ಜನ ವಸತಿ ಪ್ರದೇಶದಲ್ಲಿ ದಿಢೀರ್​ ಪ್ರತ್ಯಕ್ಷವಾದ ಮೊಸಳೆಗಳು

ಜನ ವಸತಿ ಪ್ರದೇಶದಲ್ಲಿ ದಿಢೀರ್​ ಪ್ರತ್ಯಕ್ಷವಾದ ಮೊಸಳೆಗಳು

ಕಲಬುರಗಿ: ಜನವಸತಿ ಪ್ರದೇಶದಲ್ಲಿ 2 ಬೃಹತ್​ ಮೊಸಳೆಗಳು ದಿಢೀರನೆ ಪ್ರತ್ಯಕ್ಷವಾಗಿ ಜನರಲ್ಲಿ ಆತಂಕ ಮೂಡಿಸಿದ ಘಟನೆ ನಗರದ ರಾಜಾಪುರ ಪ್ರದೇಶದಲ್ಲಿ ನಡೆದಿದೆ. ಇಲ್ಲಿನ ಹೊಂಡದಲ್ಲಿ ಎರಡು ಬೃಹತ್​ ಮೊಸಳೆಗಳು ಬೀಡು ಬಿಟ್ಟಿದ್ದು ಸಾರ್ವಜನಿಕರು ಮತ್ತು ರೈತರಲ್ಲಿ ಆತಂಕ ಮೂಡಿಸಿದೆ.

ಇದರಿಂದ ಭಯಗೊಂಡ ಜನ ಮೊಸಳೆ ಹಿಡಿಯುವಂತೆ ಸ್ಥಳಿಯ ಅರಣ್ಯಾಧಿಕಾರಿಗಳಿಗೆ ಒತ್ತಾಯ ಮಾಡಿದ್ದಾರೆ. ಅರಣ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದು, ಸದ್ಯ ಮಳೆಗಾಲವಿರೋದ್ರಿಂದ ನೀರಿನಲ್ಲಿ ಮೊಸಳೆ ಹಿಡಿಯುವುದು ಕಷ್ಟ ಎಂದು ಬೇಜವಾಬ್ದಾರಿಯುತ ಉತ್ತರವನ್ನು ನೀಡಿದ್ದಾರೆ ಅಂತ ಸಾರ್ವಜನಿಕರು ಆರೋಪಿಸಿದ್ದಾರೆ.

ಮೊಸಳೆ ಹಿಡಿಯೋದು ಬಿಟ್ಟು ನೀರಿದೆ, ಮಳೆ ಇದೆ ಎಂದು ಅಧಿಕಾರಿಗಳು ನುಣುಚಿಕೊಳ್ಳುತ್ತಿದ್ದಾರೆ. ಏನಾದ್ರು ಅನಾಹುತ ಸಂಭವಿಸಿದ್ರೆ ಯಾರು ಹೊಣೆ? ಎಂದು ಅಲ್ಲಿನ ನಿವಾಸಿಗಳು ಅಧಿಕಾರಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

The post ಜನ ವಸತಿ ಪ್ರದೇಶದಲ್ಲಿ ದಿಢೀರ್​ ಪ್ರತ್ಯಕ್ಷವಾದ ಮೊಸಳೆಗಳು appeared first on News First Kannada.

Source: newsfirstlive.com

Source link