ಇಶಾಂತ್​​-ಬುಮ್ರಾರನ್ನ ಸೈಡ್​ಲೈನ್​ ಮಾಡ್ತಾರಾ ಸಿರಾಜ್? ಮ್ಯಾನೇಜ್​ಮೆಂಟ್​ ಒಲವು ಯಾರ ಕಡೆ?

ಇಶಾಂತ್​​-ಬುಮ್ರಾರನ್ನ ಸೈಡ್​ಲೈನ್​ ಮಾಡ್ತಾರಾ ಸಿರಾಜ್? ಮ್ಯಾನೇಜ್​ಮೆಂಟ್​ ಒಲವು ಯಾರ ಕಡೆ?

ಇಂಗ್ಲೆಂಡ್​ ಟೆಸ್ಟ್​​ ಸರಣಿಯಲ್ಲಿ ಇಶಾಂತ್​ ಶರ್ಮಾ ಆಡೋದು ಖಚಿತ. ಆದರೆ ಯುವ ಆಟಗಾರನ ಪೈಪೋಟಿಯಿಂದಾಗಿ ಇಶಾಂತ್​ ಸ್ಥಾನ ಕಳೆದುಕೊಳ್ಳೋದೇ ಡೌಟ್ ಎನ್ನಲಾಗ್ತಿದೆ.

ಭಾರತ -ಇಂಗ್ಲೆಂಡ್​​​ ಟೆಸ್ಟ್​ ಸರಣಿ​​ಗೆ ಇನ್ನು ಮೂರು ವಾರಗಳು ಬಾಕಿ ಉಳಿದಿವೆ. ಸದ್ಯ ವಿಶ್ರಾಂತಿಯಲ್ಲಿರುವ ಟೀಮ್​ ಇಂಡಿಯಾ ಜುಲೈ 15ರಂದು ಒಂದೆಡೆ ಸೇರಲಿದ್ದು, ಪೂರ್ಣ ಪ್ರಮಾಣದಲ್ಲಿ ಅಭ್ಯಾಸ ನಡೆಸೋ ಪ್ಲಾನ್​ ಹಾಕಿಕೊಂಡಿದೆ. ಆದರೆ ಫಾಸ್ಟ್​ ಬೌಲರ್​ಗಳ ಕಾಂಬಿನೇಷನ್​ ಕಗ್ಗಂಟಾಗಿ ಪರಿಣಮಿಸಿದ್ದು, ಮೇಜರ್​ ಸರ್ಜರಿಗೆ ಮುಂದಾಗಿದೆ.

blankಪ್ರಸ್ತುತ ವೇಗಿಗಳ ವಿಭಾಗದಲ್ಲಿ ಮೊಹಮ್ಮದ್​ ಶಮಿ, ಇಶಾಂತ್​ ಶರ್ಮಾ, ಜಸ್​ಪ್ರಿತ್​ ಬೂಮ್ರಾ, ಮೊಹಮ್ಮದ್​ ಸಿರಾಜ್​, ಉಮೇಶ್​ ಯಾದವ್​ ಮತ್ತು ಶಾರ್ದೂಲ್​ ಠಾಕೂರ್​ ನಡುವೆ ಸ್ಥಾನಕ್ಕಾಗಿ ಸ್ಪರ್ಧೆ ಏರ್ಪಟ್ಟಿದೆ. ಟೆಸ್ಟ್ ಚಾಂಪಿಯನ್​​ಶಿಪ್​​​ನಲ್ಲೂ​ ಬುಮ್ರಾ, ಇಶಾಂತ್​ ಹಾಗೂ ಶಮಿ ಕಾಂಬಿನೇಷನ್​ನಲ್ಲಿ, ಭಾರತ ಕಣಕ್ಕಿಳಿದಿತ್ತು. ಇದೀಗ ಇಂಗ್ಲೆಂಡ್​​ ಸರಣಿಗೆ ಬೌಲರ್​​ಗಳ ಕಾಂಬಿನೇಷನ್​​ನಲ್ಲಿ​ ಬದಲಾಗುವ ಸಾಧ್ಯತೆ ಇದೆ.

ಸಿರಾಜ್​ ಮೇಲೆ ಟೀಮ್​ ಮ್ಯಾನೇಜ್​ಮೆಂಟ್​ ಒಲವು!
ಮೂಲಗಳ ಪ್ರಕಾರ, ಅನುಭವಿ ಇಶಾಂತ್​ ಶರ್ಮಾರನ್ನ ಬೆಂಚ್​ ಕಾಯಿಸುವ ಸಾಧ್ಯತೆ ಹೆಚ್ಚಿದೆ. ಅವರ ಜಾಗಕ್ಕೆ ಮೊಹಮ್ಮದ್​ ಸಿರಾಜ್​ ಮೇಲೆ ಮ್ಯಾನೇಜ್​​ಮೆಂಟ್​​ಗೆ ಒಲವು ಹೆಚ್ಚಾಗಿದೆ. ಇಂಗ್ಲೆಂಡ್​ ವಿರುದ್ಧ ಸಿರಾಜ್​ ಕಣಕ್ಕಿಳಿಯೋದು ಕನ್ಫರ್ಮ್​ ಎನ್ನಲಾಗ್ತಿದೆ. ಪ್ರಸ್ತುತ ಫಾಸ್ಟ್​ ಬೌಲಿಂಗ್​​ನಲ್ಲಿ ಶಮಿ ನಂತರ 2ನೇ ಆಯ್ಕೆ ಇರೋದು ಸಿರಾಜ್​ ಮಾತ್ರ.​ ಇದರಿಂದ ಸಿರಾಜ್​ ಆಡೋದು ಬಹುತೇಕ ಫಿಕ್ಸ್​ ಅಂತ ಹೇಳಲಾಗ್ತಿದೆ.

blankಇಶಾಂತ್​​-ಬುಮ್ರಾರನ್ನ ಸೈಡ್​ಲೈನ್​ ಮಾಡ್ತಾರಾ ಸಿರಾಜ್​?
ಇಂಗ್ಲೆಂಡ್​ ಸರಣಿ ಮತ್ತು ಟೆಸ್ಟ್​ ಚಾಂಪಿಯನ್​​​ಶಿಪ್​ ಫೈನಲ್​​ನಲ್ಲಿ ಇಶಾಂತ್​, ವಿಕೆಟ್​ಗಾಗಿ ಪರದಾಡಿದ್ರು. ಜೊತೆಗೆ ಬೂಮ್ರಾ ಸಹ ಕಳಪೆ ಪ್ರದರ್ಶನ ನೀಡಿದ್ದಾರೆ. ಬೂಮ್ರಾ, ಇಶಾಂತ್​ಗೆ ಕಂಪೇರ್​​ ಮಾಡಿದ್ರೆ, ಸಿರಾಜ್​​ ಇಂಗ್ಲೀಷ್ ಕಂಡೀಷನ್ಸ್​ಗೆ ಹೇಳಿ ಮಾಡಿಸಿದಂತ ಬೌಲರ್. ಹಾಗಾಗಿ ಸಿರಾಜ್ ಬಗ್ಗೆ ಟೀಮ್ ಮ್ಯಾನೇಜ್​​ಮೆಂಟ್​​ಗೆ ಜಾಸ್ತಿ ಒಲವು.

ಆಸಿಸ್​ ಪ್ರವಾಸದಲ್ಲಿ ತಾನೆಂಥ ಎಫೆಕ್ಟಿವ್​ ಬೌಲರ್​​ ಅನ್ನೋದನ್ನ ಪ್ರೂವ್​ ಮಾಡಿದ್ದಾರೆ. ಹಾಗಿದ್ದರೂ ವಿಶ್ವ ಟೆಸ್ಟ್​ ಚಾಂಪಿಯನ್​​ಶಿಪ್​ ಫೈನಲ್​​ನಲ್ಲಿ ಸಿರಾಜ್​ರನ್ನ ಆಡಿಸದಿರೋದಕ್ಕೆ, ಮಾಜಿ ಕ್ರಿಕೆಟಿಗರಿಂದ ಸಾಕಷ್ಟು ಟೀಕೆ ಕೇಳಿ ಬಂದಿತ್ತು. ಆದ್ರೆ ಇಂಗ್ಲೆಂಡ್​ ವಿರುದ್ಧ ಸಿರಾಜ್,​​ ಪ್ಲೇಯಿಂಗ್​ ಇಲೆವೆನ್​​ನಲ್ಲಿ ಜಾಗ ಪಡೆದುಕೊಳ್ಳುವ ನಿರೀಕ್ಷೆಯಲ್ಲಿದ್ದಾರೆ.

The post ಇಶಾಂತ್​​-ಬುಮ್ರಾರನ್ನ ಸೈಡ್​ಲೈನ್​ ಮಾಡ್ತಾರಾ ಸಿರಾಜ್? ಮ್ಯಾನೇಜ್​ಮೆಂಟ್​ ಒಲವು ಯಾರ ಕಡೆ? appeared first on News First Kannada.

Source: newsfirstlive.com

Source link