ್ಲ!’- ಹೀಗ್ಯಾಕಂದ್ರು ಸುಮಲತಾ?

‘ಪಾಪ ಸಂಸದರನ್ನು ವರ್ಗಾವಣೆ ಮಾಡಲು ಬರುವುದಿಲ್ಲ!’- ಹೀಗ್ಯಾಕಂದ್ರು ಸುಮಲತಾ?

ಬೆಂಗಳೂರು: ಮಂಡ್ಯ ರಾಜಕಾರಣದಲ್ಲಿ ಬಿರುಗಾಳಿ ಎಬ್ಬಿಸಿರುವ ಕೆಆರ್‌ಎಸ್ ಬಿರುಕಿನ ಕದನಕ್ಕೆ ಬ್ರೇಕ್​ ಬೀಳುವ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ. ಇಂದು ಕೂಡ ಟ್ವೀಟ್​ ಮಾಡಿರುವ ಸಂಸದೆ ಸುಮಲತಾ ಅಂಬರೀಶ್ ಅವರು ತಮ್ಮ ವಿರೋಧಿಗಳ ಹೆಸರು ಪ್ರಸ್ತಾಪ ಮಾಡದೇ ಪರೋಕ್ಷವಾಗಿ ಗುದ್ದು ನೀಡಿದ್ದಾರೆ.

ಈ ಕುರಿತು ಟ್ವೀಟ್​ ಮಾಡಿರುವ ಸುಮಲತಾ ಅವರು, ಸತ್ಯದ ಪರವಾಗಿ ನಿಂತಾಗ, ಬಹಳಷ್ಟು ಶತ್ರುಗಳು ಹುಟ್ಟಿಕೊಳ್ಳುತ್ತಾರೆ. ಕೆಲವರು ಮಹಿಳೆಯರು ಅಧಿಕಾರದಲ್ಲಿರುವುದನ್ನು ಸಹಿಸಿಕೊಳ್ಳಲಾರರು. ಭ್ರಷ್ಟರು, ನಿಷ್ಠಾವಂತ ಅಧಿಕಾರಿಗಳಿಗೆ ವರ್ಗಾವಣೆ, ಒತ್ತಡ, ಕಿರುಕುಳ ಕೊಡಬಲ್ಲರು. ಪಾಪ ಸಂಸದರನ್ನು ವರ್ಗಾವಣೆ ಮಾಡಲು ಬರುವುದಿಲ್ಲ ಎಂದು ವ್ಯಂಗ್ಯವಾಡಿದ್ದಾರೆ. ಅಲ್ಲದೇ #SaveKRSDam #StopIllegalMining ಎಂಬ ಹ್ಯಾಶ್​ಟ್ಯಾಗ್​ಅನ್ನು ಹಂಚಿಕೊಂಡಿದ್ದಾರೆ.

ಇನ್ನು ಜಲಾಶಯದಲ್ಲಿ ಬಿರುಕಿದೆ ಎಂಬ ಸಂಸದೆ ಸುಮಲತಾ ಅಂಬರೀಶ್ ಹೇಳಿಕೆಗೆ ಕೆಂಡಾಮಂಡಲರಾಗಿ ಹೇಳಿಕೆಯ ಮೇಲೆ ಹೇಳಿಕೆಗಳನ್ನ ಕೊಟ್ಟಿದ್ದ ದಳಪತಿಗಳು ಇದೀಗ ಮೌನಕ್ಕೆ ಜಾರಿದ್ದಾರೆ. ಅಂಬರೀಶ್ ಅಂತ್ಯಕ್ರಿಯೆ, ಸ್ಮಾರಕ ನಿರ್ಮಾಣ ಕುರಿತಂತೆ ಕುಮಾರಸ್ವಾಮಿ ನೀಡಿದ್ದ ಹೇಳಿಕೆಗೆ ಸುಮಲತಾ ಅಂಡ್ ಟೀಂ ಸಾಲು ಸಾಲಾಗಿ ತಿರುಗೇಟು ಕೊಟ್ಟಿದ್ದಾರೆ. ಸುಮಲತಾ, ಅಭಿಷೇಕ್, ರಾಕ್​ಲೈನ್ ವೆಂಕಟೇಶ್, ದೊಡ್ಡಣ್ಣ ವಾಗ್ದಾಳಿ ನಡೆಸಿದ್ರೂ ಕುಮಾರಸ್ವಾಮಿ ಮಾತ್ರ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

The post ‘ಪಾಪ ಸಂಸದರನ್ನು ವರ್ಗಾವಣೆ ಮಾಡಲು ಬರುವುದಿಲ್ಲ!’- ಹೀಗ್ಯಾಕಂದ್ರು ಸುಮಲತಾ? appeared first on News First Kannada.

Source: newsfirstlive.com

Source link