ನಾನು ಮನಸ್ಸು ಮಾಡಿದ್ರೆ ಈಗಲೂ MLA, MP ಆಗ್ತೀನಿ -ರಾಕ್​​ಲೈನ್

ನಾನು ಮನಸ್ಸು ಮಾಡಿದ್ರೆ ಈಗಲೂ MLA, MP ಆಗ್ತೀನಿ -ರಾಕ್​​ಲೈನ್

ಬೆಂಗಳೂರು: ನಾನು ಮನಸ್ಸು ಮಾಡಿದ್ರೆ ಈಗಲೂ MLA, MP ಆಗ್ತೀನಿ ಅಂತಾ ನಿರ್ಮಾಪಕ ರಾಕ್​​ಲೈನ್ ವೆಂಕಟೇಶ್ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿಗೆ ಟಾಂಗ್ ನೀಡಿದ್ದಾರೆ.

ತಮ್ಮ ನಿವಾಸದ ಎದುರು ಜೆಡಿಎಸ್​ ಕಾರ್ಯಕರ್ತರು ಪ್ರತಿಭಟನೆ ನಡೆಸಿದ ಬೆನ್ನಲ್ಲೇ ಮಾಧ್ಯಮಗಳ ಜೊತೆ ಮಾತನಾಡಿದ ಅವರು.. ಸುಮಲತಾ ಅಂಬರೀಶ್ ವಿರುದ್ಧ ಮಾತಾಡಿದಾಗ ನಾನೇನು ಹೇಳಿರಲಿಲ್ಲ. ಚಿತ್ರರಂಗದ ಬಗ್ಗೆ, ಅಂಬರೀಶ್ ಬಗ್ಗೆ ಕೆಟ್ಟದಾಗಿ ಮಾತಾನಾಡಿದ್ರು. ಅದಕ್ಕಷ್ಟೇ ನನ್ನ ಮಾತು. ಲಾಸ್ಟ್ ಮೀಟಿಂಗ್​ನಲ್ಲಿ ನಾನು, ಕುಮಾರಸ್ವಾಮಿ, ಅಂಬರೀಶ್ ಇದ್ವಿ. ಕುಮಾರಸ್ವಾಮಿ ನನಗೂ ಯಾವುದೇ ರೀತಿಯ ಶತ್ರು ಅಲ್ಲ. ನಾನು ಯಾವತ್ತೂ ಅವರ ಬಗ್ಗೆ ಮಾತನಾಡಿಲಿಲ್ಲ ಎಂದರು.

ಇದನ್ನೂ ಓದಿ: ಅಂಬರೀಶ್ ಇದ್ದಾಗ ಕೈ-ಕಾಲು ಕಟ್ಟಿಕೊಂಡು ಮಾತಾಡುತ್ತಿದ್ದರು.. ಇಂದು..? ರಾಕ್​ಲೈನ್ ಕೆಂಡ

ವಾಕ್ ಸ್ವಾತಂತ್ರ್ಯ ಅವರಿಗೆ ಮಾತ್ರ ಇರೋದಾ? ನಮಗಿಲ್ವಾ? ಮಂಡ್ಯ ರಾಜಕೀಯಕ್ಕೆ ನಾನು ಬರೋದಿಲ್ವಾ? ರಾಜ್ಯ ರಾಜಕಾರಣಕ್ಕೆ ನಾನು ಯಾವತ್ತೂ ಬರಲ್ಲ. ಮಂಡ್ಯ ಚುನಾವಣೆಯಲ್ಲಿ ನಾನು ಸುಮಲತಾ ಅವರ ಬೆನ್ನಿಗೆ ನಿಂತಿದ್ದೆ. ನಾನು ನಿನ್ನೆ ರಾಜಕೀಯವಾಗಿ ಮಾತನಾಡಲೇ ಇಲ್ಲ. ಕುಮಾರಸ್ವಾಮಿಗೆ ಕೆಟ್ಟ ಪದಗಳನ್ನ ಬಳಸೇ ಇಲ್ಲ. ರಾಜಕೀಯವಾಗಿ ಸುಮಲತಾ ವಿಚಾರದ ಬಗ್ಗೆ ಕೆಟ್ಟದಾಗಿ ಮಾತನಾಡಿದ್ರೂ ನಾನು ಪ್ರತಿಕ್ರಿಯಿಸಿರಲಿಲ್ಲ. ಹೇಗಾದ್ರೂ ಮಾಡಿ ಅವರನ್ನ ಮಂಡ್ಯ ಬಿಟ್ಟು ಓಡಿಸಬೇಕು ಅಂತಾ ಇದೆ. ದೊಡ್ಡಣ್ಣ ಅವರು ಕುಮಾರಸ್ವಾಮಿ ಬಳಿ ಹೋದಾಗ ಕಣ್ಣೀರು ಹಾಕಿ ಹೊರಬಂದರು. ನನಗೆ ಮಸಿ ಬಳಿತಾರೆ ಅಂತ ಹೇಳಿದ್ರಂತೆ. ನಾನು ಅವರ ಮನೆ ಮುಂದೆ ಹೋಗಿ ಪ್ರತಿಭಟನೆ ಮಾಡಿದ್ದೀನಾ? ಎಂದು ಪ್ರಶ್ನಿಸಿದ್ರು.

ನನ್ನ ಮನೆ ಮುಂದೆ ಬರ್ತಾರೆ ಎಂದು ರಾತ್ರಿ ನನಗೆ ಗೊತ್ತಾಗಿತ್ತು. ನಾನು ಮಾತಾಡಿರೋದಕ್ಕೆ ಕುಮಾರಸ್ವಾಮಿ ಬಳಗಕ್ಕೆ ಬೇಜಾರಾಗಬಹುದು. ಕುಮಾರಸ್ವಾಮಿ ಮನಸ್ಸು ಮಾಡಿದ್ರೆ 100 ಸಿನಿಮಾ ಮಾಡ್ತಾರೆ. ನಾನು ಮನಸ್ಸು ಮಾಡಿದ್ರೆ ಈಗಲೂ MLA, MP ಆಗ್ತೀನಿ. ನನಗೆ ಅಷ್ಟು ಕೆಪಾಸಿಟಿ ಇದೆ ಎಂದು ರಾಕ್​ಲೈನ್ ವೆಂಕಟೇಶ್​​ ತಿರುಗೇಟು ಕೊಟ್ಟರು.

ಇದನ್ನೂ ಓದಿ: ‘HDK ಮನಸ್ಸಿಗೆ ನೋವಾಗುವಂತೆ ಮಾತಾಡಿದ್ರೆ ಕ್ಷಮೆ ಕೇಳ್ತೀನಿ, ಆದ್ರೆ..’

The post ನಾನು ಮನಸ್ಸು ಮಾಡಿದ್ರೆ ಈಗಲೂ MLA, MP ಆಗ್ತೀನಿ -ರಾಕ್​​ಲೈನ್ appeared first on News First Kannada.

Source: newsfirstlive.com

Source link