ಲಂಕಾ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ರೂ ಈ ಐವರಿಗೆ ಮತ್ತೆ ಅವಕಾಶ ಸಿಗಲ್ವಾ?

ಲಂಕಾ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ರೂ ಈ ಐವರಿಗೆ ಮತ್ತೆ ಅವಕಾಶ ಸಿಗಲ್ವಾ?

ಶ್ರೀಲಂಕಾ ವಿರುದ್ಧದ ಪ್ರವಾಸಕ್ಕೆ ಆಯ್ಕೆಯಾಗಿರುವ ಈ ಐವರು ಆಟಗಾರರ ಪಾಲಿಗೆ, ಟೀಮ್​ ಇಂಡಿಯಾ ಪರ ಆಡೋಕೆ ಇದೇ ಕೊನೆಯ ಅವಕಾಶ. ಈ ಸರಣಿಯಲ್ಲಿ ಅವಕಾಶ ಸಿಕ್ಕು ಸಖತ್​ ಪರ್ಫಾಮೆನ್ಸ್ ನೀಡಿದ್ರೂ, ಇವರನ್ನ ಮತ್ತೆ ಆಯ್ಕೆ ಸಮಿತಿ ಸೆಲೆಕ್ಷನ್​ಗೆ ಪರಿಗಣಿಸೋದು ಅನುಮಾನ.

ವಿರಾಟ್​​ ಕೊಹ್ಲಿ ನೇತೃತ್ವದ ಟೀಮ್​ ಇಂಡಿಯಾ ಸೀನಿಯರ್ಸ್​ ತಂಡ, ಇಂಗ್ಲೆಂಡ್​ನಲ್ಲಿ ಬೀಡು ಬಿಟ್ಟಿದೆ. ಪರಿಣಾಮ ಹಲವು ಹೊಸ ಮುಖಗಳೊಂದಿಗೆ ಧವನ್​ ನೇತೃತ್ವದ ಇನ್ನೊಂದು ತಂಡ, ಲಂಕಾ ಪ್ರವಾಸಕ್ಕೆ ತೆರಳಿದೆ. ಆಯ್ಕೆಯಾದ ಎಲ್ಲಾ ಯುವ ಆಟಗಾರರಿಗೆ ಅವಕಾಶ ನೀಡೋಕೆ ಆಗಲ್ಲ ಅಂತಾ ಈಗಾಗಲೇ ಕೋಚ್​ ದ್ರಾವಿಡ್​​ ಹೇಳಿದ್ದಾರೆ. ಹೀಗಾಗಿ ಇರೋ 11 ಸ್ಥಾನಗಳಿಗೆ, ಟಫ್​​ ಕಾಂಪೀಟೇಶನ್​ ನಡೀತಾ ಇದೆ. ಹೀಗಾಗಿ ಯಾರಿಗೆಲ್ಲಾ ಅವಕಾಶ ಸಿಗಲಿದೆ ಅನ್ನೋದು, ಕುತೂಹಲ ಕೆರಳಿಸಿದೆ.

blank

ಮೊದಲ ಬಾರಿ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಿರುವ ಹಲವು ಆಟಗಾರರು, ತಮ್ಮ ಸಾಮರ್ಥ್ಯ ಪ್ರದರ್ಶಿಸಿ ಸ್ಥಾನ ಉಳಿಸಿಕೊಳ್ಳೋಕೆ ಸಜ್ಜಾಗ್ತಿದ್ದಾರೆ. ಆದ್ರೆ ಈ ಐವರು ನತದೃಷ್ಠ ಆಟಗಾರರ ಪಾಲಿಗೆ, ರಾಷ್ಟ್ರೀಯ ತಂಡದ ಪರ ಆಡೋಕೆ ಇದೆ ಮೊದಲ ಹಾಗೂ ಕೊನೆಯ ಅವಕಾಶ. ಒಂದು ವೇಳೆ ಲಂಕಾ ಪ್ರವಾಸದಲ್ಲಿ ಸಾಲಿಡ್​ ಪರ್ಫಾಮೆನ್ಸ್​ ನೀಡಿದ್ರೂ ಕೂಡ, ಮತ್ತೇ ರಾಷ್ಟ್ರೀಯ ತಂಡವನ್ನ ಪ್ರತಿನಿಧಿಸೋ ಅವಕಾಶ ಸಿಗೋದು, ಬಹುತೇಕ ಡೌಟ್​​.

blank

32ರ ಹರೆಯದ ಕೃಷ್ಣಪ್ಪ ಗೌತಮ್​ಗೆ ಮತ್ತೆ ಅವಕಾಶ ಸಿಗೋ ಸಾಧ್ಯತೆ ಇದ್ಯಾ?
ಯೆಸ್, ಆರಂಭಿಕ ಆಟಗಾರ ಋತುರಾಜ್​ ಗಾಯಕ್ವಾಡ್​​, ನಿತೀಶ್​ ರಾಣಾ, ಕನ್ನಡಿಗ ಕೃಷ್ಣಪ್ಪ ಗೌತಮ್​, ಸ್ಪಿನ್ನರ್​ ವರುಣ್​ ಚಕ್ರವರ್ತಿ ಹಾಗೂ ಪೇಸರ್​​ ಚೇತನ್​ ಸಕಾರಿಯಾ. ಈ ಐವರೇ ಆ ನತದೃಷ್ಟ ಆಟಗಾರರು. ಇವರು ಪ್ರತಿಭಾನ್ವಿತ ಕ್ರಿಕೆಟಿಗರು ಅನ್ನೋದ್ರಲ್ಲಿ ಎರಡು ಮಾತಿಲ್ಲ. ಆದ್ರೆ ಇವರಾಡೋ ಸ್ಲಾಟ್​ಗಿರೋ ಪೈಪೋಟಿಯೇ, ಇವರ ಮುಂದಿನ ಆಯ್ಕೆಗೆ ಬ್ರೇಕ್​ ಹಾಕಲಿದೆ ಅನ್ನೋ ವಿಶ್ಲೇಷಣೆ, ಕ್ರಿಕೆಟ್​ ವಲಯದಲ್ಲಿ ನಡೀತಾ ಇದೆ.

blank

ಕುಲ್ಚಾ ಜೋಡಿ ಮಿಂಚಿದ್ರೆ, ವರುಣ್​ ಚಕ್ರವರ್ತಿಗೆ ಮತ್ತೆ ಸಿಗಲ್ಲ ಅವಕಾಶ?
ಋತುರಾಜ್​​, ವರುಣ್​, ಚೇತನ್​.. ಈ ಮೂವರಿಗೆ ತಾವಾಡೋ ಸ್ಥಾನಕ್ಕಿರುವ ತೀವ್ರ ಪೈಪೋಟಿ ಮಾತ್ರ ಮುಳುವಾಗಿದೆ. ಆದ್ರೆ, ನಿತೀಶ್​ ರಾಣಾ ಹಾಗೂ ಕೆ ಗೌತಮ್​ಗೆ ಸ್ಲಾಟ್​​​ಗಿರೋ ಕಾಂಪಿಟೇಶನ್​ ಜೊತೆಗೆ ತಮ್ಮ ವಯಸ್ಸು ಕೂಡ ಮಳುವಾಗಿದೆ. ಹೀಗಾಗಿಯೇ 27ರ ವಯಸ್ಸಿನ ರಾಣಾ, 32ರ ಹರೆಯದ ಕೆ.ಗೌತಮ್​ ಪೈಪೋಟಿಯಲ್ಲಿ ಕಳೆದು ಹೋಗ್ತಾರೆ ಎಂದೇ, ವಿಶ್ಲೇಷಣೆ ಮಾಡಲಾಗ್ತಿದೆ.

blank

ಸ್ಲಾಟ್​​​ಗಿರೋ ಪೈಪೋಟಿ ಹಾಗೂ ಏಜ್​ ಫ್ಯಾಕ್ಟರ್​​ನ ಹೊರತಾಗಿಯೂ, ಇವೆರೆಲ್ಲರೂ ಬೆಸ್ಟ್​​ ಕ್ರಿಕೆಟರ್ಸ್​. ದೇಸಿ​ ಹಾಗೂ ಐಪಿಎಲ್​ನಲ್ಲಿ ಇವರು ತೋರಿರುವ ಪ್ರದರ್ಶನವೇ, ಇದಕ್ಕೆ ಸಾಕ್ಷಿಯಾಗಿದೆ. ಹಾಗಾಗಿ ಇವರುಗಳು ಮುಂದೆ ಮತ್ತೇ, ಆಯ್ಕೆಗಾರರ ಕೃಪೆಗೆ ಪಾತ್ರರಾದ್ರೂ ಅಚ್ಚರಿಯಿಲ್ಲ. ಆದ್ರೆ ಪ್ಲೇಯಿಂಗ್​ ಇಲೆವೆನ್​ನಲ್ಲಿ ಅವಕಾಶ ಸಿಗುತ್ತೆ ಅನ್ನೋದು, ಕಷ್ಟ ಸಾಧ್ಯ.

The post ಲಂಕಾ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ರೂ ಈ ಐವರಿಗೆ ಮತ್ತೆ ಅವಕಾಶ ಸಿಗಲ್ವಾ? appeared first on News First Kannada.

Source: newsfirstlive.com

Source link